ಕರಾವಳಿ

ಮತದಾರರ ಪಟ್ಟಿ ಪರಿಷ್ಕರಣೆ – ವದಂತಿಗಳಿಗೆ ಕಿವಿಗೊಡಬೇಡಿ

Pinterest LinkedIn Tumblr

ಉಡುಪಿ: ಮತದಾರರ ಪಟ್ಟಿಯಲ್ಲಿ ವಿಶೇಷ ಪರಿಷ್ಕರಣೆ-2018 ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಿಂದ ಸಾಗರೋತ್ತರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವಂತೆ ನಿರ್ದೇಶನ ಬಂದಿರುವುದಾಗಿ, ಕೆಲವು ಜನರು ಹಾಗೂ ವಾಟ್ಸಪ್ ಸಂದೇಶಗಳ ಮೂಲಕ ವದಂತಿ ಹಬ್ಬಿಸುತಿದೆ.

ಆದರೆ ಈ ರೀತಿ ಯಾವುದೇ ನಿರ್ದೇಶನವನ್ನು ನೀಡಿರುವುದಿಲ್ಲ. ಸಾಗರೋತ್ತರ ಮತದಾರರ ವಿವರಗಳನ್ನು ಸರಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಪ್ರತ್ಯೇಕವಾಗಿ ಪಟ್ಟಿ ಮಾಡಿ ಇಟ್ಟುಕೊಳ್ಳುವಂತೆ ಮಾತ್ರ ತಿಳಿಸಲಾಗಿರುತ್ತದೆ.

ಮತದಾರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಸ್ವೀಕರಿಸಲಾದ ನಮೂನೆ 6,7,8 ಮತ್ತು 8ಎಯ ವಿವರಗಳನ್ನು ನಮೂನೆ 9,10,11 ಮತ್ತು 11 ಎ ಯಲ್ಲಿ ನಮೂದಿಸಿ ಸಾರ್ವಜನಿಕರ ಮಾಹಿತಿಗಾಗಿ ತಾಲೂಕು ಕಚೇರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರಿಗೆ ಸಂದೇಹಗಳಿದ್ದಲ್ಲಿ ಅದನ್ನು ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

(ಸಾಂದರ್ಭಿಕ ಚಿತ್ರ)

Comments are closed.