ಆರೋಗ್ಯ

ಶುಷ್ಕ ತ್ವಚೆಯ ಸಮಸ್ಯೆ ನಿವಾರಣೆಗೆ ಮನೆ ಮದ್ದು

Pinterest LinkedIn Tumblr

ಚಳಿಗಾಲದಲ್ಲಿ ತ್ವಚೆಯ ಸಮಸ್ಯೆ ಕಾಣಿಸುವುದು ಸಾಮಾನ್ಯ, ಈ ಸಮಯದಲ್ಲಿ ಚರ್ಮ ಒಡೆಯುವುದು, ಬಿರುಕು ಬಿಡುವುದು, ತೇವಾಂಶ ಕಡಿಮೆ ಆಗುವುದು, ಮತ್ತು ತ್ವಚೆಯು ತನ್ನ ಹೊಳಪನ್ನು ಕಳೆದುಕೊಳ್ಳುವುದು ಮುಂತಾದ ಸಮಸ್ಯೆಯನ್ನು ಎದುರಿಸುವ ಸವಾಲು ನಿಮ್ಮದಾಗುತ್ತದೆ.ರಾಸಾಯನಿಕಯುಕ್ತ ಪದಾರ್ಥಗಳನ್ನು ಉಪಯೋಗಿಸುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗಬಹುದು, ಚಿಂತಿಸದಿರಿ ಇದಕ್ಕೆ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿದೆ. ಇದನ್ನು ತಿಳಿಯಲು ಮುಂದೆ ಓದಿ.

೧.ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯು ಚರ್ಮಕ್ಕೆ ಪೋಷಣೆ ನೀಡುವಂತಹ ಮನೆಮದ್ದಾಗಿದೆ. ಚಳಿಗಾಲದಲ್ಲಿ ಒಣಚರ್ಮದ ಸಮಸ್ಯೆ ನಿವಾರಣೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ಇದನ್ನು ತ್ವಚೆಗೆ ಮಸಾಜ್ ಮಾಡಿಕೊಂಡು ಹಾಗೆ ಬಿಡಿ. ಮೃದು ಹಾಗೂ ಕಾಂತಿಯುತ ಚರ್ಮ ಪಡೆಯಲು ಪ್ರತಿದಿನ ಇದನ್ನು ಮಾಡಿ.(ಎಣ್ಣೆಯನ್ನು ಬೆಚ್ಚಗೆ ಮಾಡಿಕೊಳ್ಳುವುದು ಉತ್ತಮ ಫಲಿತಾಂಶವನ್ನು ಕಾಣಲು ಸಹಾಯವಾಗುತ್ತದೆ.)

೨.ಜೇನುತುಪ್ಪ
ಇದು ತನ್ನಲ್ಲಿ ಅನೇಕ ಔಷಧಿಯ ಗುಣಗಳನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆ, ನೀವು ಮಾಡಬೇಕಿರುವುದು ಇಷ್ಟೇ,ನಿಮ್ಮ ತ್ವಚೆಯನ್ನು ನೀರಿನಿಂದ ಚೆನ್ನಾಗಿ ತೊಳೆದು, ಟವೆಲ್ ನಿಂದ ಒರೆಸಿಕೊಳ್ಳಿ, ತ್ವಚೆಯ ಮೇಲೆ ತೇವಾಂಶ ಇಲ್ಲದ ಹಾಗೆ ಮಾಡಿ, ನಂತರ ಜೇನುತುಪ್ಪವನ್ನು ನಿಮ್ಮ ತ್ವಚೆಯ ಮೇಲೆ ಹಾಕಿ, ನಿದಾನವಾಗಿ ತ್ವಚೆಯ ಎಲ್ಲಾ ಭಾಗಕ್ಕೆ ಹಚ್ಚಿ, ಸ್ವಲ್ಪ ಸಮಯ ಅದನ್ನು ಹಾಗೆ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರದಲ್ಲಿ ೩-೪ದಿನ ಮಾಡುವುದರಿಂದ ಬೇಗನೆ ಫಲಿತಾಂಶ ಕಾಣಬಹುದು.

.ಮೊಸರು
ಮೊಸರು ತ್ವಚೆಯ ಸಮಸ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ ಮೈಬಣ್ಣವನ್ನು ಬೆಳ್ಳಗೆ ಮಾಡಲು ಸಹಾಯವಾಗುತ್ತದೆ. ಮೊಸರನ್ನು ನೇರವಾಗಿ ತ್ವಚೆಗೆ ಅನ್ವಯಿಸಿ ೨೦ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

೪.ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಇರುವಂತಹ ಪೋಷಕಾಂಶಗಳು ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಒಳ್ಳೆಯ ಪೋಷಣೆ ನೀಡುವುದು. ಬಾಳೆಹಣ್ಣನ್ನು ಕಿವುಚಿಕೊಂಡು ಅದಕ್ಕೆ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ೧೫-೨೦ ನಿಮಿಷಗಳ ಕಾಲ ಇದನ್ನು ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

೫.ಲೋಲೆಸರ (ಅಲೋವೆರ)
ತ್ವಚೆಯು ಯಾವುದೇ ವಿದವಾಗಿರಲಿ, ಅಂದರೆ ಒಣ ತ್ವಚೆ ಅಥವಾ ಎಣ್ಣೆಯುಕ್ತ ತ್ವಚೆ ಆಗಿರಲಿ, ಲೋಗಸರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ನೀವು ಮಾಡಬೇಕಾಗಿರುವುದು

ಲೋಗಸರದ ಲೋಳೆಯನ್ನು ತೆಗೆದುಕೊಂಡು ಅದನ್ನು ತ್ವಚೆಯ ಮೇಲೆ ನೇರವಾಗಿ ಅನ್ವಯಿಸಿ. ೧೦-೨೦ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.ಇದನ್ನು ಮಾಡುವುದರಿಂದ, ನಿಮ್ಮ ತ್ವಚೆ ಮೃದುವಾಗುವ ಜೊತೆಗೆ ಹೊಳಪನ್ನು ಪಡೆಯುತ್ತದೆ.

೬.ಕೊಬ್ಬರಿ ಎಣ್ಣೆ
ಒಣ ಚರ್ಮ ಇರುವವರಿಗೆ ಚಳಿಗಾಲ ಒಂದು ದುಃಸ್ವಪ್ನವೆ ಸರಿ, ಮೊದಲೇ ಒಣ ಚರ್ಮ ಈ ಚಳಿಯಲ್ಲಿ ಅವರು ಚರ್ಮದಲ್ಲಿ ಮತ್ತಷ್ಟು ಬಿರುಕು ಮತ್ತು ಚರ್ಮ ಎಡೆಯುವುದನ್ನು ಅನುಭವಿಸುವರು. ಕೊಬ್ಬರಿ ಎಣ್ಣೆ ನಮ್ಮ ಪೂರ್ವಜರ ಕಾಲದಿಂದ ಉಪಯೋಗಿಸಿಕೊಂಡು ಬಂದಿರುವ ಒಂದು ನೈಸರ್ಗಿಕ ಮನೆಮದ್ದು.
ನೀವು ಮಾಡಬೇಕಾಗಿರುವುದು

ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಮಾಡಿ ನಿಮ್ಮ ತ್ವಚೆಗೆ ಅನ್ವಯಿಸಿ. ರಾತ್ರಿ ಪೂರ ತ್ವಚೆಯ ಮೇಲೆ ಇರಲು ಬಿಡಿ. ಬೆಳಿಗ್ಗೆ ಎದ್ದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪ್ರತಿದಿನ ಇದನ್ನು ಮಾಡುವುದರಿಂದ ಬೇಗನೆ ಫಲಿತಾಂಶ ಕಾಣಬಹುದು.

Comments are closed.