ಆರೋಗ್ಯ

ಗರ್ಭಿಣಿ ಮಹಿಳೆ ಗರ್ಭಕಂಠ ಬಗ್ಗೆ ತಿಳಿಯಲೇ ಬೇಕಾದ ವಿಷಯಗಳು

Pinterest LinkedIn Tumblr

ಮಗುವಿಗೆ ಜನ್ಮ ನೀಡುವುದು ಮರೆಯಲಾಗದ ಸುಂದರ ಅನುಭವ, ಹಲವು ತಾಯಿಯಂದಿರು ಇದನ್ನೇ ಅನುಭವಿಸುವರು, ಆದರೆ ಇದರ ಜೊತೆಗೆ ಅವರಲ್ಲಿ ಹಲವು ಅನುಮಾನಗಳು ತುಂಬಿಕೊಂಡಿರುವುದು ಸಹಜ. ಇದು ಖಂಡಿತ ನಿಜವಾಗುತ್ತದೆ ನೀವು ಮೊದಲ ಬಾರಿಗೆ ತಾಯಿ ಆಗುತ್ತಿದ್ದರೆ, ಮತ್ತು ಮಗುವಿಗೆ ಜನ್ಮ ನೀಡುವುದರ ಬಗ್ಗೆ ಅಸ್ಪಷ್ಟ ಚಿತ್ರಣ ಇರುತ್ತದೆ.ತಳಮಳ ಅಥವಾ ಗೊಂದಲಕ್ಕೆ ಒಳಗಾಗಬೇಡಿ, ಏಕೆಂದರೆ ನಿಮ್ಮ ದೇಹ ಮಗುವಿಗೆ ಜನ್ಮ ನೀಡಲು ಅವಶ್ಯವಿರುವ ರೀತಿಯಲ್ಲಿ ರಚಿತವಾಗಿದೆ ಇದು ನೈಸರ್ಗಿಕವಾಗಿ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.

ನಿಮ್ಮ ದೇಹ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ಸಮಯದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತದೆ. ನಿಮ್ಮ ದೇಹ ರಚನೆಯಲ್ಲಿ ಗರ್ಭಕಂಠ ಕೂಡ ಒಂದು ಮುಖ್ಯವಾದ ಭಾಗ ಮತ್ತು ಇದು ಹೆರಿಗೆ ಸಂಪೂರ್ಣ ಸಮಯದಲ್ಲಿ ಅತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜನ್ಮ ನೀಡುವ ಸಮಯದಲ್ಲಿ ಗರ್ಭಕಂಠಕ್ಕೆ ಏನಾಗುತ್ತದೆ?
ಇದು ಗರ್ಭಿಣಿ ಮಹಿಳೆಯರು ವೈದ್ಯರಲ್ಲಿ ಕೇಳುವ ಅಗ್ರಗಣ್ಯ ಪ್ರಶ್ನೆ. ಹೆರಿಗೆ ಸಮಯದಲ್ಲಿ ನಿಜಕ್ಕೂ ಏನಾಗುತ್ತದೆ ಎಂಬುದರ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹೆರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಜವಾಗಿಯೂ ಸವಾಲಿನ ಪ್ರಕ್ರಿಯೆ. ಈ ಪ್ರಕ್ರಿಯೆ ಆಗುವಾಗ, ನಿಮ್ಮ ದೇಹ ತುಂಬಾ ಒತ್ತಡಕ್ಕೆ ಒಳಗಾಗುತ್ತದೆ, ಅದು ಮಗುವು ಜನಿಸಲು ಸಿದ್ಧವಾದಾಗ. ಗರ್ಭಕಂಠ, ಇದು ನಿಮ್ಮ ಗರ್ಭಕೋಶ ಮತ್ತು ಯೋನಿಯ ನಡುವೆ ಇರುತ್ತದೆ. ಈ ಪ್ರಕ್ರಿಯೆ ನಡೆಯುವಾಗ ಗರ್ಭಕಂಠ ಕೂಡ ತಾನಾಗಿಯೇ ಮಗುವಿಗೆ ಜನ್ಮ ನೀಡಲು ತಯಾರಾಗುತ್ತದೆ.

ಹೆರಿಗೆ ಸಮಯದಲ್ಲಿ ಗರ್ಭಕಂಠದ ಬದಲಾವಣೆ:
ಹೆರಿಗೆ ಸಮಯದಲ್ಲಿ ನಿಮ್ಮ ಗರ್ಭಕಂಠ ಈ ಕೆಳಗಿನ ಬದಲಾವಣೆಯನ್ನು ಕಾಣುತ್ತದೆ,

೧.ಉದರದೊಳಗೆ ಬೆಳೆಯುವ ಮಗುವನ್ನು ರಕ್ಷಿಸುವ ರೀತಿಯಲ್ಲಿ ಗರ್ಭಕಂಠದ ರಚನೆಯಾಗಿದೆ. ಇದು ಗರ್ಭಾವಸ್ಥೆಯಲ್ಲಿ ಮುಚ್ಚಿಕೊಂಡಿರುತ್ತದೆ ಮತ್ತು ಬೆಳೆಯುತ್ತಿರುವ ಮಗುವಿಗೆ ಮತ್ತು ಗರ್ಭಕೋಶಕ್ಕೆ ಬೆಂಬಲವನ್ನು ನೀಡುತ್ತದೆ.
೨.ಮೊದಲಿಗೆ ಗರ್ಭಕಂಠ ಹಿಂಭಾಗದ ಸ್ಥಿತಿಯಿಂದ ಮುಂಭಾಗದ ಸ್ಥಿತಿಗೆ ಬದಲಾಗುತ್ತದೆ. ಈಗ ಇದು ಯೋನಿಯ ಕಡೆ ಮುಖ ಮಾಡಿದೆ.
೩.ಹೆರಿಗೆ ಸಮಯದಲ್ಲಿ ಗರ್ಭಕೋಶದ ಒತ್ತಡ ಮತ್ತು ಗರ್ಭಾಶಯದ ಕುಗ್ಗುವಿಕೆಗೆ ಗರ್ಭಕಂಠದ ಅಗತ್ಯವಿರುತ್ತದೆ.
೪.ಇದು ಹೊರಹಾಕುವ ಕೆಲಸವನ್ನು ಮಾಡುತ್ತದೆ, ಇದು ಗರ್ಭದ ಗೋಡೆಯ ತೆಳುವಾದ ಪದರವಾಗಿದೆ.
೫.ಗರ್ಭಾವಸ್ಥೆ ಮುಗಿಯುವ ಹಂತ ತಲುಪುವ ಸಮಯದಲ್ಲಿ, ಗರ್ಭಕಂಠವು ಹಣ್ಣಾಗುತ್ತದೆ. ಮತ್ತು ನಾಳವನ್ನು ತಲುಪುತ್ತದೆ, ಅದು ಒಳಗೆ ಆಮ್ನಿಯೋಟಿಕ್ ದ್ರವ ಹೆಚ್ಚಾಗುತ್ತಿದ್ದಂತೆ.
೬.ಇದು ಬಣ್ಣವನ್ನು ಬದಲಿಸಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಮೃದುವಾಗಲು ಶುರುವಾಗುತ್ತದೆ. ಈ ಬದಲಾವಣೆಗಳಿಂದ ಗರ್ಭಕಂಠ ಹಿಗ್ಗಲು ಮತ್ತು ತೆಳುವಾಗಲು ಸಹಾಯವಾಗುತ್ತದೆ. ಹೆರಿಗೆ ಸಮಯದಲ್ಲಿ ಗರ್ಭ ಸಂಕೋಚನಗೊಳ್ಳಲು ಇದು ಸಹಾಯ ಮಾಡುತ್ತದೆ.
೭.ಹೆರಿಗೆ ಸಮಯದಲ್ಲಿ ಗರ್ಭಕಂಠವು ಮಗುವಿನ ತಲೆಯು ಹೊರಗೆ ಬರಲು ೧೦ ಸೆಂಟಿ ಮೀಟರ್ ನಷ್ಟು ಹಿಗ್ಗುವಿಕೆಗೆ ಒಳಗಾಗುತ್ತದೆ.

ಹೆರಿಗೆ ಸಮಯದಲ್ಲಿ ಸಾಂತ್ವನಗೊಳ್ಳಲು ಪರಿಣಾಮಕಾರಿ ಸಲಹೆಗಳು
ಹೆರಿಗೆ ನಿರ್ಣಾಯಕ ಸಮಯ, ನೀವು ಹೆಚ್ಚು ಒತ್ತಡಕ್ಕೆ ಒಳಗಾಗುವುದರಿಂದ ಹೆಚ್ಚು ಅಪಾಯವನ್ನು ನೀವು ಎದುರಿಸಬೇಕಾಗುತ್ತದೆ. ಹೆರಿಗೆ ಸುಲಭವಾಗಿ ಆಗಲು ನೀವು ಆರಾಮವಾಗಿ ಇರುವುದು ಮುಖ್ಯ.

ಹೆರಿಗೆ ಸಮಯದಲ್ಲಿ ಆರಾಮದಾಯಕವಾಗಿರಲು ಕೆಲವು ಸಲಹೆಗಳು ಇಲ್ಲಿವೆ,
೧.ನಿಮ್ಮ ದೇಹದ ಬಗ್ಗೆ ಗಮನವಿರಲಿ, ಮತ್ತು ಅದು ಹೇಳಿದಂತೆ ಕೇಳಿ.
೨.ಮನಸ್ಸನ್ನು ಹಗುರವಾಗಿರಿಸಿ ಮತ್ತು ಮಾನಸಿಕವಾಗಿ ದೈರ್ಯದಿಂದ ಇರಿ, ಎಷ್ಟು ಸಾಧ್ಯ ಅಷ್ಟು ಆರಾಮದಾಯಕವಾಗಿರಲು ಅಥವಾ ವಿಶ್ರಮವಾಗಿರಲು ಪ್ರಯತ್ನಿಸಿ.
೩.ನಿಮಗೆ ಅನಿಸುತ್ತಿರುವುದನ್ನು ಅಥವಾ ನಿಮ್ಮ ಭಾವನೆಯನ್ನು ವೈದ್ಯರ ಬಳಿ ಹೇಳಿ. ಯಾವುದನ್ನೂ ಈ ಸಮಯದಲ್ಲಿ ಮನಸ್ಸಿನಲ್ಲೇ ಇರಿಸಿಕೊಳ್ಳಲು ಬಯಸಬೇಡಿ. ವೈದ್ಯರ ಬಳಿ ಮುಕ್ತವಾಗಿ ವಿವರಿಸಿ, ಹೆರಿಗೆಗೆ ಮುನ್ನ ನಿಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳಿ.
೪.ನಿಮಗೆ ಆರಾಮದಾಯಕವಾದ ಸ್ಥಿತಿಯಲ್ಲಿ ಇರಿ. ನಿಮಗೆ ಆರಾಮದಾಯಕವಾಗಿರುವ ಸ್ಥಿತಿಗೆ ಬದಲಾಗಿ.
೫.ಮಗುವನ್ನು ತಳ್ಳುವಾಗ ಉಸಿರಾಟವನ್ನು ಮರೆಯಬೇಡಿ, ಸರಿಯಾಗಿ ಉಸಿರಾಡುವುದರಿಂದ ಆಮ್ಲಜನಕದ ಪೂರೈಕೆ ಸರಾಗವಾಗಿ ಆಗುತ್ತದೆ.

Comments are closed.