ಕರಾವಳಿ

ತ್ವಚೆ ಎಣ್ಣೆ ಮುಕ್ತ ಮೈಬಣ್ಣವನ್ನು ಪಡೆಯಲು ನೈಸರ್ಗಿಕ ವಿಧಾನ

Pinterest LinkedIn Tumblr

ಎಣ್ಣೆಯುಕ್ತ ವಿಧದ ತ್ವಚೆಗೆ ಹೆಚ್ಚು ಆರೈಕೆಯ ಅಗತ್ಯವಿದೆ. ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ, ಅಥವಾ ಎಣ್ಣೆಯುಕ್ತ ತ್ವಚೆಯು ಬೇಗನೆ ಬ್ಲಾಕ್ ಹೆಡ್, ವೈಟ್ಹೆಡ್ಸ್, ಗುಳ್ಳೆ ಮತ್ತು ಮೊಡವೆಗಳಿಗೆ ತುತ್ತಾಗುತ್ತದೆ. ಅವರು ಏನೇ ಮಾಡಿದರು ಅವರ ಚರ್ಮ ದಪ್ಪವಾಗಿ, ಜಿಡ್ಡಿನ ಹಾಗೆ, ಹೊಳೆಯುವ ಹಾಗೆ ಮತ್ತು ಮಂಕಾಗಿ ಕಾಣುವುದು. ಆದರೆ ಅದರ ಬಗ್ಗೆ ಚಿಂತಿಸಬೇಡಿ, ಇದರಿಂದ ಮುಕ್ತಿ ಪಡೆದು ನಿಮ್ಮ ತ್ವಚೆ ನೈಸರ್ಗಿಕ ಹೊಳಪನ್ನು ಪಡೆಯಲು ಮತ್ತು ಎಣ್ಣೆ-ಮುಕ್ತ ಮೈಬಣ್ಣವನ್ನು ಪಡೆಯಲು ಇಲ್ಲಿ ನೈಸರ್ಗಿಕ ವಿಧಾನಗಳಿವೆ.

೧.ನಿಂಬೆಹಣ್ಣು ಮತ್ತು ಜೇನುತುಪ್ಪ
ನಿಂಬೆಹಣ್ಣು ಮತ್ತು ಜೇನುತುಪ್ಪದ ಮಿಶ್ರಣ ಎಣ್ಣೆಯುಕ್ತ ತ್ವಚೆ ಹೊಳಪನ್ನು ಪಡೆಯಲು ಸುಲಭ ಮತ್ತು ಪರಿಣಾಮಕಾರಿ ಆದ ಒಂದು ನೈಸರ್ಗಿಕ ವಿಧಾನವಾಗಿದೆ. ಒಂದು ಚಮಚ ಜೇನುತುಪ್ಪಕ್ಕೆ ಎರಡು ಚಮಚ ತಾಜಾ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿ.ಇದನ್ನು ಒಂದು ಸಣ್ಣ ಪ್ರಮಾಣದ ಹತ್ತಿಯಿಂದ ಮಿಶ್ರಣದ ರಸವನ್ನು ಹಜ್ಜಿ ಮುಖ ಮತ್ತು ಕತ್ತಿನ ಭಾಗದ ಚರ್ಮಕ್ಕೆ ಅನ್ವಯಿಸಿ(ಹಚ್ಚಿರಿ). ಹಚ್ಚಿದ ನಂತರ ೪ ನಿಮಿಷಗಳ ಕಾಲ ಮಸಾಜ್ ಮಾಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಂಬೆಹಣ್ಣು ಬೇಗನೆ ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದು ತ್ವಚೆಯಲ್ಲಿನ ಎಣ್ಣೆ ಅಂಶವನ್ನು ತೆಗೆಯುವಲ್ಲಿ ಸಹಾಯ ಮಾಡುತ್ತದೆ, ಜೇನುತುಪ್ಪ ತ್ವಚೆಯ ಮೇಲೆ ಅದರಲ್ಲೂ ವಿಶೇಷವಾಗಿ ಮುಖದ ಚರ್ಮದ ಮೇಲೆ ಗುಳ್ಳೆ ಮತ್ತು ಮೊಡವೆ ಬರುವುದನ್ನು ತಡೆಯುತ್ತದೆ.

೨.ಬಿಸಿ ನಿಂಬೆರಸದ ನೀರು
ಎಣ್ಣೆಯುಕ್ತ ಚರ್ಮವು ಗುಳ್ಳೆ ಮತ್ತು ಮೊಡವೆಗಳಿಗೆ ಬೇಗನೆ ಗುರಿಯಾಗುತ್ತದೆ. ಎಣ್ಣೆಯುಕ್ತ ಚರ್ಮವು ಹೊಳಪನ್ನು ಪಡೆಯಲು ಮತ್ತು ಮೊಡವೆ ಒಡೆಯುವುದನ್ನು ತಪ್ಪಿಸಲು ಇರುವ ಮತ್ತೊಂದು ಸುಲಭ ಮತ್ತು ಸರಳ ಮನೆ ಮದ್ದು ಅಥವಾ ನೈಸರ್ಗಿಕ ವಿಧಾನವೆಂದರೆ, ಬೆಳಗಿನ ಜಾವ ಖಾಲಿ ಹೊಟ್ಟೆಗೆ ಬಿಸಿ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯುವುದು. ಇವು ತ್ವಚೆಯನ್ನು ಶುಚಿಯಾಗಿರಿಸುವ ಜೊತೆಗೆ ಹೊಳಪನ್ನು ನೀಡುತ್ತದೆ.

೩.ಐಸ್ ಕ್ಯೂಬ್ ಫೆಸಿಯಲ್
ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರು ದೊಡ್ಡದಾದ ರಂಧ್ರವನ್ನು ಹೊಂದುವರು ಇದಕ್ಕೆ ಅವರಲ್ಲಿರುವ ಕೊಬ್ಬಿನ ಅಥವಾ ಮೇದಸ್ಸಿನ ಗ್ರಂಥಿಗಳೇ ಕಾರಣ. ಇದು ಚರ್ಮವನ್ನು ಮಂಕಾಗಿ, ಒರಟಾಗಿ ಮತ್ತು ನಯವಿಲ್ಲದಂತೆ ಕಾಣುವಂತೆ ಮಾಡುತ್ತದೆ. ಈ ಸಲಹೆಯನ್ನು ಬೆಳಗ್ಗೆ ಮುಖ ತೊಳೆದ ನಂತರ ಪ್ರಯತ್ನಿಸಿ. ಒಂದು ತೆಳುವಾದ ಹತ್ತಿ ಬಟ್ಟೆಗೆ ಎರಡು ಅಥವಾ ಮೂರು ಐಸ್ ಕ್ಯೂಬ್ ಅನ್ನು ಹಾಕಿ, ಎರಡರಿಂದ ಮೂರು ನಿಮಿಷಗಳ ಕಾಲ ಉಜ್ಜಿರಿ. ನಿಮ್ಮ ತ್ವಚೆಯ ಮೇಲೆ ಎಣ್ಣೆ ಅಂಶ ಹೆಚ್ಚಾಗಿರುವ ಜಾಗದಲ್ಲಿ ಹೆಚ್ಚು ಉಜ್ಜಿರಿ.

ಇದನ್ನು ಮಾಡುವುದರಿಂದ ದೊಡ್ಡದಾಗಿರುವ ರಂದ್ರಗಳು ಸಂಕುಚಿತಗೊಳ್ಳುತ್ತವೆ, ಮೊಡವೆಗಳು ಕಡಿಮೆಯಾಗುತ್ತವೆ, ಮುಖದ ಭಾಗದಲ್ಲಿ ರಕ್ತಸಂಚಲನ ಸರಾಗವಾಗಿ ಆಗುವಂತೆ ಮಾಡುತ್ತದೆ. ಇದು ಸುಲಭವಾದ ಉಪಾಯವಾಗಿದೆ ಆದರೆ ಈ ಚಳಿಯಲ್ಲಿ ಇದನ್ನು ಮಾಡುವುದು ಕಷ್ಟ. ಬೇಸಿಗೆಯಲ್ಲಿ ಇದು ಉತ್ತಮ ಉಪಾಯ.

೪.ಶ್ರೀಗಂಧ
ಎಣ್ಣೆಯುಕ್ತ ಚರ್ಮಕ್ಕೆ ಶ್ರೀಗಂಧ ಅತ್ಯುತ್ತಮ ನೈಸರ್ಗಿಕ ಪದಾರ್ಥವಾಗಿದೆ. ನಂಜುನಿರೋಧಕ, ಉರಿಯೂತದ ನಿರೋಧಕ, ಹಿತವಾದ ಗುಣಗಳು ತ್ವಚೆಯ ನ್ಯೂನತೆಗಳನ್ನು ತಡೆಯುತ್ತದೆ ಮತ್ತು ಹೊಳಪನ್ನು ಹೆಚ್ಚಿಸುವ ಜೊತೆಗೆ ಮೈಬಣ್ಣವನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ.ಸ್ವಲ್ಪ ಗುಲಾಬಿ ರಸಕ್ಕೆ ಒಂದು ಚಮಚದಷ್ಟು ಶ್ರೀಗಂಧದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖದ ಪೂರ ಮತ್ತು ಕತ್ತಿನ ಭಾಗದಲ್ಲಿ ಹಚ್ಚಿಕೊಳ್ಳಿ. ಇದು ಎಣ್ಣೆ ಅಂಶವನ್ನು ಕಡಿಮೆ ಮಾಡಿ ತ್ವಚೆಯ ಹೊಳಪನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.

Comments are closed.