ಆರೋಗ್ಯ

ಆರೋಗ್ಯಕರ ಜೀವನಕ್ಕೆ ಈ ಹಾಲಿನ ಸೇವನೆ ಉತ್ತಮ

Pinterest LinkedIn Tumblr

ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ನ ವಿವಿಧ ಮಾದರಿಗಳನ್ನು ಒಳಗೊಂಡಿರುವ ಕಬ್ಬಿನ ಹಾಲು ಶರೀರದ ಹಲವಾರು ಕಾರ್ಯ ನಿರ್ವಹಣೆಗಳಿಗೆ ಅಗತ್ಯವಾಗಿರುವ ನಾರನ್ನೂ ಹೊಂದಿದೆ. ಕಬ್ಬಿನ ಹಾಲನ್ನು ಇಷ್ಟಪಡದವರು ಯಾರಾದರೂ ಇದ್ದಾರಾ? ಒಂದು ಗ್ಲಾಸ್ ಕಬ್ಬಿನ ಹಾಲಿನ ಸೇವನೆ ನಮಗೆ ತಾಜಾತನ ನೀಡುತ್ತದೆ. ಅದು ಅತ್ಯಂತ ಆರೋಗ್ಯಕರ ಪೇಯ ಗಳಲ್ಲೊಂದಾಗಿದೆ.

ಕಬ್ಬಿನ ಹಾಲಿನಲ್ಲಿ ಕಾರ್ಬೊಹೈಡ್ರೇಟ್, ಪ್ರೋಟಿನ್ ಹಾಗೂ ರಂಜಕ, ಕ್ಯಾಲ್ಶಿಯಂ, ಕಬ್ಬಿಣ, ಸತುವು ಮತ್ತು ಪೊಟ್ಯಾಷಿಯಂಗಳಂತಹ ಖನಿಜಗಳು ಸಮೃದ್ಧವಾಗಿವೆ. ಸಕ್ಕರೆ ಗಿಂತ ಕಬ್ಬಿನ ಹಾಲು ಹೆಚ್ಚು ಆರೋಗ್ಯಕರವಾಗಿದೆ.ಈ ಅದ್ಭುತ ಪೇಯದ ಲಾಭಗಳು ಇಲ್ಲಿವೆ.

ಕೊಲೆಸ್ಟ್ರಾಲ್ನ್ನು ತಗ್ಗಿಸುತ್ತದೆ:
ಕಬ್ಬಿನ ಹಾಲಿನ ಸೇವನೆಯು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ದೂರಮಾಡುತ್ತದೆ.

ಮೂಳೆಗಳನ್ನು ಬಲಗೊಳಿಸುತ್ತದೆ
ಕಬ್ಬಿನ ಹಾಲಿನಲ್ಲಿ ಸಮೃದ್ಧವಾಗಿರುವ ಕ್ಯಾಲ್ಶಿಯಂ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ಹಲ್ಲುಗಳನ್ನು ಬಲಗೊಳಿಸುತ್ತದೆ. ಕಬ್ಬನ್ನು ಜಗಿದು ತಿನ್ನುವುದರಿಂದ ವಸಡುಗಳು ಗಟ್ಟಿಯಾಗುತ್ತವೆ.

ಮೊಡವೆಗಳ ನಿವಾರಣೆಗೆ ಸಹಾಯಕ:
ಇದು ಅಚ್ಚರಿಯೆನಿಸಬಹುದು, ಆದರೆ ಮೊಡವೆಗಳಿಂದ ಪಾರಾಗಲು ಕಬ್ಬಿನ ಹಾಲು ನೆರವಾಗುತ್ತದೆ ಎನ್ನುವುದು ಸತ್ಯ. ಬಿಳಿಯ ರಕ್ತಕಣಗಳನ್ನು ಹೆಚ್ಚಿಸುವ ಆಲ್ಫಾ-ಹೈಡ್ರಾಕ್ಸಿ ಆಮ್ಲಗಳನ್ನು ಒಳಗೊಂಡಿರುವ ಕಬ್ಬಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರದಲ್ಲಿಯ ನಂಜು ನಿವಾರಣೆಯಾಗುತ್ತದೆ ಹಾಗೂ ಚರ್ಮದ ಉರಿಯೂತ ಮತ್ತು ಸೋಂಕು ಮಾಯವಾಗುತ್ತವೆ.

ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ
ಕಬ್ಬಿನ ಹಾಲಿನ ಸೇವನೆಯು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ. ಅದರಲ್ಲಿ ಹೇರಳವಾಗಿರುವ ಖನಿಜಗಳು ಹಲ್ಲಿನ ಎನಾಮಲ್ ನಿರ್ಮಾಣದಲ್ಲಿ ನೆರವಾಗುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕಬ್ಬಿನ ಹಾಲಿನಲ್ಲಿ ಸಮೃದ್ಧವಾಗಿರುವ ಆಯಂಟಿ ಆಕ್ಸಿಡಂಟ್ಗಳು ಸೋಂಕಿನ ವಿರುದ್ಧ ಹೋರಾಡುತ್ತವೆ ಮತ್ತು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅದು ಕಾಮಾಲೆಯಂತಹ ಎಲ್ಲ ಬಗೆಯ ಸೋಂಕುಗಳ ವಿರುದ್ಧ ಯಕೃತ್ತಿಗೆ ರಕ್ಷಣೆಯನ್ನೂ ನೀಡುತ್ತದೆ. ಅದರ ಸೇವನೆಯು ಶರೀರವು ಕಳೆದುಕೊಂಡಿರುವ ಪೋಷಕಾಂಶಗಳು ಮತ್ತು ಪ್ರೋಟಿನ್ಗಳನ್ನು ಮರುಪೂರಣ ಮಾಡುತ್ತದೆ.

ತಕ್ಷಣ ಶಕ್ತಿಯನ್ನು ನೀಡುತ್ತದೆ
ಕಬ್ಬಿನ ಹಾಲು ನಮ್ಮ ಶರೀರಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ ಮತ್ತು ಇದು ಬೇಸಿಗೆಯಲ್ಲಿ ಜನರು ಕಬ್ಬಿನ ಹಾಲನ್ನು ಹೆಚ್ಚೆಚ್ಚಾಗಿ ಕುಡಿಯಲು ಕಾರಣಗಳಲ್ಲೊಂದಾಗಿದೆ. ಅದು ಶರೀರವನ್ನು ನಿರ್ಜಲೀಕರಣದಿಂದ ಪಾರುಮಾಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ನೆರವು
ಕಬ್ಬಿನ ಹಾಲಿನಲ್ಲಿರುವ ಕ್ಯಾಲ್ಶಿಯಂ, ಮ್ಯಾಗ್ನೀಷಿಯಂ, ಪೊಟ್ಯಾಷಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ಗಳಿಂದಾಗಿ ಅದು ಕ್ಷಾರೀಯ ಗುಣಗಳನ್ನು ಹೊಂದಿದೆ. ಇದರೊಂದಿಗೆ ಫ್ಲಾವನಾಯ್ಡಾಗಳನ್ನೂ ಹೊಂದಿರುವುದರಿಂದ ಅದು ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ಗಳಿಗೆ ಕಾರಣವಾಗುವ ಜೀವಕೋಶಗಳನ್ನು ನಿರ್ಮೂಲಿಸುತ್ತದೆ.

ಮಧುಮೇಹ ಚಿಕಿತ್ಸೆಗೆ ನೆರವಾಗುತ್ತದೆ
ಕಬ್ಬಿನ ಹಾಲು ಎಷ್ಟೇ ಸಿಹಿಯಾಗಿರಲಿ, ಅದು ಮಧುಮೇಹ ರೋಗಿಗಳ ಪಾಲಿಗೆ ಅತ್ಯುತ್ತಮವಾಗಿದೆ. ಅದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿದ್ದು, ಇವು ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚುವುದನ್ನು ತಡೆಯುತ್ತವೆ.

ಯುಟಿಐ ಮತ್ತು ಎಸ್ಟಿಡಿ ನೋವುಗಳನ್ನು ಕಡಿಮೆ ಮಾಡುತ್ತದೆ.
ಮೂತ್ರನಾಳದ ಸೋಂಕುಗಳು(ಯುಟಿಐ), ಮೂತ್ರಪಿಂಡ ಕಲ್ಲುಗಳು ಮತ್ತು ಲೈಂಗಿಕ ರೋಗ(ಎಸ್ಟಿಡಿ)ಗಳಿಂದ ನರಳುತ್ತಿರುವವರು ಕಬ್ಬಿನ ಹಾಲಿಗೆ ಸ್ವಲ್ಪ ನೀರು, ಲಿಂಬೆ ರಸ ಮತ್ತು ಸೀಯಾಳದ ನೀರನ್ನು ಬೆರೆಸಿ ನಿತ್ಯವೂ ಕುಡಿಯುವುದರಿಂದ ಈ ರೋಗಗಳನ್ನು ಶಮನಗೊಳಿಸುತ್ತದೆ ಮತ್ತು ಇವುಗಳಿಂದಾಗುವ ನೋವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ಕೆ ಸಹಕಾರಿ
ಪ್ರತಿ ದಿನ ಕಬ್ಬಿನಹಾಲನ್ನು ಕುಡಿಯುವದರಿಂದ ಅಜೀರ್ಣದ ಸಮಸ್ಯೆಗಳಿಂದ ನೆಮ್ಮದಿಯನ್ನು ಪಡೆಯಬಹುದು. ಅದರಲ್ಲಿಯ ವಿರೇಚಕ ಗುಣಗಳು ಕರುಳಿನಲ್ಲಿಯ ಉರಿಯೂತವನ್ನು ಶಮನಗೊಳಿಸಿ, ಮಲಬದ್ಧತೆ, ಹೊಟ್ಟೆಯುಬ್ಬರ ಮತ್ತು ಹೊಟ್ಟೆಯಲ್ಲಿ ಕಿವಿಚುವಿಕೆಯಿಂದ ಮುಕ್ತಿ ನೀಡುತ್ತವೆ. ಕಬ್ಬಿನ ಹಾಲಿನಲ್ಲಿರುವ ಪೊಟ್ಯಾಷಿಯಂ ಹೊಟ್ಟೆಯ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

Comments are closed.