ಆರೋಗ್ಯ

ಶ್ವಾಸಕೋಶಗಳನ್ನು ಸ್ವಚ್ಚಗೊಳಿಸಲು ಈ ನಿಯಮ ಪಾಲಿಸಿ, ಆರೋಗ್ಯವಾಗಿರಿ..

Pinterest LinkedIn Tumblr

ಪ್ರಸ್ತುತ ವಾಯುಮಾಲಿನ್ಯ ವಾತಾವರಣದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಪರಿಸರವಷ್ಟೇ ಅಲ್ಲ, ನಮಗೂ ಅನಾರೋಗ್ಯ ಸಮಸ್ಯೆಗಳು ಬರುತ್ತಿವೆ. ಕೇವಲ ವಾಯುಮಾಲಿನ್ಯದಿಂದ ಮಾತ್ರವಲ್ಲದೆ, ಧೂಮಪಾನ, ಮದ್ಯಪಾನದಿಂದ, ಇತರೆ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಗಳಿಂದ ಶ್ವಾಸಕೋಶ ಸಮಸ್ಯೆಗಳು ಬರುತ್ತಿವೆ. ಈ ಮೂಲಕ ಅದು ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಆದರೆ ಕೆಳಗೆ ಹೇಳಿರುವ ಸೂಚನೆಗಳನ್ನು ಪಾಲಿಸಿದರೆ ಅದರಿಂದ ಶ್ವಾಸಕೋಶಗಳು ತುಂಬಾ ಎಫೆಕ್ಟೀವ್ ಆಗಿ ಕೇವಲ 72 ಗಂಟೆಗಳಲ್ಲಿ ಸ್ವಚ್ಚಗೊಳಿಸಿಕೊಳ್ಳಬಹುದು. ಅದಕ್ಕಾಗಿ ಏನು ಮಾಡಬೇಕೆಂದು ಈಗ ನೋಡೋಣ.

1. ಡೈರಿ ಉತ್ಪನ್ನಗಳು
ಹಾಲು, ಹಾಲಿಗೆ ಸಂಬಂಧಿಸಿದ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆಯಂತಹವನ್ನು ತೆಗೆದುಕೊಳ್ಳಬಾರದು. ಇವುಗಳಲ್ಲಿರುವ ಕೆಲವು ವಿಧದ ಪದಾರ್ಥಗಳು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತವೆ. ಇವುಗಳನ್ನು ಆಹಾರದಿಂದ ಕೈಬಿಡುವುದು ಒಳ್ಳೆಯದು.

2. ಗ್ರೀನ್ ಟೀ
ನಿತ್ಯ 2 ಕಪ್ ಗ್ರೀ ಟೀ ಸೇವಿಸಬೇಕು. ಇದರಿಂದ ಶ್ವಾಸಕೋಶಗಳಲ್ಲಿರುವ ವ್ಯರ್ಥಗಳು ಹೊರಗೆ ಹೋಗುತ್ತವೆ…ಅವು ಸ್ವಚ್ಛವಾಗುತ್ತವೆ.

3. ನಿಂಬೆರಸ
ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಶ್ವಾಸಕೋಶಗಳು ಸ್ವಚ್ಛವಾಗುತ್ತವೆ.

4. ಕ್ಯಾರೆಟ್ ಜ್ಯೂಸ್
ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ, ಮಧ್ಯಾಹ್ನ ಊಟಕ್ಕೆ 30 ನಿಮಿಷಗಳ ಮುಂಚೆ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯಬೇಕು. ಈ ರೀತಿ ಮಾಡಿದರೆ ಶ್ವಾಸಕೋಶಗಳು ಕ್ಲೀನ್ ಆಗುತ್ತವೆ.

5. ಪೊಟ್ಯಾಷಿಯಂ
ಆರೇಂಜ್, ಬಾಳೆಹಣ್ಣು, ಗೆಡ್ಡೆ ಗೆಣಸು, ಕ್ಯಾರೆಟ್ ಇನ್ನಿತರೆ ಪೊಟ್ಯಾಷಿಯಂ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ತಿಂದರೆ ಶ್ವಾಸಕೋಶಗಳು ಕ್ಲೀನ್ ಆಗಿ ಆರೋಗ್ಯವಾಗಿರುತ್ತದೆ.

6. ಶುಂಠಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿರಸ ಸೇವಿಸಿದರೆ ಶ್ವಾಸಕೋಶಗಳು ಕ್ಲೀನ್ ಆಗುತ್ತವೆ. ವಿಷ ಪದಾರ್ಥಗಳು ಹೊರೆಗೆ ಹೋಗುತ್ತವೆ.

7. ಪುದೀನಾ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 4, 5 ಪುದೀನಾ ಎಲೆಗಳನ್ನು ಹಾಗೆಯೇ ಜಗಿದು ತಿನ್ನಬೇಕು. ಈ ರೀತಿ ಮಾಡಿದರೂ ಶ್ವಾಸಕೋಶಗಳು ಸ್ವಚ್ಛವಾಗುತ್ತವೆ.

8. ಹರಳೆಣ್ಣೆ
ಸ್ವಲ್ಪ ಹರಳೆಣ್ಣೆ ತೆಗೆದುಕೊಂಡು, ಸಂಜೆ ಎದೆ ಮೇಲೆ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಬೇಕು. ಇದರಿಂದ ಶ್ವಾಸಕೋಶಗಳು ಕ್ಲೀನ್ ಆಗುತ್ತವೆ.

ಮೇಲೆ ತಿಳಿಸಿರುವ ಸೂಚನೆಗಳಲ್ಲಿ ಕನಿಷ್ಟ 4 ಸೂಚನೆಗಳನ್ನು 3 ದಿನಗಳ ಕಾಲ ಪಾಲಿಸಿದರೆ ಸಾಕು, ವ್ಯತ್ಯಾಸ ನಿಮಗೇ ಗೊತ್ತಾಗುತ್ತದೆ. ಆದರೆ ಈ ಸೂಚನೆಗಳನ್ನು ಪಾಲಿಸಬೇಕಾದವರು ಧೂಮಪಾನ ಮಾಡುವಂತಿಲ್ಲ. ಮದ್ಯಪಾನವೂ ಅಷ್ಟೇ.

Comments are closed.