ಕರಾವಳಿ

ಉಳ್ಳಾಲ : ವಿದ್ಯಾರ್ಥಿನಿಯನ್ನು ಕಟ್ಟಿಹಾಕಿ ನಗದು ಹಾಗೂ ಎಟಿಎಮ್ ಕಾರ್ಡ್ ದರೋಡೆ

Pinterest LinkedIn Tumblr

ಸಾಂದರ್ಭಿಕ ಚಿತ್ರ

ಮಂಗಳೂರು / ಉಳ್ಳಾಲ,ಡಿಸೆಂಬರ್ 6 : ಖಾಸಗಿ ಕಾಲೇಜಿನ ಮಹಿಳಾ ಹಾಸ್ಟೆಲ್ ಕೊಠಡಿಗೆ ನುಗ್ಗಿದ ದುಷ್ಕರ್ಮಿಯೋರ್ವ ಕೊಠಡಿಯೊಳಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಬೆದರಿಸಿ ನಗದು ಹಾಗೂ ಎಟಿಎಮ್ ಕಾರ್ಡ್ ದರೋಡೆಗೈದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿ ನಡೆದಿದೆ.

ದೇರಳಕಟ್ಟೆಯಲ್ಲಿರುವ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಸೌದಿ ಮೂಲದ ನಿಶಾನ ಚಾಕಂ ದರೋಡೆಗೊಳಪಟ್ಟಿದ್ದು, ಕಾಲೇಜು ಸಮೀಪವಿರುವ ಹಾಸ್ಟೆಲ್‌ನಲ್ಲಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ.

ಹಾಸ್ಟೆಲ್ ಕೊಠಡಿಯೊಳಗೆ ತಂಗಿದ್ದ ವಿದ್ಯಾರ್ಥಿನಿಗೆ ಬಾಗಿಲು ಬಡಿಯುವುದು ಕೇಳಿದ್ದು, ಹಾಸ್ಟೆಲ್ ಸಿಬ್ಬಂದಿಯಾಗಿರ ಬಹುದೆಂದು ಆಕೆ ಬಾಗಿಲು ತೆರೆದಾಗ ಏಕಾಏಕಿ ಒಳನುಗ್ಗಿದ ಅಪರಿಚಿತ ವ್ಯಕ್ತಿ ವಿದ್ಯಾರ್ಥಿನಿಯನ್ನು ಬೆದರಿಸಿದ್ದಾನೆ. ಆಕೆ ಬೊಬ್ಬೆ ಹಾಕಲು ಯತ್ನಿಸಿದಾಗ ಆತ ಅಕೆಯ ಬಾಯಿಯನ್ನು ಕೈಯಲ್ಲಿ ಬಿಗಿಯಾಗಿ ಮುಚ್ಚಿ ಕಬ್ಬಿಣದ ರಾಡ್‌ನಿಂದ ಅಕೆಯ ಮೇಲೆ ಹಲೆ ಮಾಡಿದ್ದಾನೆ.

ಈ ವೇಳೆ ನಿಶಾನ ಚಾಕಂ ಸಹಾಯಕ್ಕಾಗಿ ಕೂಗಲು ಯತ್ನಿಸಿದಾಗ ಆಕೆಯ ಬಾಯಿಗೆ ಬಟ್ಟೆ ತುರುಕಿ ಹಗ್ಗದಿಂದ ಕಟ್ಟಿ ಹಾಕಿ, 5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಇಲ್ಲವೆಂದಾಗ ಅಲ್ಲಿ-ಇಲ್ಲಿ ಜಾಲಾಡಿ ಮೂರು ಸಾವಿರ ನಗದು, ಎಟಿಎಂ ಕಾರ್ಡ್‌ಅನ್ನು ದೋಚಿ ಪರಾರಿಯಾಗಿದ್ದಾನೆ. ಹೋಗುವಾಗ ಅಕೆಯನ್ನು ಬೆದರಿಸಿ ಎಟಿಎಂ ಕಾರ್ಡ್ನ ಪಿನ್ ನಂಬ್ರವನ್ನು ಪಡೆದುಕೊಂಡು ಹೋಗಿದ್ದಾನೆ.

ಇದೀಗ ವಿದ್ಯಾರ್ಥಿನಿಯ ದೂರಿನ ಮೇರೆಗೆ ಉಳ್ಳಾಲ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದೆ, ಉಳ್ಳಾಲ ಪೊಲೀಸರು ಆರೋಪಿಯ ಪತ್ತೆಗೆ ಸಿಸಿಟಿವಿಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

Comments are closed.