ಆರೋಗ್ಯ

ಕಂದಮ್ಮಗಳ ಕಣ್ಣಿನಲ್ಲಿ ದೋಷವಿರುವ ಕೆಲವು ಚಿಹ್ನೆಗಳು ಮತ್ತು ದೃಷ್ಟಿ ಬೆಳವಣಿಗೆಯ ಹಂತಗಳು

Pinterest LinkedIn Tumblr

ನಿಮ್ಮ ಮುದ್ದು ಕಂದಮ್ಮ ಈಗ ನಿಮ್ಮ ಕಣ್ಮುಂದೆ ಆಡುತ್ತಿದೆ, ಒಂದು ಆರಾಧನೀಯ ವಿಷಯವೆಂದರೆ, ನಿಮ್ಮ ಪುಟ್ಟ ಕಂದ ತನ್ನ ಸಣ್ಣ ಗೋಲಿಯಂತೆ ಇರುವ ಕಣ್ಣುಗಳಿಂದ ನಿಮ್ಮನ್ನು ಮತ್ತು ತನ್ನ ಸುತ್ತಲೂ ಇರುವುದನ್ನು ಗಮನಿಸುತ್ತಿರುವುದನ್ನು ನೋಡುವುದು.

ಪೋಷಕರಾಗಿ ನಿಮಗೆ ಮತ್ತು ಹಲವರಿಗೆ ಕುತೂಹಲ ಮತ್ತು ಗೊಂದಲ ಇರುವುದು ಸಹಜ, ಪುಟ್ಟ ಕಂದ ಹೇಗೆ ನಮ್ಮನ್ನು ಗುರುತಿಸಿವುದು ಆ ಪುಟ್ಟ ಕಣ್ಗಳು ನಮ್ಮನ್ನು ಎಷ್ಟು ಆಕರ್ಷಣೆ ಮಾಡುವುದು ಅಷ್ಟೇ ಕುತೂಹಲವನ್ನು ಮೂಡಿಸುವುದು ಸುಳ್ಳಲ್ಲ.

ಶಿಶುಗಳು ನೋಡಲು ಯಾವಾಗ ಪ್ರಾರಂಭಿಸುತ್ತವೆ?
ವಯಸ್ಕ ಮಾನವನಂತೆ ಶಿಶುಗಳಿಗೂ ಕೂಡ ವರ್ಣರಂಜಿತ ಅಂದರೆ ಬಣ್ಣಗಳನ್ನು ಗುರುತಿಸುವ ಶಕ್ತಿಯನ್ನು ತಮ್ಮ ೯ನೇ ತಿಂಗಳಲ್ಲಿ ಪಡೆದುಕೊಳ್ಳುತ್ತವೆ, ಮತ್ತು ತನ್ನ ಮೊದಲನೇ ವರ್ಷದಲ್ಲಿ ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿಕೊಳ್ಳುತ್ತದೆ.

ಶಿಶುವು ತನ್ನ ಜನ್ಮ ದಿನದಿಂದಲೇ ತನ್ನ ಮೊದಲ ನೋಟವನ್ನು ನೋಡಲು ಶುರು ಮಾಡುತ್ತದೆ, ಆದರೆ ಶಿಶುವಿನ ಮೆದುಳು ಸಂಕೀರ್ಣ ಮತ್ತು ಎಲ್ಲ ವಿಷಯಗಳನ್ನು ಗ್ರಹಿಸಲು ಅರ್ಥಮಾಡಿಕೊಳ್ಳಲು ಇನ್ನು ಅಭಿವೃದ್ಧಿ ಆಗಿರುವುದಿಲ್ಲ. ಶಿಶುಗಳು ಬಣ್ಣವನ್ನ ಗುರುತಿಸಲು ಹುಟ್ಟಿನಿಂದಲೇ ಶಕ್ತವಾಗಿದ್ದರು, ಆದರೆ ಅದು ಕೆಲವು ಬಣ್ಣಗಳಿಗೆ ಮಾತ್ರ ಸೀಮಿತವಾಗಿರುತ್ತದೆ, ಮತ್ತು ಅದು ಸ್ಪಷ್ಟವಾಗಿ ಮಗುವಿಗೆ ಗೋಚರಿಸುವುದಿಲ್ಲ.

ಜನನದಲ್ಲಿ ಮಗುವಿನ ದೃಷ್ಟಿ
1.ಮೊಟ್ಟ ಮೊದಲ ಕಣ್ಣು – ನಿಮ್ಮ ಶಿಶುವಿನ ಕಣ್ಣುಗಳು ನಿಮ್ಮ ಗರ್ಭಾವಸ್ಥೆಯ ೨೨ನೇ ದಿನದಿಂದ ಬೆಳೆಯಲು ಪ್ರಾರಂಭವಾಗುತ್ತದೆ. ಇದು ಕಣ್ಣು ಬೆಳೆಯಲು ಸಹಾಯವಾಗಲು ಪೂರ್ವಭಾವಿಯಾಗಿ ಬೆಳೆಯುವ ಅಂಗ.
2.ಜನ್ಮದ ಕಣ್ಣಿನ ದೋಷಗಳ ಪರೀಕ್ಷೆ – ನಿಮ್ಮ ಮಗು ಜನಿಸಿದ ಕ್ಷಣ ವೈದ್ಯರು ಹುಟ್ಟು ಕುರುಡು ಅಥವಾ ಕಣ್ಣಿನ ಜನ್ಮ ದೋಷಗಳನ್ನು ಪರೀಕ್ಷಿಸುವರು, ಇದು ಕಣ್ಣಿಗೆ ಗರ್ಭದಲ್ಲಿ ಸಂಭವಿಸಬಹುದಾದ ಅಸ್ವಸ್ಥೆಗಳು. ಇದನ್ನು ಸರಿಪಡಿಸಲು ವೈದ್ಯರು ಕಣ್ಣಿನ ಡ್ರಾಪ್ಸ್ ಗಳನ್ನು ಹಾಕಲು ಸಲಹೆ ನೀಡುವರು(ಸೋಂಕಿನಿಂದ ಮಗುವನ್ನು ರಕ್ಷಿಸಲು).
3.ನವಜಾತ ಶಿಶುಗಳು ಹೇಗೆ ನೋಡುತ್ತವೆ – ಜನನದಲ್ಲಿ, ಶಿಶುಗಳು ಬರಿ ಬೂದು, ಕಪ್ಪು ಮತ್ತು ಬಿಳಿ ಬಣ್ಣವನ್ನು ಮಾತ್ರ ಗುರುತಿಸಬಲ್ಲರು. ಇದು ಏಕೆಂದರೆ, ಶಿಶುವಿನಲ್ಲಿನ ನರಕೋಶಗಳು(ಮೆದುಳಿನ) ಮತ್ತು ಕಣ್ಣಿನ ನರ ಇನ್ನು ಸಂಪೂರ್ಣವಾಗಿ ಅಭಿವೃದ್ಧಿ ಆಗಿರುವುದಿಲ್ಲ.
4.ಸೀಮಿತ ದೃಷ್ಟಿ – ಪ್ರಾರಂಭದಲ್ಲಿ ಶಿಶುವು ಸ್ವಲ್ಪ ದೂರ ಮಾತ್ರ ಅಂದರೆ ಕೆಲವು ಇಂಚುಗಳಷ್ಟು ದೂರ ಮಾತ್ರ ನೋಡಲು ಸಾಧ್ಯವಿರುತ್ತದೆ.

ಶಿಶುವಿನ ಕಣ್ಣಿನಲ್ಲಿ ದೋಷವಿರುವ ಕೆಲವು ಚಿಹ್ನೆಗಳು
ಶಿಶುವಿನ ಕಣ್ಣು ಇನ್ನು ಅಭಿವೃದ್ಧಿ ಆಗುತ್ತಿರುವ ಕಾರಣ ಯಾವುದಾದರು ವೈಪರೀತ್ಯಗಳು ಅಥವಾ ಅಸ್ವಸ್ಥೆಗಳ ಬಗ್ಗೆ ನಿಮ್ಮ ಮಗುವನ್ನು ನೀವು ಗಮನಿಸುತ್ತಿರುವುದು ಒಳ್ಳೆಯದು. ಈ ಕೆಳಗಿನ ಚಿಹ್ನೆಗಳನ್ನು ನಿಮ್ಮ ಮಗುವು ತೋರಿಸಿದರೆ ಅವನಿಗೆ/ಅವಳಿಗೆ ಕಣ್ಣಿನ ತೊಂದರೆ ಇದೆ ಎಂದು ಹೇಳಬಹುದು.

1.ಕೆಂಪು ಅಥವಾ ಊದಿಕೊಂಡ ಕಣ್ಣಿನ ರೆಪ್ಪೆಗಳು – ಇದು ಸೋಂಕು ಅಥವಾ ಅಲರ್ಜಿಯನ್ನು ಸೂಚಿಸುತ್ತದೆ.
2.ಕಣ್ಣಿನ ಗುಡ್ಡೆಗಳ ಚಲನೆ – ಕಣ್ಣಿನ ಸ್ನಾಯುಗಳು ಇನ್ನು ಬೆಳೆಯುತ್ತಿರುವುದರಿಂದ, ಕಣ್ಣಿನ ಗುಡ್ಡೆಯ ಚಲನೆ ಸ್ವಯಂ ಅಂದರೆ ಮಗುವು ತಾನಾಗೇ ಆಡಿಸುತ್ತದೆ, ಆದರೆ ಈ ಚಲನೆ ದೃಢವಾಗಿದ್ದರೆ, ಅಥವಾ ತೀವ್ರವಾಗಿದ್ದರೆ ಇದು ಕಣ್ಣಿನ ಕಣ್ಣಿನ ತೊಂದರೆಯನ್ನು ಸೂಚಿಸುತ್ತದೆ.
3.ಬೆಳಕಿಗೆ ತುಂಬಾ ಸೂಕ್ಷ್ಮವಾಗಿದ್ದರೆ – ನಿಮ್ಮ ಮಗುವು ಸೂರ್ಯನ ಕಿರಣಗಳಿಗೆ ಬಂದಾಗ ಕಣ್ಣನ್ನು ಮುಚ್ಚಿಕೊಂಡು ಬಿಡಲು ಕಷ್ಟವಾದರೆ, ನಿಮ್ಮ ಮಗುವಿಗೆ ಒತ್ತಡದ ತೊಂದರೆ ಇದೆ ಅಥವಾ ರೇಟಿನ ಭಾಗದಲ್ಲಿ ಜೀವಕೋಶದ ತೊಂದರೆ ಇದೆ ಎಂದು ಇದು ಹೇಳುತ್ತದೆ.
4.ಹೆಚ್ಚಾಗಿ ಕಂಬನಿ(ಕಣ್ಣೀರು) ಬರುವುದು – ಶಿಶುಗಳಲ್ಲಿ ಕಂಬನಿ ಗ್ರಂಥಿಗಳು ಈಗ ಬೆಳವಣಿಗೆಯನ್ನು ಪ್ರಾರಂಭಿಸಿವೆ. ಇದು ಬೆಳವಣಿಗೆ ಆಗುತ್ತಿರುವ ಕಾರಣ ನಿಮ್ಮ ಮಗುವಿನ ಕಣ್ಣಿನಲ್ಲಿ ಹೆಚ್ಚು ಕಂಬನಿಯನ್ನು ಕಾಣಬಹುದು ಇದನ್ನು ಕಂಡರೆ ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.
5.ಬಿಳಿ ಪದರದ ಗೋಚರ – ಇದು ಕಣ್ಣಿನ ಪೊರೆ ಇಂದ ಇಡಿದು ಕ್ಯಾನ್ಸರ್ ಅನ್ನು ಸೂಚಿಸುತ್ತದೆ, ಆದ್ದರಿಂದ ಇದು ಸ್ವಲ್ಪ ಕಂಡ ಕೂಡಲೇ ನೀವು ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಇದಕ್ಕೆ ತತ್ ಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.

Comments are closed.