ಆರೋಗ್ಯ

ಚಳಿಗಾಲಕ್ಕೆ ಮಾಡೆಲ್‌ ಮೇಘನಾ ಲಕ್ಷ್ಮಣ್‌ ಬ್ಯೂಟಿ ಟಿಪ್ಸ್

Pinterest LinkedIn Tumblr

– ಶೀಲಾ

ಮಲೆನಾಡ ಹುಡುಗಿಯರಿಗೆ ಚಳಿಗಾಲವೆಂದರೇ ಅಷ್ಟೇನೂ ವಿಶೇಷ ಎಂದೆನಿಸುವುದಿಲ್ಲ. ಯಾಕೆ ಅಂತಿರಾ! ಮಳೆ-ಚಳಿ ಎಂಬುದು ದಿನನಿತ್ಯದ ರುಟೀನ್‌ಗಳಲ್ಲಿ ಸೇರಿಹೋಗಿರುತ್ತದೆ. ಚುಮುಚುಮು ಚಳಿಯನ್ನು ಎಂಜಾಯ್‌ ಮಾಡುವವರೇ ಮಲೆನಾಡಿಗರು ಎನ್ನುತ್ತಾರೆ ನಟಿ ಕಮ್‌ ಮಾಡೆಲ್‌ ಮೇಘನಾ ಲಕ್ಷ್ಮಣ್‌.

ಚುಮು ಚುಮು ಚಳಿಗಾಲವನ್ನು ಎಂಜಾಯ್‌ ಮಾಡುತ್ತಲೇ ಹೇಗೆ ಆರೈಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.

ಚಳಿಗಾಲದಲ್ಲಿ ಬೆಚ್ಚನೆಯ ಉಡುಪುಗಳನ್ನು ಧರಿಸುವುದು ಮುಖ್ಯ. ಗ್ಲಾಮರ್‌ ಹೆಸರಲ್ಲಿ ದೇಹವನ್ನು ನಡುಗಿಸುವ ಡ್ರೆಸ್‌ಕೋಡ್‌ ಬೇಡ. ಇದು ಆರೋಗ್ಯಕ್ಕೆ ಮಾರಕ ಎನ್ನುತ್ತಾರೆ ಮೇಘನಾ ಲಕ್ಷ್ಮಣ್‌. ಹಿರಿಯರೂ ಮಾತ್ರವಲ್ಲ, ಮಕ್ಕಳು ಕೂಡ ಈ ಕಾಲದಲ್ಲಿ ಆದಷ್ಟೂ ಬಿಸಿಬಿಸಿ ಆಹಾರವನ್ನೇ ಚೂಸ್‌ ಮಾಡಿಕೊಳ್ಳುವುದು ಉತ್ತಮ. ಕೋಲ್ಡ್‌ ಐಟಂಗಳಿಗೆ ಬೈ ಬೈ ಹೇಳುವುದು ಬೆಸ್ಟ್‌ ಎನ್ನುತ್ತಾರೆ.

ಚಳಿಗಾಲದಲ್ಲಿ ಕೇವಲ ತ್ವಚೆಯ ಆರೈಕೆ ಮಾತ್ರವಲ್ಲ, ಇಡೀ ದೇಹದ ಆರೋಗ್ಯದ ಬಗ್ಗೆಯೂ ಯೋಚಿಸಬೇಕಾಗುತ್ತದೆ ಎನ್ನುತ್ತಾರೆ. ಚಳಿಗಾಲದಲ್ಲಿ ತ್ವಚೆಯು ಮಾಸುವುದೇ ಹೆಚ್ಚು. ಇದಕ್ಕಾಗಿ ಯಾವುದೇ ಕೆಮಿಕಲ್‌ ಸೌಂದರ್ಯವರ್ಧಕಗಳ ಮೊರೆ ಹೋಗಬೇಕಾಗಿಲ್ಲ. ಬದಲಿಗೆ ಹಳೆಯ ಕಾಲದ ಬ್ಯೂಟಿ ಸೀಕ್ರೇಟ್‌ಗಳನ್ನೇ ಪಾಲಿಸಿ. ತೆಂಗಿನ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯಿಂದ ತ್ವಚೆಯ ಆರೈಕೆ ಮಾಡಿಕೊಳ್ಳುವುದರಿಂದ ನ್ಯಾಚುರಲ್‌ ಸೌಂದರ್ಯ ಗ್ಯಾರಂಟಿ ಎನ್ನುತ್ತಾರೆ.

ಚಳಿಗಾಲದಲ್ಲಿ ಆದಷ್ಟೂ ಕೋಲ್ಡ್‌ ಫುಡ್‌ಗಳಿಂದ ದೂರವಿರುವುದು ಬೆಸ್ಟ್‌. ಇದು ಆರೋಗ್ಯಕ್ಕೆ ಮಾರಕವಾಗಬಹುದು.

– ಮೇಘನಾ ಲಕ್ಷ್ಮಣ್‌, ನಟಿ, ಮಾಡೆಲ್‌

Comments are closed.