ರಾಷ್ಟ್ರೀಯ

ಜಯಾ ಆಸ್ತಿಗೆ ವಾರಸುದಾರರು ಯಾರು?

Pinterest LinkedIn Tumblr


ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಚೆನ್ನೈನ ಮರೀನಾ ಬೀಚ್‌ನಲ್ಲಿ ಚಿರನಿದ್ರೆಗೆ ಜಾರಿ ಇಂದಿಗೆ (ಡಿಸೆಂಬರ್‌ 5) ಸರಿಯಾಗಿ ಒಂದು ವರ್ಷ ಸಂದಿದೆ. ಆದರೆ, ಜಯಾ ಅವರ 1,000 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಆಸ್ತಿಗೆ ವಾರಸುದಾರರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅದಕ್ಕೆ ಕಾನೂನು ಹೋರಾಟವೇ ಉತ್ತರ ನೀಡಬೇಕಿದೆ. ಜಯಾ ಅವರಿಗೆ ಇರುವ ಆಸ್ತಿ ಎಷ್ಟು? ಎಲ್ಲಿದೆ? ವಿವರ ಇಲ್ಲಿದೆ.

1967ರಲ್ಲಿ ಜಯ ಲಲಿತಾ ಮತ್ತು ಅವರ ತಾಯಿ ಎನ್‌ ಆರ್‌ ಸಂಧ್ಯಾ ಜಂಟಿಯಾಗಿ ಈ ಆಸ್ತಿ ಖರೀದಿಸಿದ್ದರು.

– 1971ರಲ್ಲಿ ಸಂಧ್ಯಾ ಸಾವಿನ ಬಳಿಕ ಈ ಆಸ್ತಿಯು ‘ವಿಲ್‌’ ಪ್ರಕಾರ ಜಯ ಅವರಿಗೆ ದಕ್ಕಿತ್ತು.

– ಅಕ್ಕಪಕ್ಕದ ಆಸ್ತಿಗಳನ್ನೂ ಸ್ವಾಧೀನಪಡಿಸಿಕೊಳ್ಳುವ ಮೂಲಕ ‘ವೇದ ನಿಲಯಂ’ ವಿಸ್ತಾರ ಹೆಚ್ಚಿದೆಯಾದರೂ, ಅದರ ಈಗಿನ ನಿಖರ ಅಂಕಿ-ಅಂಶಗಳು ಬಯಲಾಗಿಲ್ಲ.

* ಕೋದಂಡಾ ಎಸ್ಟೇಟ್‌

– ನೀಲಗಿರಿ ಪರ್ವತ ಶ್ರೇಣಿಯ ಕೋಟಗಿರಿಯಿಂದ 20 ಕಿ.ಮೀ. ದೂರದಲ್ಲಿ

900 ಎಕರೆಯಲ್ಲಿ ಪ್ರದೇಶದಲ್ಲಿ ಬೃಹತ್‌ ಕೋದಂಡ ಟೀ ಎಸ್ಟೇಟ್‌ ಇದೆ.

– ಇದರ ಹಾಲಿ ಮಾರುಕಟ್ಟೆ ಮೌಲ್ಯ 100 ಕೋಟಿ ರೂ.

* ಸಿರುತವೂರ್‌ ಬಂಗಲೆ: 50 ಕೋಣೆಗಳನ್ನು ಹೊಂದಿದೆ

– ಎಂಟು ಕಂತುಗಳಲ್ಲಿ ಇದಕ್ಕೆ ಹೊಂದಿಕೊಂಡಂತೆ ಒಟ್ಟು 67 ಎಕರೆ ಜಾಗವನ್ನು ನೋಂದಣಿ ಮಾಡಿಸಲಾಗಿದೆ.

– ದಲಿತರಿಗೆ ಹಂಚಿಕೆ ಮಾಡಲಾಗಿದ್ದ ಈ ಜಾಗವನ್ನು ಒತ್ತುವರಿ ಮಾಡಿದ ಆರೋಪ ಕೇಳಿಬಂದಿತ್ತು. ವಿವಾದದ ಹಿನ್ನೆಲೆಯಲ್ಲಿ ಈ ಆಸ್ತಿಯಲ್ಲಿ ತಮ್ಮ ಪಾಲಿಲ್ಲ ಎಂದು ಜಯಾ ಘೋಷಿಸಿದ್ದರು. ಆದರೆ, ಜಯಾ ಅವರ ಆದಾಯಕ್ಕೂ ಮೀರಿದ ಆಸ್ತಿಯಲ್ಲಿ ಇದನ್ನೂ ಪಟ್ಟಿ ಮಾಡಲಾಗಿತ್ತು.

* ಆಂಧ್ರದಲ್ಲಿ ಫಾರ್ಮ್‌ ಹೌಸ್‌

– ರಂಗಾರೆಡ್ಡಿ ಜಿಲ್ಲೆಯಲ್ಲಿ ಜಯಲಲಿತಾಗೆ ಸೇರಿದ 2 ಫಾರ್ಮ್‌ ಹೌಸ್‌ಗಳಿವೆ.

* ಪಯ್ಯಾನೂರ್‌ ಬಂಗಲೆ

– ಚೆನ್ನೈನಿಂದ 30 ಕಿ.ಮೀ. ದೂರದಲ್ಲಿದೆ.

– 22 ಎಕರೆ ಜಾಗ ಮತ್ತು ಈ ಬಂಗಲೆಯನ್ನು ಸಂಗೀತ ನಿರ್ದೇಶಕ ಹಾಗೂ ಇಳಯರಾಜ ಅವರ ಕಿರಿಯ ಸಹೋದರ ಗಂಗೈ ಅಮರನ್‌ ಅವರಿಂದ ಕೇವಲ 13 ಲಕ್ಷ ರೂ.ಗೆ ಖರೀದಿಸಲಾಗಿತ್ತು, ಆಗ ಅದರ ಮಾರುಕಟ್ಟೆ ಮೌಲ್ಯ 1.5 ಕೋಟಿ. ಈಗ ಈ ಆಸ್ತಿಯ ಮೌಲ್ಯ 55 ಕೋಟಿ ರೂ.

28 ಕೆ.ಜಿ. ಚಿನ್ನ, ವಜ್ರ

ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಜಯಾ ಅವರಿಗೆ ಸೇರಿದ 28 ಕೆ.ಜಿ. ಚಿನ್ನ ಮತ್ತು ವಜ್ರದ ಆಭರಣಗಳು ಕರ್ನಾಟಕದ ಕೋರ್ಟ್‌ ಲಾಕರ್‌ನಲ್ಲಿವೆ.

Comments are closed.