ಆರೋಗ್ಯ

120 ಸವಾರರು 7 ದಿನಗಳು 1000 ಕಿ.ಮೀ

Pinterest LinkedIn Tumblr


ಆರೋಗ್ಯಕರ ಜೀವನಕ್ಕೆ ಸೈಕ್ಲಿಂಗ್‌ ರಹದಾರಿಯಿದ್ದಂತೆ. ಕೆಲವರು ದೇಹದ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸೈಕ್ಲಿಂಗ್‌ ಮಾಡಿದರೆ, ಇನ್ನು ಕೆಲವರು ಪರಿಸರ ಕಾಳಜಿಯ ಉದ್ದೇಶದಿಂದ ಸೈಕ್ಲಿಂಗ್‌ ಮಾಡುತ್ತಾರೆ. ಸೈಕ್ಲಿಂಗ್‌ನ ಉದ್ದೇಶ ಏನೇ ಇದ್ದರೂ, ಲಾಭ ಖಚಿತ. ಪ್ರತಿ ವರ್ಷದಂತೆ ಈ ವರ್ಷದ ಡಿಸೆಂಬರ್‌ನಲ್ಲಿ ಬೆಂಗಳೂರಿನಿಂದ “ಟೂರ್‌ ಆಫ್ ನೀಲ್‌ಗಿರೀಸ್‌’ ಸೈಕ್ಲಿಂಗ್‌ ಟೂರ್‌ ಆಯೋಜನೆಯಾಗಿದೆ. ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ.

ಮೈನವಿರೇಳಿಸುವ ಪ್ರಾಕೃತಿಕ ದೃಶ್ಯಗಳಿಂದ ಸಮೃದ್ಧವಾಗಿರುವ ಸುಂದರ ಪರಿಸರದ ನಡುವೆ ಸೈಕ್ಲಿಂಗ್‌ ಮಾಡುವುದನ್ನು ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತೆ.
ಸುಮಾರು 120 ಸೈಕಲ್‌ ಸವಾರರು, ಬೆಂಗಳೂರಿನಿಂದ 7 ದಿನಗಳಲ್ಲಿ, 1000 ಕಿ.ಮೀ ದೂರವನ್ನು ಕ್ರಮಿಸಲಿದ್ದಾರೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರದೇಶವನ್ನು ಸೈಕಲ್‌ ಸವಾರರು ಹಾದು ಹೋಗಲಿದ್ದಾರೆ. ಇವರಲ್ಲಿ ವಿದೇಶಿ ಪ್ರಜೆಗಳೂ ಇರುವುದು ವಿಶೇಷ.
ಹೆಚ್ಚಿನ ಮಾಹಿತಿಗಾಗಿ- www.tourofnilgiris.com
www.goo.gl/JwzoQF

-ಉದಯವಾಣಿ

Comments are closed.