ಅಂತರಾಷ್ಟ್ರೀಯ

ಆಗಸದಲ್ಲಿ ಗುಪ್ತಾಂಗದ ಚಿತ್ರ ಬಿಡಿಸಿದ ವಾಯುಸೇನಾ ಪೈಲಟ್‌

Pinterest LinkedIn Tumblr


ಲಾಸ್ ಏಂಜೆಲ್ಸ್‌: ಅಮೆರಿಕ ವಾಯುಸೇನೆಯ ಪೈಲೆಟ್‌ ಆಗಸದಲ್ಲಿ ಹಾರಾಟ ನಡೆಸಿ ಬಿಡಿಸಿದ್ದ ಗುಪ್ತಾಂಗದ ಚಿತ್ರ ಇದೀಗ ಸಾಕಷ್ಟು ವೈರಲ್‌ ಆಗಿದ್ದು, ಆ ಚಿತ್ರ ಕಂಡು ಅಮೆರಿಕ ವಾಯು ಸೇನೆ ಮುಖ ಕೆಂಪು ಮಾಡಿಕೊಂಡಿದೆ.

ಹೌದು! ಶುಕ್ರವಾರದಂದು ವಾಷಿಂಗ್ಟನ್‌ನ ಒಕನೋಗಾನ್‌ ಪ್ರದೇಶದಲ್ಲಿ ಅಮೆರಿಕ ಸೇನೆಯ ಪೈಲಟ್‌ ಲಕ್ಷ ಬೆಲೆಯ ಇಎ-18ಜಿ ಗ್ರೌಲರ್‌ ಜೆಟ್‌ ವಿಮಾನದ ಹೊಗೆಯನ್ನು ಬಳಸಿ ಪುರುಷರ ಗುಪ್ತಾಂಗದ ಚಿತ್ರವನ್ನು ಆಕಾಶದಲ್ಲಿ ಬಿಡಿಸಿದ್ದ. ಈ ಚಿತ್ರ ಗುರುವಾರ ಸಂಜೆ ವೇಳೆ ಸಾಕಷ್ಟು ವೈರಲ್‌ ಆಗತೊಡಗಿತ್ತು.

ಸಾರ್ವಜನಿಕ ವಲಯದಲ್ಲಿ ಈ ಕುರಿತು ವಿರೋಧಗಳು ವ್ಯಕ್ತವಾದ ಬೆನ್ನಲೇ ಪ್ರಕಟಣೆ ಹೊರಡಿಸಿರುವ ಅಮೆರಿಕ ವಾಯು ಸೇನೆ, ಈ ಕೃತ್ಯವನ್ನು ಎಸಗಿರುವುದು ತಮ್ಮವರೇ ಎಂದು ಒಪ್ಪಿಕೊಂಡಿದ್ದು, ಈ ರೀತಿಯ ನಡೆ ವಾಯು ಸೇನಾ ನೀತಿಗೆ ವಿರುದ್ಧವಾಗಿದ್ದು ಆ ಪೈಲಟ್‌ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.

ಈ ಘಟನೆ ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ, ಹೀಗಾಗಿ ಈಗಾಗಲೇ ಘಟನೆ ಕುರಿತು ತನಿಖೆ ನಡೆಸಲು ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆದೇಶಿಸಿರುವುದಾಗಿ ಲೆಫ್ಟಿನೆಂಟ್ ಕಮಾಂಡರ್ ಲೆಸ್ಲಿ ಹಬ್ಬೆಲ್ ಹೇಳಿದ್ದಾರೆ.

Comments are closed.