ಆರೋಗ್ಯ

ಚಳಿಗಾಲದಲ್ಲಿ ಪ್ರತಿನಿತ್ಯ ಎಷ್ಟು ಲೋಟ ನೀರು ಕುಡಿಯಬೇಕು?

Pinterest LinkedIn Tumblr


ಬೆಂಗಳೂರು: ಆಗಲೇ ಚಳಿಗಾಲ ಬಂದುಬಿಟ್ಟಿದೆ. ವಾತಾವರಣ ಬದಲಾದಂತೆ ನಮ್ಮ ದೈನಂದಿನ ಚಟುವಟಿಕೆಗಳೂ ಬದಲಾಗುತ್ತದೆ. ಚಳಿಗಾಲದಲ್ಲಿ ಎಷ್ಟು ನೀರು ಕುಡಿಯಬೇಕು ಎಂಬ ಅಂದಾಜು ನಿಮಗಿದೆಯೇ?

ಆರೋಗ್ಯವಾಗಿರಲು ಮತ್ತು ನಮ್ಮ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಪ್ರತಿ ನಿತ್ಯ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು ಎನ್ನಲಾಗುತ್ತದೆ. ಆದರೆ ಚಳಿಗಾಲದಲ್ಲೂ ಇಷ್ಟು ನೀರು ಕುಡಿಯುವ ಅಗತ್ಯವಿದೆಯೇ?

ಚಳಿಗಾಲದಲ್ಲಿ ಬೇಸಿಗೆಯಷ್ಟು ದೇಹ ನಿರ್ಜಲೀಕರಣಕ್ಕೊಳಗಾಗದು. ಆದರೆ ನೀರು ಕುಡಿಯದೇ ಇರಲಾಗದು. ಹಾಗಿದ್ದರೂ ಆರೋಗ್ಯ ಕಾಪಾಡಲು ಲೀಟರ್ ಗಟ್ಟಲೆ ನೀರು ಅಗತ್ಯವಿಲ್ಲದಿದ್ದರೂ, ಆಗಾಗ ಗುಟುಕು ನೀರು ಕುಡಿಯುತ್ತಿರುವುದು ಒಳ್ಳೆಯದು.

ನೀರು ಅಂತಲ್ಲದಿದ್ದರೂ, ದ್ರವಾಂಶ ಹೊಟ್ಟೆ ಸೇರುತ್ತಿದ್ದರೆ ಒಳ್ಳೆಯದು. ಬಿಸಿ ಸೂಪ್, ಕ್ಯಾರೆಟ್, ಬೀನ್ಸ್ ನಂತಹ ತರಕಾರಿಗಳನ್ನು ಹೆಚ್ಚು ಸೇವಿಸುತ್ತಿದ್ದರೂ ಸಾಕು ಎನ್ನುತ್ತಾರೆ ತಜ್ಞರು. ಹಾಗಿದ್ದರೂ ಬಿಸಿಯಾದ ಆಹಾರ ಪದಾರ್ಥಗಳನ್ನುಸೇವಿಸುತ್ತಿದ್ದರೆ ದೇಹವೂ ಬೆಚ್ಚಗಿರುತ್ತದೆ, ಆರೋಗ್ಯವೂ ಚೆನ್ನಾಗಿ ಆಗುತ್ತದೆ.

Comments are closed.