ಆರೋಗ್ಯ

ದಾಲ್ಚಿನ್ನಿ ಚಕ್ಕೆಯಿಂದ ಹಲವು ಆರೋಗ್ಯ ಸಮಸ್ಯೆಗೆ ನೀಡಿ ಫುಲ್ ಸ್ಟಾಪ್

Pinterest LinkedIn Tumblr

ಭಾರತೀಯ ಅಡುಗೆಗಳಲ್ಲಿ ದಾಲ್ಚಿನ್ನಿ ಚಕ್ಕೆ ಒಂದು ಹೆಮ್ಮೆಯ ಸುಗಂಧದ್ರವ್ಯ. ಇದು ಚಿನ್ನಮಾಮ್ ಅನ್ನುವ ಗಿಡದಿಂದ ಲಭಿಸುತ್ತದೆ. ಇದರಲ್ಲಿ ಅನೇಕ ಔಷಧೀಯ ಗುಣಗಳು ಇವೆ. ಚಿಕ್ಕಮಕ್ಕಳು ದಾಲ್ಚಿನ್ನಿ ಚಕ್ಕೆಯನ್ನು ಯಾಜಿ಼ಟೀಸ಼್ ಆಗಿ ತಿನ್ನುವುದರಿಂದ ಒಂದೊಂದು ಬಾರಿ ಆಹಾರ ಪಾಯಿಸ಼್ನಿಂಗ್ ಆಗಿರುತ್ತದೆ. ಅಂತಹ ಸಮಯದಲ್ಲಿ ಈ ದಾಲ್ಚಿನ್ನಿ ಚಕ್ಕೆಯ ಪುಡಿಯನ್ನು ನೀರಿನಲ್ಲಿ ಬೆರೆಸಿ ಕೊಡುವುದರಿಂದ ವಿಷದ ಪ್ರಭಾವ ಕಡಿಮೆ ಯಾಗುತ್ತದೆ.

ಹಾಗೆಯೆ ಸ್ವಲ್ಪ ಈ ಪುಡಿಯನ್ನು ಹಾಲಿನಲ್ಲಿ ಹಾಕಿ ಬೆರೆಸಿ ಕುಡಿಸುವುದರಿಂದ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಹಾಗೆಯೇ ಮೂಳೆಗಳು ಧೃಡವಾಗಿ, ಗಟ್ಟಿಯಾಗಿ ತಯಾರಾಗುತ್ತದೆ. ಒಂದು ಕಪ್ ನೀರಿನಲ್ಲಿ ಅರ್ಧ ಚಮಚ ದಾಲ್ಚಿನ್ನಿ ಚಕ್ಕೆಯ ಪುಡಿಯನ್ನು ಹಾಕಿ ಕುದಿಸಿ ,ಆರಿದ ನಂತರ ಅದಕ್ಕೆ ಸ್ವಲ್ಪ ತುಪ್ಪ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಗಾಢನಿದ್ರೆ ಬರುತ್ತದೆ.

ಹಾಗೆಯೇ ಒಂದು ಕಪ್ ನೀರಿನೊಂದಿಗೆ ಮೂರು ಟೀ ಸ್ಪೂನ್ ಹನಿ ಅನ್ನು ಬೆರೆಸಿ ಪ್ರತಿನಿತ್ಯ ಮೂರು ಬಾರಿ ತೆಗೆದುಕೊಳ್ಳಬೇಕು. ಹೀಗೆ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ಕರಗಿ ಹೋಗುತ್ತದೆ. ಇದು ಶರೀರಕ್ಕೆ ಆ್ಯಂಟಿ ಆಕ್ಸಿಡೆಂಟ್ ಆಗಿ ನಿರ್ವಹಿಸಿ ಕ್ಯಾನ್ಸರ್ ಬಾರದಂತೆ ಕಾಪಾಡುತ್ತದೆ. 30ಗ್ರಾಂ ದಾಲ್ಚಿನ್ನಿ ಚಕ್ಕೆಯ ಪುಡಿಯೊಂದಿಗೆ ,20ಗ್ರಾಂ ಹನಿಯೊಂದಿಗೆ ಬೆರೆಸಿ ಪೇಸ್ಟಿನ ರೀತಿ ಅದನ್ನು ಕೀಲುನೋವು, ಮೊಣಕಾಲು ನೋವು ಇರುವ ಜಾಗದಲ್ಲಿ ಹಚ್ಚುವುದರಿಂದ ಉಪಶಮನವಾಗುತ್ತದೆ. ಹಾಗೆಯೇ ಅರ್ಧಕಪ್ಪು ದಾಳಿಂಬೆರಸದಲ್ಲಿ ಚಮಚ ದಾಲ್ಚಿನ್ನಿ ಚಕ್ಕೆಯ ಪುಡಿ ಬೆರೆಸಿಕೊಂಡು ತೆಗೆದುಕೊಂಡು ಇದ್ದರೆ ರಕ್ತವೃದ್ಧಿಯಾಗಿ ರಕ್ತಹೀನತೆ ಕಡಿಮೆಯಾಗುತ್ತದೆ.

ಪಾರ್ಶ್ವವಾಯು ನೋವು ಇರುವವರು ದಾಲ್ಚಿನ್ನಿ ಚಕ್ಕೆಯನ್ನು ತಿಂದರೆ ಒಳ್ಳೆಯ ಉಪಶಮನ ಲಭಿಸುತ್ತದೆ. ಸಾಮಾನ್ಯವಾಗಿ ದಾಲ್ಚಿನ್ನಿ ಚಕ್ಕೆಯನ್ನು ತೆಗೆದುಕೊಳ್ಳುವುದರಿಂದ ಮಹಿಳೆಯರಲ್ಲಿ ಬರುವ ಋತುಕ್ರಮ ಸಮಸ್ಯೆಗಳು ತೊಲಗುತ್ತವೆ. ಗ್ಯಾಸ್ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಇಡಬಹುದು. ದಾಲ್ಚಿನ್ನಿ ಚಕ್ಕೆ ಕರಿಮೆಣಸನ್ನು ಬೆರೆಸಿ ರುಬ್ಬಿ ಕಷಾಯವನ್ನು ಮಾಡಿಕೊಂಡು ಕುಡಿದರೆ ಶೀತದಿಂದ ವಿಮುಕ್ತಿ ಸಿಗುತ್ತದೆ. ಚರ್ಮ ವ್ಯಾಧಿಗಳು, ತುರಿಕೆ, ನೆರಿಗೆಗಳು ಬೀಳುವುದು, ಬಣ್ಣ ಬದಲಾಗುವ ಸಮಸ್ಯೆ ಬಾರದು. ದಾಲ್ಚಿನ್ನಿ ಚಕ್ಕೆಯ ಪುಡಿ ಗಂಧದಪುಡಿ ಬೆರೆಸಿ ರೋಜ಼್ ವಾಟರ್’ನಲ್ಲಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ರೀತಿ ಹಾಕಿಕೊಂಡು ಆರಿದ ನಂತರ ತಣ್ಣನೆಯ ನೀರಿನೊಂದಿಗೆ ತೊಳೆಯುವುದರಿಂದ ಮಚ್ಚೆಗಳು ಹೋಗಿ ಅಂದವಾಗಿ ಕಾಂತಿವಂತವಾಗಿ ಬದಲಾಗುತ್ತದೆ..

Comments are closed.