ಆರೋಗ್ಯ

ಬಿರಿಯಾನಿ ಎಫೆಕ್ಟ್‌; ಹೋಟೆಲ್‌ನಲ್ಲೇ ಮಾರಾಮಾರಿ

Pinterest LinkedIn Tumblr


ಲಖನೌ: ಬಿರಿಯಾನಿಯಿಂದ ಶುರುವಾದ ಗಲಾಟೆ ಅಂತಿಮವಾಗಿ ಹೋಟೆಲ್‌ ಮಾಲೀಕ ಮತ್ತು ಆತನ ಅನುಯಾಯಿಗಳು ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿ ಪೊಲೀಸ್‌ ಠಾಣೆ ಹತ್ತಿದ ಘಟನೆ ನಗರದ ಪ್ರೆಸ್‌ ಕ್ಲಬ್‌ ಬಳಿಯ ಹೋಟೆಲ್‌ವೊಂದರಲ್ಲಿ ನಡೆದಿದೆ.

ವಕೀಲ ಸತ್ಯಾವರತ್‌ ಹಾಗೂ ಅವರ ಸ್ನೇಹಿತ ಸತೇಂದ್ರ ಸಿಂಗ್‌ ಪ್ರೆಸ್‌ ಕ್ಲಬ್‌ ಬಳಿಯ ಹೋಟೇಲ್‌ಗೆ ಬಿರ್ಯಾನಿ ತಿನ್ನಲು ತೆರಳಿದ್ದಾರೆ. ಈ ವೇಳೆ ಇವರ ಪಕ್ಕದ ಟೇಬಲ್‌ಗೆ ಕೆಲ ವ್ಯಕ್ತಿಗಳು ಬಂದು ಬಿರಿಯಾನಿ ಆರ್ಡರ್‌ ಮಾಡಿದ್ದಾರೆ. ಸುಮಾರು 10 ನಿಮಿಷಗಳ ಬಳಿಕ ಹೋಟೆಲ್‌ ಮಾಣಿ ಎರಡು ಪ್ಲೇಟ್‌ ಬಿರಿಯಾನಿಯನ್ನು ಬೇರೆಯವರಿಗೆ ನೀಡಿದ್ದಾನೆ.

ಇದರಿಂದ ಕೋಪಗೊಂಡ ಸಿಂಗ್‌, ಮೊದಲು ಬಂದವರಿಗೆ ಬಿರಿಯಾನಿ ನೀಡದೇ ಆನಂತರ ಬಂದವರಿಗೆ ನೀಡಿದ್ದು ತಪ್ಪು ಎಂದು ಹೇಳಿದ್ದಾನೆ. ಈ ವೇಳೆ ಹೋಟೆಲ್‌ ಮಾಣಿ ಮತ್ತು ಸಿಂಗ್‌ ನಡುವೆ ವಾಗ್ವಾದ ನಡೆದಿದೆ. ಬಳಿಕ ಬಂದ ರೆಸ್ಟೋರೆಂಟ್‌ ಮ್ಯಾನೇಜರ್‌ ಉತ್ತಮ್‌ ಸೋಂಕರ್‌ ಸಿಂಗ್‌ರನ್ನು ತಳ್ಳಿದ್ದಾನೆ. ಬಳಿಕ ತಾನು ಪೊಲೀಸರಿಗೆ ಕರೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಇದಕ್ಕೆ ಉತ್ತಮ್‌ ಮತ್ತು ಸಿಬ್ಬಂದಿ ಪಿಸ್ತೂಲ್‌ನ ಹಿಂಭಾಗದಿಂದ ಸಿಂಗ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಿಂಗ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಉತ್ತಮ್‌ ವಿರುದ್ಧ ಕೊಲೆ ಯತ್ನ, ಶಾಂತಿ ಉಲ್ಲಂಘನೆ, ಗಲಭೆ ಮತ್ತು ಮರಣಾಂತಿಕ ಶಸ್ತ್ರಾಸ್ತ್ರಗಳ ಬಳಕೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಡಿಕೆ ಉಪಧ್ಯಾಯ್‌ ಹೇಳಿದ್ದಾರೆ.

Comments are closed.