ರಾಷ್ಟ್ರೀಯ

ಕಣ್ಣೂರಿನ 6 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದಾರೆ: ಕೇರಳ ಪೊಲೀಸರು

Pinterest LinkedIn Tumblr


ಕಣ್ಣೂರು: ಕೇರಳದ ಕಣ್ಣೂರು ಮೂಲದ ಆರು ಮಂದಿ ಯುವಕರು ಸಿರಿಯಾದಲ್ಲಿ ಇಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಕೇರಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇವರೆಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆರು ಮಂದಿ ಪೈಕಿ ಓರ್ವ ಉಗ್ರ 25 ವರ್ಷದ ಮೊಹಮ್ಮದ್ ಶಾಜೀಲ್ ಎಂಬುವನು ದಾಳಿಯಲ್ಲಿ ಮೃತಪಟ್ಟಿರುವುದಾಗಿ ಆತನ ಪತ್ನಿ ವಿದೇಶದಲ್ಲಿರುವ ಮಾವನಿಗೆ ತಿಳಿಸಿದ್ದಾರೆ. ಮತ್ತೋರ್ವ ಉಗ್ರ ರಶೀದ್ ಮೃತಪಟ್ಟಿರುವುದಾಗಿ ಆತನ ಹೆಂಡತಿ ರಶೀದ್ ತಾಯಿಗೆ ತಿಳಿಸಿದು ಬಂದಿದೆ.

Kerala Police confirmed that 6 more youngsters from Kannur have joined ISIS in Syria, said these people were active workers of PFI in Kerala pic.twitter.com/MytDsm6wee
— ANI (@ANI) November 2, 2017

ಇನ್ನು ಕಳೆದ ವಾರ ಅಕ್ಟೋಬರ್ 25ರಂದು ಇಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಪೊಲೀಸರು ಕಣ್ಣೂರಿನಲ್ಲಿ ಮಿತಿಲಝ್, ಅಬ್ದುಲ್ ರಝಾಕ್, ರಶೀದ್ ಎಂಬುವರನ್ನು ಬಂಧಿಸಿದ್ದರು.

ಸುಮಾರು 100ಕ್ಕೂ ಹೆಚ್ಚು ಭಾರತೀಯ ಯುವಕರು ಇಸಿಸ್ ಸೇರಲು ದೇಶವನ್ನು ತೊರೆದಿದ್ದು ಇವರಲ್ಲಿ ಬಹತೇಕರು ಕೇರಳದವರೇ ಆಗಿದ್ದಾರೆ. ಕಳೆದ 2016ರ ಜುಲೈನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಕಳೆದ ಒಂದು ತಿಂಗಳಲ್ಲಿ 21 ಮುಸ್ಲಿಂ ಯುವಕರು ನಾಪತ್ತೆಯಾಗಿದ್ದು ಇವರೆಲ್ಲಾ ಇಸಿಸ್ ಉಗ್ರ ಸಂಘಟನೆಗೆ ಸೇರಿರಬಹುದು ಎಂದು ಹೇಳಿದ್ದರು.

Comments are closed.