ಆರೋಗ್ಯ

ಎದೆಹಾಲಿನಲ್ಲಿರುವ ಆಶ್ಚರ್ಯಕರ ಪರಿಣಾಮಕಾರಿ ಉಪಯೋಗಗಳು

Pinterest LinkedIn Tumblr

ಎದೆಹಾಲುಣಿಸುವುದು ತಾಯಿ ಮತ್ತು ಮಗುವನ್ನು ಇನ್ನಷ್ಟು ಹತ್ತಿರ ಮಾಡುವ ಒಂದು ಸುಮಧುರ ಅನುಭವ. ವಿಶ್ವ ಅರೋಗ್ಯ ಸಂಸ್ಥೆಯು (ಡಬ್ಲ್ಯೂ .ಎಚ್.ಓ) ಎರಡು ವರ್ಷಗಳವರೆಗೆ ಮಗುವಿಗೆ ಎದೆಹಾಲು ನೀಡುವುದು ಸೂಕ್ತ ಎಂದು ತಿಳಿಸುತ್ತದೆ. ಇಷ್ಟೇ ಅಲ್ಲದೆ, ಮನೆ ಮಂದಿಯೆಲ್ಲಾ ಎದೆಹಾಲಿನ ಉಪಯೋಗಗಳನ್ನ ಪಡೆದುಕೊಳ್ಳಬಹುದು. ಎದೆಹಾಲಿನ ಉಪಯೋಗಗಳು ಕೇವಲ ತಾಯಿ ಮತ್ತು ಮಗುವಿನಿಂದ ಒಂದು ಹೆಜ್ಜೆ ಮುಂದೆ ಹೋಗಿ, ಮನೆಮಂದಿಗೆಲ್ಲಾ ಲಭಿಸುತ್ತವೆ. ಎಲ್ಲಾ ವಯಸ್ಸಿನ ವಯಸ್ಕರರು ಕೂಡ ತಮ್ಮ ಒಟ್ಟಾರೆ ಅರೋಗ್ಯ ಕಾಪಾಡಿಕೊಳ್ಳುವುದಕ್ಕೆ ಎದೆಹಾಲು ಸಹಾಯ ಮಾಡುತ್ತದೆ.

ಕಿವಿಯ ಚಿಕಿತ್ಸೆಯಾಗಿ
ಕಿವಿಯಲ್ಲಿ ಸೋಂಕು ಆಗುವುದನ್ನು ನೀವು 6 ರಿಂದ 18 ತಿಂಗಳ ಮಕ್ಕಳಲ್ಲಿ ಸಹಜವಾಗಿ ಕಾಣಬಹುದು. ಮಕ್ಕಳಲ್ಲಿ ಹಾಗು ವಯಸ್ಕರರಲ್ಲೂ ಸಹ ಕಿವಿ ಸೋಂಕಿಗೆ ಒಳ್ಳೆಯ ಚಿಕಿತ್ಸೆ ಎಂದರೆ ಅದು ಎದೆಹಾಲನ್ನು ಒಂದು ನೈಸರ್ಗಿಕ ಪರಿಹಾರಕವಾಗಿ ಉಪಯೋಗಿಸುವುದು. ಮಗುವಿನ ಕಿವಿಯೊಳಗೆ 3-4 ಹನಿಗಳಷ್ಟು ಎದೆಹಾಲನ್ನು ಹಾಕಿದರೆ ಅದು ಈ ಸೋಂಕನ್ನು ತೊಲಗಿಸುತ್ತದೆ. ಆದರೆ ಎದೆಹಾಲನ್ನು ಕಿವಿಗೆ ಸೀದಾ ಉಯ್ಯಬೇಡಿ. ಬದಲಿಗೆ, ಕಿವಿಯ ದ್ವಾರದ ಬದಿಯ ಗೋಡೆಯಿಂದ ಹನಿ ಹನಿಯಾಗಿ ಹಾಕಿ.

ಕಣ್ಣಿನ ಚಿಕಿತ್ಸೆಗಾಗಿ
ಕಣ್ಣಿನ ಸೋಂಕು ಅಥವಾ ಕಂಜಂಕ್ಟಿವಿಟಿಸ್ (ಆಡು ಭಾಷೆಯಲ್ಲಿ ಕಣ್ಣಾಗುವುದು ಎನ್ನುವರು) ಆದಲ್ಲಿ, ಅದು ವೈರಲ್, ಬ್ಯಾಕ್ಟೀರಿಯಾಲ್ ಅಥವಾ ಮೈನೂರತೆ ಯಾವುದರಿಂದಲೇ ಆಗಿರಲಿ, ತಾಯಿಯರು ಹಿಂದಿನಿಂದಲೂ ಅದಕ್ಕೆ ಚಿಕಿತ್ಸೆಯಾಗಿ ಎದೆಹಾಲನ್ನು ಬಳಸಿದ್ದಾರೆ. ಎದೆಹಾಲಿನ ಎರಡು ಹನಿಗಳನ್ನು ನೀವು ಕಣ್ಣಿನ ಡ್ರಾಪ್ಸ್ ಜೊತೆಗೆ ಮಗುವಿನ ಕಣ್ಣಿಗೆ ಹಾಕಿದರೆ, ಸೋಂಕು ಹೊರಟು ಹೋಗುತ್ತದೆ. ವಯಸ್ಕರರು ಕೂಡ ಇದರ ಲಾಭ ಪಡೆದುಕೊಳ್ಳಬಹುದು. ಆದರೆ ಇದನ್ನ ಪ್ರಯತ್ನಿಸುವ ಮುನ್ನ ನೀವು ನಿಮ್ಮ ವೈದ್ಯರೊಂದಿಗೆ ಒಮ್ಮೆ ಮಾತಾಡುವುದು ಒಳ್ಳೆಯದೇ.

ಇಷ್ಟೇ ಅಲ್ಲ, ಕಣ್ಣಿಗೆ ಧರಿಸುವ ಕಾಂಟಾಕ್ಟ್ ಲೆನ್ಸ್ ಅನ್ನು ಸ್ವಚ್ಛ ಮಾಡಲಿಕ್ಕೂ ನೀವು ಎದೆಹಾಲನ್ನು ಬಳಸಬಹುದು.

ಗಂಟಲು ನೋವಿಗೆ ಚಿಕಿತ್ಸೆಯಾಗಿ
ಎದೆಹಾಲನ್ನು ಕೇವಲ ಸೇವಿಸಿದರೂ, ಅಥವಾ ಅದರಿಂದ ಬಾಯಿಮುಕ್ಕಳಿಸಿದರು ಸಾಕು ನಿಮ್ಮ ಗಂಟಲು ನೋವು ದೂರವಾಗುತ್ತದೆ. ಒಂದು ವೇಳೆ ನಿಮ್ಮ ಮಗುವಿಗೆ ಗಂಟಲು ನೋವು ಉಂಟಾದರೆ, ಮಗುವಿಗೆ ಎದೆಹಾಲು ನೀಡುವುದು ಬಹಳಾನೇ ಸೂಕ್ತ.

ಸುಟ್ಟ ಗಾಯಕ್ಕೆ ಮತ್ತು ಉರಿತಕ್ಕೆ ಚಿಕಿತ್ಸೆ
ಒಂದು ವೇಳೆ ನಿಮ್ಮ ಮೈ ಮೇಲೆ ಎಲ್ಲಾದರೂ ಚರ್ಮ ಹರಿದ ಗಾಯ ಆಗಿದ್ದು ಅದು ಉರಿ ಮತ್ತು ತುರಿಕೆ ಉಂಟುಮಾಡುತ್ತಿದ್ದರೆ, ಅದನ್ನ ಶಮನ ಮಾಡಲು ನೀವು ಎದೆಹಾಲನ್ನು ಆಯಿಂಟ್ಮೆಂಟ್ ರೀತಿ ಬಳಸಬಹುದು. ಹರಿದ ಚರ್ಮದ ಗಾಯದ ಮೇಲೆ ಒಂದಿಷ್ಟು ಹನಿಗಳಷ್ಟು ಎದೆಹಾಲನ್ನು ಹಚ್ಚಿದರು ಸಾಕು, ಆ ಗಾಯ ಮಾಸುತ್ತದೆ. ಎದೆಹಾಲಿನಲ್ಲಿ ಇರುವ ಪ್ರತಿಕಾಯಗಳು, ಮುಖ್ಯವಾಗಿ IgA, ಗಾಯದ ಮೇಲೆ ಕೀಟಾಣುಗಳು ಬೆಳೆಯುವುದನ್ನು ನಿಲ್ಲಿಸುತ್ತದೆ.

ತ್ವಚೆಯನ್ನು ಶುದ್ಧೀಕರಿಸಲು
ನಿಮಗೆ ಮೊಡವೆಗಳು ಆಗಿದ್ದರೆ ಅಥವಾ ತ್ವಚೆಯ ಇನ್ನ್ಯಾವುದೋ ಅಸ್ವಸ್ಥತೆ ಇದ್ದರೆ, ಹೆಚ್ಚು ಖರ್ಚಿಲ್ಲದ ಪರಿಹಾರವನ್ನಾಗಿ ಎದೆಹಾಲನ್ನು ಪರಿಗಣಿಸಬಹುದು. ಎದೆಹಾಲಿನಲ್ಲಿರುವ ಲುರಿಕ್ ಆಮ್ಲವು ಪ್ರಾಯದ ಮೊಡವೆಗಳನ್ನ ತೊಲಗಿಸುತ್ತವೆ.
ಮೊಡವೆಗಳನ್ನ ತೊಲಗಿಸಲು ಮೊದಲು ನೀರಿನಿಂದ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ನಂತರ, ಮೊಡವೆ ಆದ ಜಾಗಗಳ ಮೇಲೆಲ್ಲಾ ಎದೆಹಾಲನ್ನು ಹಚ್ಚಿ. ನಂತರ, ಅದು ಆರಲು ಹಾಗೆ ಬಿಡಿ.
ಎದೆಹಾಲನ್ನು ನಿಮ್ಮ ತ್ವಚೆಯನ್ನು ಶುದ್ಧೀಕರಿಸಲು ಬಳಸಬೇಕೆಂದರೆ, ಎದೆಹಾಲನನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಅದನ್ನ ಒಂದು ಒಣ ಬಟ್ಟೆಯಿಂದ ಒರೆಸಿಕೊಳ್ಳಿ.

ಅಡುಗೆ ಸಾಮಗ್ರಿಯಾಗಿ
ಬಹಳಷ್ಟು ಜನರು ಹಸುವಿನ ಹಾಲಿನ ಬದಲಿಗೆ ಕಾಫಿ ಮತ್ತು ಚಹಾ ಅಲ್ಲಿ ಎದೆಹಾಲನ್ನು ಬಳಸುವರು. ಎದೆಹಾಲಿನಲ್ಲಿರುವ ಎಷ್ಟೊಂದು ಪೋಷಕಾಂಶಗಳು ಹಸುವಿನ ಹಾಲಿನಲ್ಲಿ ಇರುವುದಿಲ್ಲ. ಎದೆಹಾಲಿನಲ್ಲಿರುವ ಅಲ್ಫಾ-ಲಾಕ್ಟಾಲ್ಬುಮಿನ್, ಸುಮಾರು 40 ಬಗೆಯ ಕ್ಯಾನ್ಸರ್ ಹುಟ್ಟು ಹಾಕುವ ಕೋಶಗಳನ್ನ ನಾಶ ಮಾಡುತ್ತದೆ.

Comments are closed.