ಆರೋಗ್ಯ

ಬೆಳೆಯುವ ಮಕ್ಕಳಿಗೆ ಬುದ್ದಿವಂತಿಕೆಯ ಜೊತೆ ಪೋಷಕಾಂಶ ದೊರೆಯುವಂತಹ “ಬ್ರೈನ್ ಫುಡ್”

Pinterest LinkedIn Tumblr

ನೀವು ನಿಮ್ಮ ಮಗುವಿನ ಬುದ್ದಿವಂತಿಕೆ ಹೇಗೆ ಹೆಚ್ಚು ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಮಾಡಬಹುದಾದ ಕೆಲಸ ಒಂದಿದೆ. ಅದುವೇ ನಿಮ್ಮ ಮಗುವಿಗೆ ಸಕಲ ಪೋಷಕಾಂಶಗಳನ್ನ ಒದಗಿಸುವುದು. ಈ ಎಲ್ಲಾ ಪೋಷಕಾಂಶಗಳನ್ನ ನಿಮ್ಮ ಮಗುವಿಗೆ ದೊರಕುವಂತೆ ಮಾಡಲು ನೀಡಬೇಕಾದ ಹತ್ತು “ಬ್ರೈನ್ ಫುಡ್” ಯಾವು ಎಂದು ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ :

1. ಶ್ರೀಖಂಡ (ಗ್ರೀಕ್ ಯೋಗರ್ಟ್/ Greek Yogurt)
ಮೊಸರಿನಿಂದ ಲ್ಯಾಕ್ಟೋಸ್ ಮತ್ತು ನೀರಿನ ಅಂಶವನ್ನ ತೆಗೆದರೆ ನಿಮಗೆ ಸಿಗುವುದೇ ಈ ಶ್ರೀಖಂಡ. ಇದು ನಿಮ್ಮ ಮಗುವಿನ ಮಾನಸಿಕ ಬೆಳವಣಿಗೆಗೆ ತುಂಬಾ ಪೂರಕವಾಗಿದ್ದು. ಇದು ಒಳ್ಳೆಯ ಪ್ರಮಾಣದ ಸಂಕೀರ್ಣ ವಿಟಮಿನ್ B ಮತ್ತು ನರಪ್ರೇಕ್ಷಕರನ್ನ (neurotransmitters) ಅನ್ನು ಹೊಂದಿದ್ದು, ನಿಮ್ಮ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದದ್ದು. ಇದನ್ನು ತಯಾರು ಮಾಡುವ ರೀತಿ ನಿಮಗೆ ತಿಳಿದಿರದಿದ್ದರೆ, ಇದನ್ನು ಹೇಗೆ ಮಾಡಬೇಕು ಎಂಬುದನ್ನು ನೀವು ಅಂತರ್ಜಾಲದಲ್ಲಿ ತಿಳಿಯಬಹುದು.

2. ತರಕಾರಿಗಳು
ಹಸಿ ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳು (antioxidants) ಹೆಚ್ಚಾಗಿ ಇರುತ್ತವೆ. ಇವುಗಳೇ ಮೆದುಳಿನ ಕೋಶಗಳನ್ನ ಆರೋಗ್ಯವಾಗಿ ಇಡಲಿಕ್ಕೆ ಅಗತ್ಯವಾದವು. ನಿಮ್ಮ ಮಗುವಿನ ಆಹಾರದಲ್ಲಿ ಇರಬೇಕಾದ ತರಕಾರಿಗಳು ಎಂದರೆ ಅವು – ಕ್ಯಾರಟ್, ಕುಂಬಳಕಾಯಿ, ಗೆಣಸು ಮತ್ತು ಇನ್ನೂ ಹಲವು. ಎಲೆ ತರಕಾರಿಗಳು, ಪಾಲಕ್ ಸೊಪ್ಪು ಕೂಡ ನಿಮ್ಮ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದವು.

3. ಕೋಸುಗಡ್ಡೆ (Broccoli)
ಇದು ಕೇವಲ ಎಲ್ಲ ಪೋಷಕಾಂಶ ಇರುವ “ಸೂಪರ್ ಫುಡ್” ಅಷ್ಟೇ ಅಲ್ಲ. ಇದು ಒಂದು ಪರಿಣಾಮಕಾರಿ “ಬ್ರೈನ್ ಫುಡ್” ಕೂಡ ಹೌದು. ಇದರಲ್ಲಿ ಇರುವ DHA ಅಂಶವು, ಮೆದುಳಿನ ನರಕೋಶಗಳನ್ನ ಪುನರ್ಯೌವನಗೊಳಿಸುತ್ತದೆ. ಇಷ್ಟೇ ಅಲ್ಲದೆ ಇದು ನಮ್ಮ ದೇಹದಲ್ಲಿ ಕಾನ್ಸರ್ ಹುಟ್ಟು ಹಾಕುವ ಅಂಶಗಳನ್ನ ಕೂಡ ಹೊರ ಹಾಕುತ್ತದೆ.

4. ಅವಕ್ಯಾಡೊ
ಅವಕ್ಯಾಡೊಗಳು ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಗಳನ್ನ ಮತ್ತು ಒಲಿಯಿಕ್ ಆಸಿಡ್ ಗಳನ್ನ ಹೊಂದಿರುತ್ತಾರೆ. ಅನ್ ಸ್ಯಾಚುರೇಟೆಡ್ ಫ್ಯಾಟಿ ಆಮ್ಲಗಳು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಒಲಿಯಿಕ್ ಆಮ್ಲವು ಮೆದುಳಲ್ಲಿ ಇರುವ ಮೈಯೆಲಿನ್ ಅನ್ನು ರಕ್ಷಿಸುತ್ತದೆ ಮತ್ತು ಪೋಷಿಸುತ್ತದೆ. ಮೆದುಳಿಗೆ ಗಂಟೆಗೆ 200 ಮೈಲಿ ವೇಗದಲ್ಲಿ ತಲಪಿಸುವುದು ಸಾಮರ್ಥ್ಯ ಇರುವುದು ಇದೇ ಮೈಯೆಲಿನ್ ಗೆ.

5. ಮೀನು
ಸಾಲ್ಮನ್ ಅಥವಾ ಟ್ಯೂನ ಮೀನುಗಳಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ ಇದ್ದು, ಈ ಆಸಿಡ್ ನಿಮ್ಮ ಮಗುವಿನ ಮೆದುಳಿನ ಕೋಶಗಳನ್ನ ಕಟ್ಟುವುದರಲ್ಲಿ ಮತ್ತು ಬೆಳೆಸುವುದರಲ್ಲಿ ದೊಡ್ಡ ಪಾತ್ರವಹಿಸುತ್ತದೆ. ನಿಮ್ಮ ಮಗು ವಾರದಲ್ಲಿ 2-3 ಬಾರಿ ಮೀನನ್ನು ಸೇವಿಸಬಹುದು. ಆದರೆ ಪಾದರಸ (ಮರ್ಕ್ಯುರಿ) ಮಲಿನತೆ ಹೆಚ್ಚಿರುವ ಮಿನುಗಳನ್ನ ನೀಡದಂತೆ ನೋಡಿಕೊಳ್ಳಿ.

6. ಮೊಟ್ಟೆಗಳು
ಮೊಟ್ಟೆಗಳು ಒಮೇಗಾ-3 ಫ್ಯಾಟಿ ಆಸಿಡ್, ಜಿಂಕ್, ಲ್ಯೂಟೀನ್ ಮತ್ತು ಐರನ್ ಅಂಶ ಬಹಳಷ್ಟು ಇರುತ್ತದೆ. ನಿಮ್ಮ ಮಗುವಿಗೆ ದಿನಕ್ಕೆ ಒಂದು ಮೊಟ್ಟೆ ನೀಡುವುದು ಒಳ್ಳೆಯದು. ಇದು ನಿಮ್ಮ ಮಗುವಿನ ಜ್ಞಾಪಕ ಶಕ್ತಿ ಮತ್ತು ಏಕಾಗ್ರತಾ ಶಕ್ತಿ ಹೆಚ್ಚಿಸುತ್ತದೆ.

7. ಧಾನ್ಯಗಳು
ಗೋಧಿ, ರಾಗಿ, ಜೋಳ ಮತ್ತು ಇನ್ನಷ್ಟು ಧಾನ್ಯಗಳು ಫೋಲೇಟ್ ಅನ್ನು ಹೊಂದಿರುತ್ತವೆ. ಈ ಧಾನ್ಯಗಳು ನಿಮ್ಮ ಮಗುವಿನ ಮೆದುಳಿನ ಶಕ್ತಿಯನ್ನ ಹೆಚ್ಚಿಸುತ್ತವೆ ಮತ್ತು ಇದನ್ನ ಪ್ರತಿದಿನ ಸೇವಿಸುವುದರಿಂದ ನಿಮ್ಮ ಮಗುವೂ ದಿನವೆಲ್ಲ ಆಕ್ಟಿವ್ ಇರುತ್ತದೆ.

8. ಓಟ್ಸ್
ಅಧ್ಯಯನಗಳ ಪ್ರಕಾರ ಪ್ರತಿದಿನ ಬೆಳಗ್ಗೆ ಓಟ್ಸ್ ಅನ್ನು ಸೇವಿಸುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದು B ಕಾಂಪ್ಲೆಕ್ಸ್ ವಿಟಮಿನ್, ವಿಟಮಿನ್ E, ಜಿಂಕ್ ಅನ್ನು ಒಳಗೊಂಡಿರುತ್ತದೆ.

9. ಬೆರಿ ಹಣ್ಣುಗಳು
ಬ್ಲೂಬೆರ್ರಿ, ಬ್ಲಾಕ್ ಬೆರಿ, ರಾಸ್ಪ್ಬೇರಿ ಮತ್ತು ಸ್ಟ್ರಾಬೆರಿ – ಇವುಗಳೆಲ್ಲವೂ ಈಗ ಭಾರತೀಯ ಮಾರುಕಟ್ಟೆಯಲ್ಲಿ ಸರಳವಾಗಿ ಲಭ್ಯವಿವೆ. ಈ ರುಚಿಕರ ಹಣ್ಣುಗಳನ್ನ ಪ್ರತಿದಿನ ಸಂಜೆ ಕೊಡುವುದನ್ನು ಮರೆಯಬೇಡಿ. ಇವುಗಳಲ್ಲಿರುವ ವಿಟಮಿನ್ C, ನಿಮ್ಮ ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಿ ನಿಮ್ಮ ಮಗುವಿನ ಕಾರ್ಯ ನಿರ್ವಹಣೆ ಚೆನ್ನಾಗಿ ಆಗುತ್ತದೆ.

10. ಬೀಜಗಳು
ಒಣ ಹಣ್ಣುಗಳು ಅಥವಾ ಬೀಜಗಳಾದ ಬಾದಾಮಿ, ಪಿಸ್ತಾ, ಗೋಡಂಬಿ, ಮತ್ತು ಮರಗಡಲೆ, ಒಳ್ಳೆಯ ಬ್ರೈನ್ ಫುಡ್ಸ್ ಎಂದು ಪರಿಗಣಿಸಲಾಗಗಿದೆ. ಇವು ನಿಮ್ಮ ಮಗುವಿನ ಮೆದುಳನ್ನ ದಿನದುದ್ದಕ್ಕೂ ಸಕ್ರಿಯವಾಗಿರಿಸಿ, ಮಾಹಿತಿಯನ್ನ ಬೇಗನೆ ಹೀರಿಕೊಳ್ಳುವಂತೆ ಮಾಡುತ್ತವೆ.

Comments are closed.