ಕರ್ನಾಟಕ

ಮಕ್ಕಳ ಚರ್ಮದಲ್ಲಿ ಮೂಡುವ ಕಪ್ಪು ಕಲೆಗಳ ನಿವಾರಣೆಗೆ ನೈಸರ್ಗಿಕ ಪರಿಹಾರ

Pinterest LinkedIn Tumblr

ಮಕ್ಕಳ ಚರ್ಮವು ತುಂಬಾ ಸೂಕ್ಹ್ಮವಾಗಿದ್ದು, ಹಲವು ಕಾರಣಕ್ಕೆ ಅವರ ತ್ವಚೆಯಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಅವರ ತ್ವಚೆಯಲ್ಲಿ ಕಲೆಗಳು ಬರುವ ಮೊದಲು ಅವರನ್ನು ಜೋಪಾನ ಮಾಡುವುದು ಒಳಿತು, ಆದರೆ ನನ್ನ ಮಗುವಿನ ಚರ್ಮದ ಮೇಲೆ ಕಲೆಗಳಿವೆ ನಾನು ಏನು ಮಾಡಲಿ ಎಂದು ಚಿಂತಿಸ ಬೇಡಿ. ಇದಕ್ಕೆ ಈ ಲೇಖನ ನಿಮಗೆ ಸಹಾಯ ಮಾಡುತ್ತದೆ.

ಮಕ್ಕಳ ಚರ್ಮದಲ್ಲಿ ಕಪ್ಪು ಕಲೆಗಳು ಅಥವಾ ಕಲೆಗಳು ಮೂಡಲು ಕಾರಣವೆಂದರೆ, ಸೊಳ್ಳೆ ಕಡಿತ, ಕೀಟಗಳ ಕಡಿತ, ಅಲರ್ಜಿ, ಒದ್ದೆ ಬಟ್ಟೆಯನ್ನು ಹೆಚ್ಚು ಕಾಲ ಧರಿಸಿರುವುದು ಮತ್ತು ಇತ್ಯಾದಿಗಳು. ಈ ಕಲೆಗಳು ಮಕ್ಕಳಲ್ಲಿ ಕಡಿತವನ್ನು ಅಥವಾ ನವೆಯನ್ನು ಅಥವಾ ಕಿರಿಕಿರಿಯನ್ನು ಉಂಟು ಮಾಡಬಹುದು. ಇದರಿಂದ ಗಾಯದ ಸಮಸ್ಯೆಯನ್ನು ಸಹ ಮಕ್ಕಳು ಎದುರಿಸ ಬೇಕಾಗಬಹುದು.

ಇವುಗಳನ್ನು ತೆಗೆಯಲು ಕೆಲವು ನೈಸರ್ಗಿಕ ಮತ್ತು ಯಾವುದೇ ಅಡ್ಡಪರಿಣಾಮ ಇಲ್ಲದ ಕೆಲವು ಮಾರ್ಗಗಳಿವೆ.
೧.ನಿಂಬೆರಸವನ್ನು ಕಲೆ ಇರುವ ಜಾಗದಲ್ಲಿ ನಿಧಾನವಾಗಿ ಮಸಾಜ್ ಮಾಡಿ, ೧೦ ರಿಂದ ೧೫ ನಿಮಿಷದ ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ. ಇದನ್ನು ದಿನದಲ್ಲಿ ೨-೩ ಬಾರಿ ಮಾಡಿ. ಇದನ್ನು ಹೆಚ್ಚು ಬಾರಿ ಅಥವಾ ಹೆಚ್ಚು ಸಮಯ ಮಗುವಿನ ತ್ವಚೆಯ ಮೇಲೆ ಇರಲು ಬಿಡಬೇಡಿ, ಏಕೆಂದರೆ ಇದರಲ್ಲಿರುವ ವಿಟಮಿನ್ ಸಿ ಮಗುವಿಗೆ ಕಿರಿಕಿರಿ ಉಂಟು ಮಾಡಬಹುದು.
೨.ಲ್ಯಾವೆಂಡರ್ ಎಣ್ಣೆಯನ್ನು ಬಳಸಿ. ಕಪ್ಪು ಕಲೆಗಳಿರುವ ಜಾಗದಲ್ಲಿ ಇದನ್ನು ಹಚ್ಚಿ ೧೦ ರಿಂದ ೨೦ ನಿಮಿಷಗಳ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ಇದನ್ನು ದಿನದಲ್ಲಿ ೨ರಿಂದ ೩ ಬಾರಿ ಮಾಡಿ.
೩.ಬಾಳೆಹಣ್ಣು ಸಿಪ್ಪೆ ಅಥವಾ ಕಲ್ಲಂಗಡಿ ಹಣ್ಣಿನ ಒಳಭಾಗದ ಬಿಳಿ ಪದರವನ್ನು ಸೊಳ್ಳೆ ಕಚ್ಚಿರುವ ಜಾಗದಲ್ಲಿ ಇರಿಸಿ ಮಸಾಜ್ ಮಾಡಿ ಅಥವಾ ವೃತ್ತಾಕಾರದಲ್ಲಿ ಒರೆಸಿ ತಣ್ಣೀರಿನಿಂದ ತೊಳೆಯಿರಿ.
೪.ಲೋಗಸರದ ಲಾಭವನ್ನು ಪಡೆದುಕೊಳ್ಳಿ. ಇದನ್ನು ತ್ವಚೆಗೆ ಹಚ್ಚಿ ನಂತರ ತೊಳೆಯಿರಿ.
೫.ಸುವರ್ಣಗೆಡ್ಡೆಯನ್ನು ಸಣ್ಣಗೆ ಕತ್ತರಿಸಿ ಅದರಿಂದ ಸೊಳ್ಳೆ ಕಚ್ಚಿರುವ ಜಾಗಕ್ಕೆ ಉಜ್ಜಿ ಅದು ಒಣಗಿದ ನಂತರ ನೀರಿನಲ್ಲಿ ತೊಳೆಯಿರಿ.

ಮಗುವನ್ನು ಜೋಪಾನವಾಗಿರಿಸುವುದು ತುಂಬಾ ಮುಖ್ಯ, ಮಗುವು ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳಲು ಮಗುವಿಗೆ ಪೂರ್ಣ ಮುಚ್ಚಿಕೊಳ್ಳುವಂತಹ ಬಟ್ಟೆಯನ್ನು ಧರಿಸಿ. ಮಲಗಿಸುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಿ, ರಾಸಾಯನಿಕಗಳಿಂದ ಮಾಡಿದ ಸೊಳ್ಳೆ ಬತ್ತಿ ಮುಂತಾದವುಗಳನ್ನು ಹೆಚ್ಚು ಬಳಸಬೇಡಿ. ಅವುಗಳು ಮಗುವಿನಿಂದ ದೂರ ಇರುವುದೇ ಒಳ್ಳೆಯದು.

ಮನೆಯೊಳಗೇ ಸೊಳ್ಳೆ ಬರದಂತೆ ಮಾಡಲು ಮನೆ ಸುತ್ತ ತುಳಸಿ ಗಿಡಗಳನ್ನು ಬೆಳಸಿ.

Comments are closed.