ಆರೋಗ್ಯ

ಲೈಂಗಿಕ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಕಬ್ಬಿನಹಾಲು ಕುಡಿಯಿರಿ !

Pinterest LinkedIn Tumblr

ಸಾಮಾನ್ಯಯಾಗಿ ಪುರುಷರನ್ನು ಕಾಡುವ ಲೈಂಗಿಕ ನಿಶ್ಯಕ್ತಿಯನ್ನು ಹೋಗಲಾಡಿಸುವಲ್ಲಿ ಕಬ್ಬಿನ ಹಾಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ಕಬ್ಬಿಣ ಹಾಲು ಅಥವಾ ಕಬ್ಬು ತಿನ್ನುವುದರಿಂದ ಲೈಂಗಿಕ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು. ಕಬ್ಬಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ. ನಿರಂತರವಾಗಿ ಕೆಲ ದಿನಗಳ ವರೆಗೆ ಬೆಳಿಗ್ಗೆ ಕಬ್ಬಿಣ ಹಾಲು ಸೇವನೆಯಿಂದ ಪುರುಷತ್ವವನ್ನು ಹೆಚ್ಚಾಗುತ್ತದೆ. ಹಾಗೂ ಲೈಂಗಿಕ ಕ್ರಿಯೆಯಲ್ಲಿ ಅಮಿತಾನಂದವನ್ನು ನೀಡುತ್ತದೆ.

ಇಷ್ಟೇ ಅಲ್ಲ, ಕಬ್ಬಿನ ಹಾಲು ಅಮೃತಕ್ಕೆ ಸಮ ನಾದ ಪೌಷ್ಠಿಕ ದ್ರವರೂಪದ ಆಹಾರ. ಕಬ್ಬನ್ನು ಅಗಿದು ತಿಂದು ಊಟದ ನಂತರ ಕಬ್ಬಿನ ಹಾಲು ಕುಡಿದರೆ ಪಚನಕ್ರಿಯೆ ವೃದ್ಧಿಸುತ್ತದೆ. ಕಬ್ಬಿನ ಹಾಲುಯಥೇಚ್ಚವಾಗಿ ಕಬ್ಬಿನ ಹಾಲನ್ನು ಸೇವಿಸುವುದರಿಂದ ಕಾಮಾಲೆರೋಗ (ಜಾಂಡಿಸ್) ದೂರವಾಗುತ್ತದೆ. ಕಬ್ಬನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲುಗಳು ಸದೃಢಗೊಂಡು ಸ್ವಚ್ಚವಾಗುತ್ತದೆ. ವಸಡು ಸಹ ಬಲಿಷ್ಠವಾಗುತ್ತದೆ.

ಹಲ್ಲುಗಳ ನಡುವೆ ಅವಿತುಕೊಂಡಿರುವ ರೋಗಕಾರಕ ಸೂಕ್ಷ್ಮಾಣುಗಳನ್ನು ಇದು ಕೊಲ್ಲುತ್ತದೆ. ಆಲೆಮನೆಗಳಲ್ಲಿ ಸಂಸ್ಕರಿಸುವ ಪರಿಶುದ್ಧ ಕಬ್ಬಿನಹಾಲು ತುಂಬಾ ಆರೋಗ್ಯಕರ ಪಾನೀಯ. ಇದನ್ನು ನಿಂಬೆ ರಸ, ಶುಂಠಿ ರಸ ಮತ್ತು ಏಲಕ್ಕಿಪುಡಿಯೊಂದಿಗೆ ಮಿಶ್ರಣ ಮಾಡಿ ಕುಡಿದರೆ ತುಂಬಾ ರುಚಿಕರ, ಸ್ವಾದಿಷ್ಟ ಮತ್ತು ಆರೋಗ್ಯಕರವಾಗಿಯೂ ಇರುತ್ತದೆ. ಉರಿಮೂತ್ರ, ಮೂತ್ರ ವಿಸರ್ಜನೆ ಸಮಸ್ಯೆ, ಮೂತ್ರ ಹೋಗಲು ಕಷ್ಟವಾಗುವಿಕೆ, ಬಾಯಾರಿಕೆ, ಜ್ವರ, ಕೆಮ್ಮು, ಅಜೀರ್ಣ, ಮಲಬದ್ದತೆ, ಕೀಲುನೋವು, ಜ್ಞಾಪಕ ಶಕ್ತಿ ಕೊರತೆ, ರಕ್ತಹೀನತೆ ಮತ್ತು ಹೊಟ್ಟೆ ಹುಣ್ಣು ಸಮಸ್ಯೆಗಳಿಂದ ನರಳುತ್ತಿರುವವರಿಗೆ, ಕಬ್ಬಿನ ಹಾಲಿನೊಂದಿಗೆ ಎಳನೀರು, ನಿಂಬೆರಸ ಮತ್ತು ಶುಂಠಿ ರಸ ಬೆರೆಸಿ ಕುಡಿಸಬೇಕು.

(ಈ ಸಂಜೆ )

Comments are closed.