ಅಂತರಾಷ್ಟ್ರೀಯ

92 ವರ್ಷದ ಶ್ರೀಮಂತ ವೃದ್ಧನನ್ನು ಮದುವೆಯಾದ 29ರ ಮಹಿಳೆ ! ಮದುವೆಗೆ ಕಾರಣ ಕೇಳಿದರೆ ನೀವು ಶಾಕ್ ಆಗಬಹುದು…

Pinterest LinkedIn Tumblr

ಆಫ್ರಿಕಾದ 29 ವರ್ಷದ ಮಹಿಳೆಯೊಬ್ಬಳು 92 ವರ್ಷದ ವೃದ್ಧನನ್ನು ವಿವಾಹವಾಗಿರುವುದು ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಣದ ಆಸೆಗಾಗಿ ಈಕೆ ವೃದ್ಧನನ್ನು ವಿವಾಹವಾಗಿದ್ದಾಳೆ ಎಂದು ಅನೇಕರು ಟೀಕಿಸಿದ್ದಾರೆ.

ಆಫ್ರಿಕಾದ ಜಾಂಬಿಯಾ ದೇಶದ ಚಾರಿಟಿ ಮುಂಬಾ ಎಂಬಾಕೆ ದಕ್ಷಿಣ ಆಫ್ರಿಕಾದ ಪೀಟರ್ಸ್ ಗ್ರೋವ್ಸ್ ಎಂಬುವವರನ್ನು ಇತ್ತೀಚೆಗೆ ವಿವಾಹವಾಗಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಿದ್ದಳು. ಷೇರು ಪೇಟೆಯಲ್ಲಿ ಭಾರಿ ಹೂಡಿಕೆ ಮಾಡಿರುವ ಗ್ರೋವ್ಸ್ ಭಾರಿ ಶ್ರೀಮಂತ ಎನ್ನಲಾಗಿದೆ. ಅವರ ಒಟ್ಟು ಆಸ್ತಿ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕಡುಗಪ್ಪು ಬಣ್ಣದ ಚಾರಿಟಿ ಮುಂಬಾ, ಬಿಳಿಯ ಬಣ್ಣದ ವೃದ್ಧ ಗ್ರೋವ್ಸ್ ರನ್ನು ವಿವಾಹವಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ತನಗಿಂತ ಸುಮಾರು 60 ವರ್ಷ ಹಿರಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಕ್ಕಾಗಿ ಚಾರಿಟಿ ಮುಂಬಾ ನಡೆಗೆ ನೋಡಿ ಆಘಾತವಾಗಿದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಜಾಂಬಿಯಾದಲ್ಲಿ ಯುವತಿಯರು ಶ್ರೀಮಂತ ವೃದ್ಧರನ್ನು ವಿವಾಹವಾಗುತ್ತಿದ್ದಾರೆ. ಅನೇಕ ಯುವತಿಯರು ಇದಕ್ಕಾಗಿ ವಿದೇಶಕ್ಕೂ ತೆರಳುತ್ತಿದ್ದಾರೆ.

Comments are closed.