ಕರಾವಳಿ

ಇನ್ಲ್ಯಾಂಡ್ ಸಂಸ್ಥೆಯ ಪ್ರತಿಷ್ಠಿತ “ಇನ್ಲ್ಯಾಂಡ್ ಸಿಯೋನ್” ವಸತಿ ಸಮುಚ್ಚಯ ಉದ್ಘಾಟನೆ

Pinterest LinkedIn Tumblr

ಮುಖ್ಯ ಸಂಚಾರಿ ಮೇಲ್ವಿಚಾರಕ ಜೋ ಗೋನ್ಸಾಲ್ವಿಸ್ ಅವರಿಂದ ನೂತನ ವಸತಿ ಸಮುಚ್ಚಯ ಉದ್ಘಾಟನೆ

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ಜನವರಿ.30: ನಗರದ ಪ್ರತಿಷ್ಠಿತ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಸಂಸ್ಥೆ ‘ಇನ್ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ‘ ವತಿಯಿಂದ ನಗರದ ಫಳ್ನೀರ್ ಮುಖ್ಯ ರಸ್ತೆಯ ಪರಿಸರದಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಿಸಲಾದ ” ಇನ್ಲ್ಯಾಂಡ್ ಸಿಯೋನ್ ” ವಸತಿ ಸಮುಚ್ಚಯದ ಉದ್ಘಾಟನೆ ರವಿವಾರ ಸಂಜೆ ನೆರವೇರಿತು.

ಮುಖ್ಯ ಸಂಚಾರಿ ಮೇಲ್ವಿಚಾರಕ ಜೋ ಗೋನ್ಸಾಲ್ವಿಸ್ ಅವರು ನೂತನ ವಸತಿ ಸಮುಚ್ಚಯವನ್ನು ಉದ್ಘಾಟಿಸಿದರು. ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್ ಅಬ್ದುಲ್ ರವೂಫ್, ಕ್ರೆಡೈ ಅಧ್ಯಕ್ಷ ಡಿ.ಬಿ. ಮೆಹ್ತಾ, ಜಗದೀಶ್ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದು , ಇನ್ಲ್ಯಾಂಡ್ ನಿರ್ಮಾಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಆಡಳಿತ ಮಂಡಳಿಯ ನಿರ್ದೇಶಕ ಸಿರಾಜ್ ಅಹಮ್ಮದ್ ಸ್ವಾಗತಿಸಿದರು.ನಿರ್ದೇಶಕರಾದ ಮೆರಾಜ್ ಯೂಸುಫ್ ಉಪಸ್ಥಿತರಿದ್ದರು.

ಉದ್ಘಾಟನೆಗೂ ಮುನ್ನ ಬೆಳಿಗ್ಗೆ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಗುರುಗಳಿಂದ ಪೂಜೆ, ದುವಾ, ಪ್ರಾರ್ಥನೆ ನೆರವೇರಿತು.

“ಇನ್ಲ್ಯಾಂಡ್ ಸಿಯೋನ್” ವೈಶಿಷ್ಟ್ಯ…

ಉನ್ನತ ದ ಅತ್ಯಾಧುನಿಕ ಸೌಲಭ್ಯಗಳ ಉತ್ಕೃಷ್ಟ ಗುಣಮಟ್ಟದ ಐಶಾರಾಮಿ ಅಪಾರ್ಟ್ಮೆಂಟ್ಗಳನ್ನು ”ಇನ್ಲ್ಯಾಂಡ್ ಸಿಯೋನ್” ವಸತಿ ಸಮುಚ್ಚಯದಲ್ಲಿ ಸಾದರ ಪಡಿಸಿದೆ. ಈ ವಸತಿ ಸಮುಚ್ಚಯದಲ್ಲಿ 5 ಅಂತಸ್ತಿಮ 3ಬಿಎಚ್ಕೆಗಳ 25 ಫ್ಲಾಟ್ಗಳು ಅತ್ಯುತ್ತಮವಾಗಿ ರೂಪುಗೊಂಡಿದ್ದು, ವಿಶಾಲವಾದ ಲಾಬಿ, ಸಂದರ್ಶನಕರ ಲಾಂಜ್, ಜಿಮ್ನೇಶಿಯಂ, ವೀಡಿಯೊ ಡೋರ್ ಫೋನ್ ಸಿಸ್ಟಮ್, ಸಿಸಿಟಿವಿ ಪ್ರತಿ ಫ್ಲಾಟ್ಗಳಲ್ಲಿ ತ್ಯಾಜ ಸಂಸ್ಕರಣಾ ವಿಲೇವಾರಿ ವ್ಯವಸ್ಥೆ, ಮಕ್ಕಳ ಆಟದ ತಾಣ, ಡಬಲ್ ಎಲಿವೇಟರ್ ಹಾಗೂ ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಮಂಗಳೂರು ನಗರಕ್ಕೆ ಅತ್ಯಾಕರ್ಷಕ, ಆಧುನಿಕ ವಿನ್ಯಾಸದ ಸುಂದರ ಕಟ್ಟಡಗಳನ್ನು ಕಟ್ಟಿ ಮಂಗಳೂರು ಕೂಡ ಬೇರೆಬೇರೆ ಹೈಟೆಕ್ ಸಿಟಿಗಳಂತೆ ಸುಂದರವಾಗಿ ಕಾಣಲು ಇನ್ ಲ್ಯಾಂಡ್ ಸಂಸ್ಥೆ ಕೊಟ್ಟ ಕಾಣಿಕೆ ಅಪಾರ. ನಗರದ ಪ್ರಹತಿ ಹಾಗೂ ಮೆರುಗನ್ನು ಇಮ್ಮಡಿಗೊಳಿಸಿರುವ ಇನ್ಲ್ಯಾಂಡ್ ಸಂಸ್ಥೆಯ ಈ ಕೊಡುಗೆಯು ಮಂಗಳೂರು ಜನತೆಯು ಹೆಮ್ಮೆಪಡುವಂತಾಗಲು ಇನ್ಲ್ಯಾಂಡ್ ಸಂಸ್ಥೆಯ ಆಡಳಿತ ಮಂಡಳೀಯ ನಿರ್ದೇಶಕ ಸಿರಾಜ್ ಅಹಮ್ಮದ್ ರವರು ಕಾರಣಕರ್ತರು. ಅವರ ಮುಂದಾಲೋಚನೆ ಪ್ರಾಮಾಣಿಕ ಪ್ರಯತ್ನ ಮತ್ತು ಕಟ್ಟಡ ನಿರ್ಮಾಣದ ಗುಣಮಟ್ಟದಲ್ಲಿನ ಕಟ್ಟುನಿಟ್ಟಿನ ನಿಲುವು ಈ ಎಲ್ಲ ಯಶಸ್ಸಿಗೆ ಕಾರಣವಾಗಿದೆ.

ಈ ಸಂಸ್ಥೆಯು ನಿರ್ಮಾಣ ಕ್ಷೇತ್ರದಲ್ಲಿ ನುರಿತ ತಜ್ಞರ ತಂಡವನ್ನು ಹೊಂದಿದ್ದು, ಅತ್ಯುತ್ತಮವಾದ ಮಾದರಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಗ್ರಾಹಕರ ನಿರೀಕ್ಷೆಯ ಸಾಕಾರ , ಸಂತೃಪ್ತಿ ಇನ್ ಲ್ಯಾಂಡ್ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವಾಗಿದೆ ಎಂದು ನಿರ್ದೇಶಕ ಮೆರಾಜ್ ಯೂಸುಫ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಇನ್ಲ್ಯಾಂಡ್ನ್ ಪ್ರತಿಯೊಂದು ವಸತಿ ಮತ್ತು ವಾಣಿಜ್ಯ ಯೋಜನೆಗಳು ವ್ಯೂಹಾತ್ಮಕ ಹಾಗೂ ಆಕರ್ಷಕ ವಿನ್ಯಾಸಗಳ ವಸತಿ ಸಮುಚ್ಚಯಗಳ ಮೂಲಕ ಗ್ರಾಹಕ ಬಂಧುಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಇನ್ ಲ್ಯಾಂಡ್ ಸಂಸ್ಥೆಯು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 3 ದಶಕಗಳಿಂದ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದು ಗ್ರಾಹಕ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಸಂಸ್ಥೆಯೊಂದಿಗೆ ವಿಶ್ವಾಸನೀಯ ಭಾಂಧವ್ಯ ಬೆಳೆಸಿಕೊಂಡಿರುವ ಎಲ್ಲಾ ಗ್ರಾಹಕ ಬಂಧುಗಳಿಗೂ ಹೃತ್ಪೂರ್ವಕ ಕೃತಜ್ನತೆಗಳನ್ನು ಸಲ್ಲಿಸಿರುವ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸಿರಾಜ್ ಅಹಮ್ಮದ್ ರವರು ಮುಂದೆಯು ತನ್ನ ಸಂಸ್ಥೆಯು ಪ್ರಗತಿಪರ ನಿಟ್ಟಿನಲ್ಲಿ ಸಾಗಲು ತಮ್ಮೆಲ್ಲರ ಸಹಕಾರವನ್ನು ಬಯಸಿರುತ್ತಾರೆ.

ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.inlandbuilders.net ನ್ನು ಸಂಪರ್ಕಿಸಬಹುದಾಗಿದೆ.

Corporate Office – Mangalore

IN-LAND® INFRASTRUCTURE DEVELOPERS PVT LTD
IN-LAND BUILDERS®
3rd Floor, IN-LAND ORNATE,
Navbharath Circle, Kodialbail,
Mangalore – 575003.
Karnataka, India

Tel: +91 824 2496110 / 2492180 / 2491795
Fax: +91 824 2496291
Email: info@inlandbuilders.net
Mobile: +91 9972089099

Registered Office- Bangalore

IN-LAND® INFRASTRUCTURE DEVELOPERS PVT LTD
IN-LAND BUILDERS®
“Abhilasha Arcade”, #495
3rd floor, CBI Road
R. T. Nagar, Bangalore-560032.

Telefax: +91 80 23545277
Email: mktg.blr@inlandbuilders.net
Mobile: +91 9880145145

FOR BOOKINGS IN DUBAI

Inland General Trading LLC
304-1, Zabeel Business Centre
Behind Karama Post Office
Karama, Dubai, UAE, P.O Box-28452.
Email: info@inlandtrading.ae
Mobile: +97143955659 / +971563748091

IN-LAND INFRASTRUCTURE DEVELOPERS PVT. LTD

“Inland ornate, 3rd floor, Navabharath Circle, Mangaluru- 575003.

Contact: +91824 2496110, +91 9880138015, +919972014055
E-mail: info@inlandbuilders.net

Comments are closed.