ನಿಮ್ಮಲ್ಲಿ ವೀರ್ಯಾಣು ಕೊರತೆ ಸಮಸ್ಯೆ ಇದೆಯೇ, ವೀರ್ಯಾಣು ಪ್ರಮಾಣ ಹೆಚ್ಚಿಸಬೇಕೆಂದಿದ್ದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ನೋಡಿ, ಅದ್ಭುತ ಫಲಿತಾಂಶ ಪಡೆಯಿರಿ ಎನ್ನುತ್ತಾರೆ ತಜ್ಞರು.
ಮದ್ಯ ಸೇವನೆ, ಧೂಮಪಾನ ಬಿಟ್ಟು ಬಿಡಿ
ಧೂಮಪಾನವು ವೀರ್ಯಾಣು ಪ್ರಮಾಣದ ಜತೆಗೆ ಅವುಗಳ ಕ್ಷಮತೆಯನ್ನು ಕುಗ್ಗಿಸುತ್ತದೆ. ಮಾತ್ರವಲ್ಲದೆ ವೀರ್ಯದ ಜೀವಿತಾವಧಿ ಕಡಿಮೆಗೊಳಿಸುತ್ತದೆ. ಅದೆ ರೀತಿ ಸಂತತಿಯಲ್ಲಿ ಕೆಲವೊಂದು ಅನುವಂಶಿಕ ಬದಲಾವಣೆಗಳನ್ನು ಉಂಟುಮಾಡುವ ಸಾಧ್ಯತೆಯೂ ಇದೆ. ಮದ್ಯ ವು ವೀರ್ಯಾಣು ಮತ್ತು ಮತ್ತು ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಉತ್ಪಾದನೆ ಕಡಿಮೆಯಾಗಲು ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ.
ನಿಯಮಿತವಾಗಿ ವ್ಯಾಯಾಮ ಮಾಡಿ
ಆದರೆ ವ್ಯಾಯಾಮದ ತೀವ್ರತೆ ಮತ್ತು ಅವಧಿ ಕುರಿತು ನಿಗಾ ವಹಿಸಬೇಕು. ಅತಿಯಾದ ದೈಹಿಕ ವ್ಯಾಯಾಮದಿಂದ ನಿಮ್ಮ ಫಲವಂತಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಅತಿಯಾದ ತೂಕವು ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೋಜನ್‌ಗಳ ಅಸಮತೋಲನಕ್ಕೆ ಕಾರಣವಾಗಿದ್ದರೆ ತೂಕ ವ್ಯಾಯಾಮದಿಂದ ಇಳಿಸಿಕೊಳ್ಳಿ.
ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ
ಪೌಷ್ಟಿಕಾಂಶಯುಕ್ತ ಆಹಾರ ತಿನ್ನಿ, ಕೊಬ್ಬಿನ ಅಂಶ ಕಡಿಮೆ ಇರಲಿ. ಹೆಚ್ಚಿನ ಪ್ರೊಟೀನ್‌ಆಹಾರದಲ್ಲಿರಲಿ. ತರಕಾರಿ, ಇಡೀ ಕಾಳುಗಳ ಸೇವನೆಗೆ ಆದ್ಯತೆ ನೀಡಿ. ಕೆಫೀನ್‌ಯುಕ್ತ ಪದಾರ್ಥಗಳಿಂದ ದೂರವಿರಿ.
ತೈಲ ಮತ್ತು ಮಾತ್ರೆ ಬಳಕೆ ನಿಲ್ಲಿಸಿ
ಗುಪ್ತಾಂಗಗಳಲ್ಲಿ ಅತಿಯಾಗಿ ತೈಲ, ಮಾತ್ರೆ ಬಳಕೆ ನಿಲ್ಲಿಸಿ, ಇವುಗಳು ವೀರ್ಯಾಣುಗಳ ನಶಿಸುವಿಕೆಗೆ ಕಾರಣವಗುತ್ತವೆ. ಸೆಲ್‌ಪೋನ್‌ಗಳನ್ನು ಪ್ಯಾಂಟ್‌ಜೇಬು, ತೊಡೆಗಳಲ್ಲಿ ಲಾಪ್‌ಟಾಪ್‌ಇರಿಸಿಕೊಳ್ಳ ಬೇಡಿ. ಸಡಿಲವಾದ ಒಳ ಉಡುಪುಗಳನ್ನು ಧರಿಸಿ. ಅತಿಯಾದ ಉಷ್ಣತೆ ಇರುವ ಕಡೆ ಹೆಚ್ಚು ಕಾಲ ಕಳೆಯಬೇಡಿ. ಒತ್ತಡ ಕಡಿಮೆಗೊಳಿಸಲು ಯೋಗ, ಧ್ಯಾನ ಮಾಡಿ ಪ್ರಶಾಂತರಾಗಿ ಇರುವುದನ್ನು ರೂಢಿಸಿಕೊಳ್ಳಿ.
Comments are closed.