ಆರೋಗ್ಯ

ತಡವಾಗಿ ಮಗು ಪಡೆಯಬೇಕೆಂಬ ಆಲೋಚನೆ ನಿಮಗಿದ್ದರೆ ಮೊದಲು ಈ ವರದಿಯನ್ನೊಮ್ಮೆ ಓದಿ….

Pinterest LinkedIn Tumblr

ಬೆಂಗಳೂರು: ನಗರ ಪ್ರದೇಶಗಳಲ್ಲಿ ತಡವಾಗಿ ಮಗು ಬೇಕೆಂದು ಬಯಸಿ ಗರ್ಭ ಧರಿಸಿದ ಮಹಿಳೆಯರು ಅವಧಿಗೆ ಮುನ್ನವೇ ಮಗುವಿಗೆ ಜನನ ನೀಡುತ್ತಾರೆ. ಇದರ ಪರಿಣಾಮ ನವಜಾತ ಶಿಶುವಿನಲ್ಲಿ ಇನ್‍ಫೆಕ್ಷನ್ ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಮಹಿಳೆಯರು ತಡವಾಗಿ ಮದುವೆಯಾದರೂ ಗರ್ಭ ಧರಿಸಲು ಮತ್ತಷ್ಟು ತಡ ಮಾಡುತ್ತಾರೆ. ಇದರ ಪರಿಣಾಮ ಗರ್ಭದಾರಣೆ ಪ್ರಮಾಣ ಕುಸಿಯುತ್ತ ಹೋಗುತ್ತದೆ. ಇದು ದಂಪತಿಯನ್ನು ಕಂಗೆಡುವಂತೆ ಮಾಡುತ್ತದೆ. ಮಗು ಬೇಕು ಎಂಬ ಹಪಹಪಿತನವಿದ್ದರೂ ತಾವು ಮಾಡಿಕೊಂಡ ತಪ್ಪಿಗೆ ಗರ್ಭ ಧರಿಸುವುದರಲ್ಲಿ ಏರುಪೇರುಂಟಾಗುತ್ತದೆ. ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಶುಭಾರಾಮ ರಾವ್ ಹೇಳುವಂತೆ, ತಡವಾಗಿ ಮದುವೆಯಾದರೆ ಗರ್ಭಧಾರಣೆ ವೇಳೆ ಸಾಕಷ್ಟು ಸಂಕೀರ್ಣ ಸಮಸ್ಯೆಗಳು ಉಂಟಾಗುತ್ತವೆ. ಇದರ ಪರಿಣಾಮ ಅವಪೂರ್ವ ಮಗು ಜನನವಾಗುತ್ತದೆ.

ತಡವಾಗಿ ಮದುವೆಯಾದ ಕೆಲವು ಮಹಿಳೆಯರಿಗೆ ನಾವು ಅಸಿಸ್ಟ್ ಇನ್ ಪ್ರಗ್ನೆನ್ಸಿ ನೀಡುತ್ತೇವೆ. ಬಹುತೇಕ ಪ್ರಕರಣಗಳಲ್ಲಿ ಮಹಿಳೆ ಅವಳಿ ಗರ್ಭ ಧರಿಸುವಂತಾಗುತ್ತದೆ. ತಾಯಿಯ ವಯಸ್ಸು ಹೆಚ್ಚಾಗಿರುವುದರಿಮದ ಒತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗಬಹುದು. ಇದು ಅವಧಿ ಪೂರ್ವ ಹೆರಿಗೆಗೆ ಕಾರಣವಾಗಬಲ್ಲದು. ಸ್ತ್ರೀರೋಗ ತಜ್ಞೆ ಡಾ.ಶ್ಯಾಮಲಾ ಬಾಲಸುಬ್ರಮಣ್ಯನ್ ಹೇಳುವಂತೆ, ಒಂದು ಆಘಾತಕಾರಿ ವಿಚಾರವೆಂದರೆ ಕರ್ನಾಟಕದ ನಗರ ಪ್ರದೇಶಗಳಲ್ಲಿ ಶೇ.12ರಷ್ಟು ನವಜಾತು ಶಿಶುಗಳು ಹೊಂದುತ್ತಿವೆ. ಇದಕ್ಕೆ ಪ್ರಮುಖ ಕಾರಣ ಅವಪೂರ್ವವಾಗಿ ಜನಿಸುವುದು. 26 ವಾರಗಳ ನಂತರ ಜನಿಸಿದ ಮಕ್ಕಳಲ್ಲಿ ಶೇ. 44 ರಷ್ಟು ಬದುಕುಳಿಯುತ್ತವೆ. 24 ವಾರಗಳ ನಂತರ ಜನಿಸಿದ ಮಕ್ಕಳನ್ನು ನಾವು ಬದುಕಿಸಬಹುದು.

Comments are closed.