ಆರೋಗ್ಯ

ಮನುಷ್ಯನ ಮೂಗಿನಲ್ಲಿರುವ ಕೂದಲುನ್ನು ಕಟ್ ಮಾಡಿಕೊಂಡರೆ ಆಗುವ ಅಪಾಯದ ಬಗ್ಗೆ ತಿಳಿಯಿರಿ.

Pinterest LinkedIn Tumblr

ಮಂಗಳೂರು: ತಲೆಯ ಮೇಲೆ ಇರುವ ಕೂದಲುಗಳು ಬೆಳೆದರೆ ಪುರುಷರು ಹೇರ್ ಸೆಲೂನ್ ಗೆ ಹೋಗಿ ಕಟ್ ಮಾಡಿಸಿಕೊಳ್ಳುತ್ತಾರೆ. ಸ್ವಲ್ಪ ಜನ ಮಹಿಳೆಯರು, ಯುವತಿಯರು ಸ್ಟೈಲ್ ಗೋಸ್ಕರ ಕೂದಲುಗಳನ್ನು ಕಟ್ ಮಾಡಿಸುತ್ತಿದ್ದಾರೆ. ಅದು ಬೇರೆ ವಿಷಯ. ಕೆಲವು ಜನ ಪುರುಷರು ಹಾಗೂ ಮಹಿಳೆಯರು ಹೇರ್ ಕಟ್ ಮಾತ್ರವಲ್ಲ ಮೂಗಿನಲ್ಲಿರುವ ಕೂದಲುಗಳನ್ನು ಸಹ ಕಟ್ ಮಾಡಿಕೊಳ್ಳುತ್ತಾರೆ. ಸ್ವಲ್ಪ ಜನರ ಮೂಗಿನಲ್ಲಿರುವ ಕೂದಲುಗಳನ್ನು ನೇರವಾಗಿ ಕೈಗಳಿಂದ ಎಳೆದು ಕಟ್ ಮಾಡುತ್ತಾರೆ. ಇನ್ನೂ ಕೆಲವರು ಮಿಷನ್ ಗಳಿಂದ ಕಟ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಹೀಗೆ ಮಾಡುವುದು ಬಹಳ ಅಪಾಯಕಾರಿ.ಏಕೆಂದರೆ,

ಮೂಗಿನಲ್ಲಿರುವ ಕೂದಲುಗಳನ್ನು ಎಳೆದು ಕಿತ್ತಾಗ ಆ ಕೂದಲಿನ ಬುಡದಿಂದ ರಕ್ತ ಬರುವ ಸಾಧ್ಯತೆ ಇದೆ. ಅದು ಕೆಲವು ಸಲ ನಮ್ಮ ಗಮನಕ್ಕೆ ಬರದಿರಬಹುದು. ಮೂಗಿನಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಗಳು ಆ ರಕ್ತದ ಮೂಲಕ ಒಳಗಡೆ ಹೋಗಿ ರಕ್ತನಾಳಗಳ ಮೂಲಕ ಮೆದುಳಿಗೆ ಹೋಗುತ್ತದೆ. ಏಕೆಂದರೆ, ಮೂಗಿನ ಕೆಲವು ನಾಳಗಳು ಮೆದುಳಿಗೆ ಸಂಪರ್ಕ ಹೊಂದಿರುತ್ತವೆ. ಇದರಿಂದ ಮೆದುಳಿನಲ್ಲಿ ಬ್ಯಾಕ್ಟೀರಿಯಾಗಳು, ವೈರಸ್ ಗಳು ಹೋದರೆ ಇನ್ಫೆಕ್ಶನ್ ಆಗುತ್ತವೆ. ಇದರಿಂದ ರೋಗಗಳು ಸೃಷ್ಟಿಯಾಗುತ್ತವೆ. ಅಂತಹ ರೋಗಗಳನ್ನು ಮೆನಿಂಜೈಟಸ್ ಎಂದು ಕರೆಯುತ್ತಾರೆ. ಇವು ತುಂಬಾ ಅಪಾಯಕಾರಿ. ಕೆಲವೊಮ್ಮೆ ಪ್ರಾಣಕ್ಕೂ ಹಾನಿಯನ್ನುಂಟು ಮಾಡುತ್ತವೆ.

ಹಾಗಾದರೆ ಮೂಗಿನಲ್ಲಿ ತುಂಬಾ ಕೂದಲು ಬೆಳೆದಾಗ ನಿಮಗೆ ತೊಂದರೆಯಾಗುತ್ತಿದ್ದರೆ ಅದಕ್ಕೆ ಹೀಗೆ ಮಾಡಿ…. ಅಂಥಹ ಪರಿಸ್ಥಿತಿಯಲ್ಲಿ ಮೂಗಿನ ಒಳಗಡೆ ಸ್ವಚ್ಛವಾಗಿ ನೀರಿನಿಂದ ತೊಳೆದುಕೊಳ್ಳಬೇಕು. ಇದರಿಂದ ಪ್ರಮಾದಕರವಾದ ಬ್ಯಾಕ್ಟೀರಿಯಾಗಳು ನಶಿಸುತ್ತವೆ. ನಂತರ ಮೂಗಿನಲ್ಲಿರುವ ಕೂದಲುಗಳನ್ನು ಕತ್ತರಿಯ ಸಹಾಯದಿಂದ ಕಟ್ ಮಾಡಿಕೊಳ್ಳಿ ಅದು ಸಹ ಸ್ವಲ್ಪ ಭಾಗದವರೆಗೆ ಮಾತ್ರ ಕಟ್ ಮಾಡಿ. ಕೂದಲಿನ ಬುಡದ ಮಾಡಿಕೊಂಡರೆ ಮೇಲೆ ಹೇಳಿದಂತೆ ರೋಗಗಳು ಬರಬಹುದು. ಎಷ್ಟು ಎಚ್ಚರಿಕೆಯಿಂದ ಮಾಡಿಕೊಳ್ಳಿತ್ತೀರೋ ಅಷ್ಟು ಒಳ್ಳೆಯದು ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ…

Comments are closed.