ಆರೋಗ್ಯ

ಜೀವನಕ್ಕೆ ಬೇಕಾದ ಕೆಲವು ಪ್ರಯೋಜನಕಾರಿ ವಿಷಯಗಳು ನಿಮಗಾಗಿ.

Pinterest LinkedIn Tumblr

badi_sounf_1

 ಕಪ್ಪು ಉಪ್ಪಿನ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ.
♦ ಕಪ್ಪು ಉಪ್ಪು ಜೀರ್ಣತೆಗೆ ಸಹಕಾರಿಯಾಗಿದೆ.
♦ ಬೊಜ್ಜು ಕರಗಿಸುತ್ತದೆ.
♦ ಉತ್ತಮ ನಿದ್ರೆಗೆ ಸಹಕಾರಿಯಾಗಿದೆ.
♦ ಗಂಟಲು ಕೆರತವನ್ನು ನಿವಾರಿಸುತ್ತದೆ.
♦ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
♦ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ.
♦ ಆಸಿಡಿಟಿ ನಿವಾರಣೆಗೆ ಪರಿಣಾಮಕಾರಿಯಾಗಿದೆ.
♦ ಬ್ಯಾಕ್ಟೀರಿಯಾ ನಿರೋಧಕವಾಗಿದೆ.

ಸೋಂಪು:
♦ ಬಿಸಿ ನೀರಿನೊಂದಿಗೆ ಸೋಂಪು ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ಕೆಮ್ಮು ದೂರವಾಗುತ್ತದೆ.
♦ ಊಟದ ಬಳಿಕ ತಿಂದಲ್ಲಿ ಆಹಾರ ಜೀರ್ಣಕ್ಕೆ ಸಹಕಾರಿ.
♦ ಪ್ರತಿದಿನ ತಿಂದಲ್ಲಿ ರಕ್ತ ಶುದ್ದಿ ಖಚಿತ ಅಲ್ಲದೆ ಬಾಯಿಯ ದುರ್ವಾಸನೆ ತಡೆಯಬಹುದು.
♦ ನೀರಿಗೆ ಸೋಂಪು ಹಾಕಿ ಕುದಿಸಿ ಗಟ್ಟಿಯಾಗಿರುವುದನ್ನು ಮುಖಕ್ಕೆ ಹಚ್ಚಿ ತೊಳೆದಲ್ಲಿ ಮುಖದಲ್ಲಿ ಹೊಳಪು ಮೂಡುತ್ತದೆ.
♦ ಜೀರಿಗೆ ಮತ್ತು ಕಲ್ಲು ಸಕ್ಕರೆಯೊಂದಿಗೆ ತಿಂದರೆ ಆಯಾಸ ಕಡಿಮೆಯಾಗುತ್ತದೆ

ಕಡಲೆಕಾಳು:
ಉಪಯೋಗ : ತೂಕ ಹೆಚ್ಚಳ, ಬಿಕ್ಕಳಿಕೆಗೆ ಕಡಿವಾಣ.
ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿವಸ ತಿಂದರೆ ಶರೀರದ ತೂಕವು ಹೆಚ್ಚಾಗುವುದು. ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಅಂಜೂರ :
ಈ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಶಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ.

ದಾಳಿಂಬೆ:
ದಂತಕ್ಷಯ : ದಾಳಿಂಬೆ ಹಣ್ಣಿನ ರಸ ಹಲ್ಲು ಮತ್ತು ವಸಡುಗಳನ್ನು ಆರೋಗ್ಯಕರವಾಗಿ ಇಡಲು ಬಲು ಸಹಕಾರಿ.
ರಕ್ತದೊತ್ತಡ : ಎರಡು ವಾರಗಳ ಕಾಲ ದಾಳಿಂಬೆ ಜ್ಯೂಸನ್ನು ಪ್ರತಿದಿನ ಹೀರಿದರೆ ರಕ್ತದೊತ್ತಡ ತಾನಾಗೇ ನಿಯಂತ್ರಣಕ್ಕೆ ಬರುತ್ತದೆ.
ಕೊಬ್ಬು : ದಾಳಿಂಬೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುವ ಗುಣ ಹೊಂದಿದೆ. ಆದ್ದರಿಂದ, ನಿಯಮಿತವಾಗಿ ಸೇವಿಸಿದರೆ ಹೃದಯಾಘಾತ ಸಂಭವಿಸುವ ಅಪಾಯ ಕಡಿಮೆ. ಜೊತೆಗೆ ರಕ್ತನಾಳಗಳಲ್ಲಿ ಆಗುವ ಅಡೆತಡೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತ ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ.

ಲವಂಗ :
ಹಲವಾರು ಜನ ನಿತ್ಯದ ಬದುಕಿನಲ್ಲಿ ಲವಂಗ ಬಳಸುತ್ತಾರೆ. ಆದರೆ ಬಹುತೇಕರು ಇದನ್ನು ಅಡುಗೆಯ ರುಚಿ ಹೆಚ್ಚಿಸಲು ಬಳಸುವುದಿದೆ.ರುಚಿಯ ಜತೆಗೆ ಆರೋಗ್ಯಕ್ಕಾಗಿಯೂ
ನಿತ್ಯದ ಬದುಕಿನಲ್ಲಿ ಇದರ ಬಳಕೆಯನ್ನು ರೂಡಿಸಿಕೊಳ್ಳಿ.
♦ ಲವಂಗದ ಎಲೆಯ ಪುಡಿಯನ್ನು ನೋವಿರುವ ಹಲ್ಲಿನ ಮೇಲೆ ಇಟ್ಟರೆ ನೋವು ಕಡಿಮೆಯಾಗುತ್ತದೆ.
♦ ಲವಂಗದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.
♦ ಲವಂಗವನ್ನು ಚೆನ್ನಾಗಿ ಹುರಿದು ಬಟ್ಟೆಯಲ್ಲಿ ಸುತ್ತಿ ನೋವಿರುವ ಜಾಗಕ್ಕೆ ಶಾಖವನ್ನು ಕೊಟ್ಟರೆ ನೋವು ಮಾಯವಾಗುತ್ತದೆ.
♦ 2 – 3 ಹನಿ ಲವಂಗದ ಎಣ್ಣೆಯ ಜತೆ 1 ಚಮಚ ಉಪ್ಪು ಮತ್ತು 2 ಚಮಚ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಹಣೆಯ ಮೇಲೆ ತಿಕ್ಕಿದರೆ ತಲೆನೋವು ಮಾಯವಾಗುತ್ತದೆ.
♦ 1 ಚಮಚ ಲವಂಗ ಎಣ್ಣೆಯನ್ನು 10 ಚಮಚ ತೆಂಗಿನ ಎಣ್ಣೆ ಜತೆ ಸೇರಿಸಿ ಹತ್ತಿಯಲ್ಲಿ ಅದ್ದಿ ಮೊಡವೆಗೆ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ.
♦ ಉಸಿರಿನಲ್ಲಿ ದುರ್ಗಂಧ ಇದ್ದರೆ ಲವಂಗದ ಕಷಾಯದಲ್ಲಿ ಬಾಯಿ ಮುಕ್ಕಳಿಸಿ ಸಮಸ್ಯೆಯಿಂದ ಮುಕ್ತರಾಗಬಹುದು.
♦ ವಾಯು ಭಾದೆ ಮತ್ತು ಬಾಯಿಗೆ ರುಚಿಯಿಲ್ಲದಾಗ ಲವಂಗವನ್ನು ಬಾಯಿಯಲ್ಲಿಟ್ಟು ಚಪ್ಪರಿಸಬೇಕು.
♦ ನೆಗಡಿ ಮತ್ತು ಕೆಮ್ಮೀನಿಂದ ಬಳಲುತ್ತಿದ್ದಲ್ಲಿ ಲವಂಗದ ಸೇವನೆಯಿಂದ ಕಫ ಕರಗುತ್ತದೆ.
♦ ಹುಳುಕು ಹಲ್ಲಿನ ತೊಂದರೆಯಿರುವವರು ಲವಂಗವನ್ನು ಪುಡಿ ಮಾಡಿ ಹುಳುಕಾಗಿರುವ ಜಾಗದಲ್ಲಿ ಇಟ್ಟುಕೊಳ್ಳಬೇಕು.
♦ ಜಂತುಗಳು ಉಂಟಾದಾಗ ಲವಂಗದ ಕಷಾಯ ತಯಾರಿಸಿ ಸೇವಿಸಬೇಕು.
♦ ಲವಂಗವನ್ನು ಬಾಯಿಯಲ್ಲಿಟ್ಟು ಚಪ್ಪರಿಸುವುದರಿಂದ ಹಸಿವು ಹೆಚ್ಚುತ್ತದೆ.

Comments are closed.