ಅಂತರಾಷ್ಟ್ರೀಯ

ಶ್ರೀಲಂಕಾದಲ್ಲಿ 320ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಸರಣಿ ಆತ್ಮಹತ್ಯಾ ಬಾಂಬ್ ದಾಳಿ; ಹೊಣೆ ಹೊತ್ತ ಇಸಿಸ್ ಉಗ್ರ ಸಂಘಟನೆ

Pinterest LinkedIn Tumblr

ಬ್ರಿಟನ್: ನೆರೆಯ ಶ್ರೀಲಂಕಾದಲ್ಲಿ 320ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಭೀಕರ ಬಾಂಬ್ ಸ್ಫೋಟ ದಾಳಿ ನಡೆಸಿದ್ದು ನಾವೇ ಎಂದು ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ.

ಕಳೆದ ಭಾನುವಾರ ಈಸ್ಟರ್ ಸಂಡೆ ನಿಮಿತ್ತ ಕೊಲಂಬೋ ಚರ್ಚ್ ಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ನೂರಾರು ಅಮಾಯಕ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಈ ವರೆಗೂ ಸುಮಾರು 320ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 50ಕ್ಕೂ ಹೆಚ್ಚು ವಿದೇಶೀಯರೂ ಸಾವನ್ನಪ್ಪಿದ್ದು, 10 ಮಂದಿ ಭಾರತೀಯರೂ ಕೂಡ ಸಾವನ್ನಪ್ಪಿದ್ದಾರೆ.

ಈ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಇಡೀ ವಿಶ್ವವನ್ನೇ ಬೆಚ್ಟಿ ಬೀಳಿಸಿರುವಂತೆಯೇ ಈ ದಾಳಿ ನಡೆಸಿದ್ದು ನಾನೇ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಈ ಬಗ್ಗೆ ತನ್ನ ಮುಖವಾಣಿ ಅಮಾಖ್ ನಲ್ಲಿ ಇಸಿಸ್ ಹೇಳಿಕೊಂಡಿದೆ ಎಂದು ಖ್ಯಾತ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ ಹೇಳಿದೆ. ಅಂತೆಯೇ ದಾಳಿ ಹೊಣೆ ಹೊತ್ತಿರುವ ಇಸಿಸ್ ಈ ಬಗ್ಗೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನೂ ಬಿಡುಗಡೆ ಮಾಡಿಲ್ಲ ಎಂದು ವರದಿ ಮಾಡಿದೆ.

Comments are closed.