ಆರೋಗ್ಯ

ನಿಮ್ಮ ಮುಖದಲ್ಲಿ ಎಣ್ಣೆ ಪ್ರಮಾಣ ಹೆಚ್ಚಿದ್ದರೆ ಹೀಗೆ ಮಾಡಿ…

Pinterest LinkedIn Tumblr

how

ಕೆಲವರಿಗೆ ಎಣ್ಣೆ ಚರ್ಮದಿಂದ ಮುಖದಲ್ಲಿ ಎಣ್ಣೆ ಜಿನುಗುವಂತೆ ಕಾಣಿಸುತ್ತದೆ. ಇದರಿಂದ ಕೆಲವರಿಂದ ಕೀಟಲೆಯ ಮಾತು ಕೇಳಬಹುದು.

ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಮಾಡಿಕೊಂಡ ಮುಖ ಫ್ರೆಶ್ ಆಗಿ ಚೆನ್ನಾಗಿ ಕಾಣಲು ಕೆಲ ಸಲಹೆ ಇಲ್ಲಿವೆ.

ಎಣ್ಣೆ ಚರ್ಮದವರು ಮುಖಕ್ಕೆ ಬಾಳೆಹಣ್ಣಿನ ಪೇಸ್ಟ್ ತಯಾರಿಸಿ ಮುಖದ ಅಂದ ಕಾಪಾಡಬಹುದು. ಮೊದಲು ನೀರಿನಿಂದ ಮುಖ ತೊಳೆದು ಬಾಳೆಹಣ್ಣು ಮಸೆದು, ಜೇನುತುಪ್ಪ, ನಿಂಬೆಹಣ್ಣು ಬೆರೆಸಿ ತಯಾರಿಸಿದ ಪೇಸ್ಟ್‌ಅನ್ನು ಹಚ್ಚಿ 20 ನಿಮಿಷದ ನಂತರ ಮುಖ ತೊಳೆದ ಬಳಿಕ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಶಾಖ ಕೊಟ್ಟರೆ ಮುಖದ ಎಣ್ಣೆ ಅಂಶ ದೂರವಾಗುತ್ತದೆ.

ಇದರ ಜೊತೆಗೆ ಮುಲ್ತಾನಿ ಮುಟ್ಟಿ ಪೇಸ್ಟ್‌ನಿಂದ ಮುಖದ ಎಣ್ಣೆಯ ಅಂಶವನ್ನು ದೂರ ಮಾಡಬಹುದು. ಮೂರು ಚಮಚ ಮುಲ್ತಾನಿ ಮುಟ್ಟಿಯನ್ನು ಸ್ವಲ್ಪ ಬಿಸಿನೀರಿನಲ್ಲಿ ಅರ್ಧ ಗಂಟೆ ನೀರಿನಲ್ಲಿ ನೆನೆಸಿ ನಂತರ ಅದಕ್ಕೆ ರೋಸ್‌ವಾಟರ್, ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿ. ನಂತರ ಈ ಪೇಸ್ಟ್‌ಗೆ ಹಾಲು ಸೇರಿಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಬಿಸಿನೀರಿನಲ್ಲಿ ತೊಳೆಯಬೇಕು. ಈ ರೀತಿ ವಾರಕ್ಕೆ ಮೂರು ಬಾರಿ ಮಾಡಿದರೆ ಮುಖದ ಜಿಡ್ಡು ಮಾಯವಾಗುತ್ತದೆ.

ಗ್ಲಿಸರಿನ್ ರೋಸ್ ವಾಟರ್ ಪೇಸ್ಟ್ ಬಳಸಿ ಸಹ ಮುಖದ ಜಿಡ್ಡನ್ನು ಕಡಿಮೆ ಮಾಡಬಹುದು. 4 ಚಮಚ ಗ್ಲಿಸರಿನ್, 4 ಚಮಚ ರೋಸ್‌ವಾಟರ್, 2 ಚಮಚ ನಿಂಬೆರಸ ಬೆರೆಸಿದ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ತೊಳೆದರೆ ಮುಖ ನಳನಳಿಸುತ್ತದೆ.

Comments are closed.