ಆರೋಗ್ಯ

ಜೀವನದಲ್ಲಿ ಒತ್ತಡ ಜಾಸ್ತಿ ಇದ್ದಾಗ ಎದುರಾಗೋ ಸಮಸ್ಯೆಗಳಿಗೆ ಪರಿಹಾರ ನಿಮ್ಮ ಕೈಯಲ್ಲೇ.

Pinterest LinkedIn Tumblr

hand_aqupesuurer_1

ಮಂಗಳೂರು: ಜೀವನದಲ್ಲಿ ಸ್ಪಲ್ಪ ಒತ್ತಡ ಇದ್ದರೆ ಒಳ್ಳೆದ್ದು. ಏನೂ ಇಲ್ಲದೆ ಹೋದರೆ ನಾವು ಕೆಲಸಾನೇ ಮಾಡಲ್ಲ. ಆದರೆ ಒತ್ತಡ ತೀರಾ ಜಾಸ್ತಿ ಆಗ್ತಾ ಹೋದ್ರೆ ಜೀವನ ಕಷ್ಟ ಅಗೋಗುತ್ತೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.ಇಂಥ ಸಮಸ್ಯೆಗಳಿಗೆ ಎಲ್ಲಾ ಸಂಸ್ಕ್ರತಿಗಳಲ್ಲೂ ಒಂದಲ್ಲ ಒಂದು ಪರಿಹಾರ ಹುಡುಕ್ಕೋಂಡೇ ಇರುತ್ತಾರೆ.

ಎಲ್ಲಿದ್ದರೂ ಯಾರು ಬೇಕಾದರೂ ಮಾಡಬಹುದಾದ ಆಶ್ಚರ್ಯಕರ ಪರಿಹಾರಗಳ ಬಗ್ಗೆ ತಿಳಿಯಿರಿ
ಮೊಟ್ಟಮೊದಲು ನಿಮಗೆ ಗೊತ್ತಿರಬೇಕಾದ್ದು, ಏನೆಂದರೆ ನಮ್ಮ ಕೈಯಲ್ಲಿ ಒಂದೊಂದು ಬೆರಳೂ ಒಂದೋಂದು ಮನಸ್ಥಿತಿಯನ್ನ ಪ್ರತಿನಿಧಿಸುತ್ತೆ. ಅದೆನೆಂದರೆ:

1.ಹೆಬ್ಬೆರಳು : ಯೋಚನೆ, ಚಿಂತೆ, ಆತಂಕವನ್ನು ಕಡಿಮೆ ಮಾಡಿಕೊಳ್ಳುದರಲ್ಲಿ ಸಹಾಯ ಮಾಡುತ್ತೆ.
2. ತೋರುಬೆರಳು : ಹೆದರಿಕೆ ಕಡಿಮೆ ಮಾಡಿಕೊಳ್ಳುದರಲ್ಲಿ ಸಹಾಯ ಮಾಡುತ್ತೆ
3.ಮಧ್ಯದ ಮರಳು: ಸಿಟ್ಟು ಕಡಿಮೆ ಮಾಡಿಕೊಳ್ಳುದರಲ್ಲಿ ಸಹಾಯ ಮಾಡುತ್ತೆ
4.ಉಂಗುರ ಬೆರಳು : ತೀರಾ ದುಃಖ ಮತ್ತು ಖಿನ್ನತೆ ಕಡಿಮೆ ಮಾಡಿಕೊಳ್ಳುದರಲ್ಲಿ ಸಹಾಯ ಮಾಡುತ್ತೆ.
5. ಕಿರುಬೆರಳು: ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದರಲ್ಲಿ ಸಹಾಯ ಮಾಡುತ್ತೆ, ಹಾಗೂ ಇನ್ನಷ್ಠು ಧೈರ್ಯವಂತರಾಗಲು ಸಹಾಯ ಮಾಡುತ್ತೆ.

ಮೇಲಿನ ಸಮಸ್ಯೆಗಳಲ್ಲಿ ಯಾವುದಾದರೂ ನಿಮಗೆ ಕಾಡಿದರೆ ಮೊದಲಿಗೆ ದೇಹದೊಳಗೆ ಪ್ರಾಣ ಸರಿಯಾಗಿ ಸಂಚರಿಸುವ ಹಾಗೆ ಆಗಬೇಕು.

ನೀವು ಮಾಡಬೇಕಾದ್ದು ಇಷ್ಟೇ;
ಮೊದಲು ನಿಮ್ಮ ಸಮಸ್ಯೆಗೆ ಸರಿಯಾದ ಬೆರಳು ಯಾವುದು ಅಂತ ಗುರುತಿಸಿಕೊಳ್ಳಿ. ಯಾವ ಕೈ ಆದರೂ ಪರವಾಗಿಲ್ಲ ಈ ಬೆರಳ್ಳನ್ನ ಇನ್ನೊಂದು ಕೈಯಿಂದ ಪೂರ್ತಿ ಹಿಡಿದುಕೊಂಡು 1-2 ನಿಮಿಷ ಹಾಗೇ ಇರಿ. ಆ ಬೆರಳಿಗೆ ಹೆಚ್ಚು ರಕ್ತ ಹರಿದು ಬರೋದು ನಿಮಗೆ ಗೊತ್ತಾಗುತ್ತೇ. ಆಗ ನಿಮ್ಮ್ಮ ಸಮಸ್ಯೆ ಬಗೆಹರಿಯಕ್ಕೆ ಶುರು ಆಗಿದೆ ಅಂತ ಅರ್ಥ

ನಿಮ್ಮ ಮನಸ್ಸಿಗೆ ಶಾಂತಿ ಬೇಕು ಅನ್ನಿಸಿದ್ದಾಗ ಕೈ ಮಧ್ಯದಲ್ಲಿ ಇನ್ನೋಂದು ಕೈ ಹೆಬ್ಬೆರಳಿಂದ ಒತ್ತಿಕೊಳ್ಳಿ ಮತ್ತೆ 1-2 ನಿಮಿಷ ಹೀಗೆ ಮಾಡಬೇಕು.
ಇದನ್ನ ದಿನಾ ಮಾಡ್ತಾ ಬಂದ್ರೆ ನಿಮ್ಮ ಒತ್ತಡ ಕಡಿಮೆ ಆಗಿ ನಿಮಗಿರೋ ಸಮಸ್ಯೆ ಪರಿಹಾರವಾಗುತ್ತ ಹೋಗುತ್ತೆ.

Comments are closed.