ಆರೋಗ್ಯ

ದೇಹದಲ್ಲಿ ಅಮೈನೋ ಆಮ್ಲ ಹೆಚ್ಚಲು ಪಿಸ್ತಾ ಸಹಕಾರಿ

Pinterest LinkedIn Tumblr

pistha_pic_halthy

ಒಣ ಹಣ್ಣುಗಳೊಂದಿಗೆ ಚಿಪ್ಪಿನಂತಿರುವ ಎರಡು ದಳಗಳ ನಡುವಲ್ಲಿ ಕಂದು ಬಣ್ಣದ ತಿನಿಸನ್ನು ನೋಡಿರಬಹುದು. ಒಳಗೆ ತಿಳಿ ಹಸಿರ ಬಣ್ಣವನ್ನು ಹೊಂದಿರುವ ಇದನ್ನು ಉಪ್ಪಿನೊಂದಿಗೆ ಹುರಿದು ಒಣಹಣ್ಣುಗಳೊಂದಿಗೆ ಸೇರಿಸಲಾಗುತ್ತದೆ. ತಿನ್ನುತ್ತಿದ್ದಂತೆ ರುಚಿ ಹೆಚ್ಚುತ್ತಲೇ ಹೋಗುವಂತೆ ಕಾಣುವ ಪಿಸ್ತಾ ರುಚಿಗಷ್ಟೇ ಸೀಮಿತವಾಗಿರದೆ ದೇಹದ ಆರೋಗ್ಯದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ.

ಪಿಸ್ತಾ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ಪಿಸ್ತಾದಲ್ಲಿರುವ ಬಿ6 ವಿಟಾಮಿನ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಲ್ಲದೆ ಇದು ಆರೋಗ್ಯಕರ ರಕ್ತಕಣಗಳು ಹೆಚ್ಚುವುದಕ್ಕೆ ಸಹಕಾರಿಯಾಗಿದೆ. ರಕ್ತದಲ್ಲಿನ ಹಿಮೋಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸುವ ಜೊತೆಗೆ ಆಮ್ಲಜನಕದ ಪ್ರಮಾಣ ಹೆಚ್ಚಿರುವ ರಕ್ತ ದೇಹದ ಇತರ ಅಂಗಗಳಿಗೆ ರವಾನೆಯಾಗುವಂತೆ ನೋಡಿಕೊಳ್ಳುತ್ತದೆ.

* ದೇಹದಲ್ಲಿ ಅಮೈನೋ ಆಮ್ಲ ಹೆಚ್ಚಲು ಮತ್ತು ದೇಹದ ನರವ್ಯೆಹ ಸರಿಯಾಗಿ ಕೆಲಸ ನಿರ್ವಹಿಸಲು ಪಿಸ್ತಾ ಸಹಕಾರಿಯಾಗಿದೆ. ಒಂದು ಹಿಡಿಯಷ್ಟು ಪಿಸ್ತಾಕ್ಕೆ ಸ್ವಲ್ಪ ಜೇನನ್ನು ಸೇರಿಸಿ ದಿನವೂ ಬೆಳಗ್ಗೆ ತಿನ್ನುತ್ತಿದ್ದರೆ ನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ.
* ಹಸಿ ತರಕಾರಿ ಅಥವಾ ಸೊಪ್ಪಿನೊಂದಿಗೆ ಪಿಸ್ತಾ ಸೇವಿಸಿದರೆ ದೇಹವನ್ನು ಸದೃಢಗೊಳಿಸಲು ನೆರವಾಗುತ್ತದೆ. ಹಣ್ಣು, ಐಸ್‌ಕ್ರೀಮ್‌ಗಳೊಂದಿಗೂ ಪಿಸ್ತಾ ಮಿಶ್ರಣಮಾಡಿ ಸೇವಿಸಿದರೆ ರುಚಿಯೊಂದಿಗೆ ದೇಹದ ಆರೋಗ್ಯವನ್ನೂ ಸ್ವಾಸ್ಥ್ಯಪೂರ್ಣವಾಗುವಂತೆ ಮಾಡುತ್ತದೆ.
* ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿಯೂ ಇದು ಸಹಕಾರಿ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಪಿಸ್ತಾ ಸೇವಿಸುವುದರಿಂದ ರೋಗ ಹತೋಟಿಯಲ್ಲಿರುತ್ತದೆ.
* ಹೃದಯ ಸಂಬಂಧಿಕಾಯಿಲೆಯಿರುವವರು ಸಹ ಆಗಾಗ ಪಿಸ್ತಾ ಸೇವಿಸುತ್ತಿದ್ದರೆ ಸಮಸ್ಯೆ ನಿಯಂತ್ರಣದಲ್ಲಿರುವುದು.
* ಬೊಜ್ಜು ನಿಯಂತ್ರಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುವುದು. ಪಿಸ್ತದಲ್ಲಿ ವಿಟಾಮಿನ್ ಇ ಹೇರಳವಾಗಿರುವುದರಿಂದ ಚರ್ಮದ ಆರೋಗ್ಯವನ್ನು ಇದು ಕಾಪಾಡುತ್ತದೆ.
* ಶುಷ್ಕ ಚರ್ಮವನ್ನು ಹೊಂದಿರುವವರು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ಕಣ್ಣಿನ ಆರೋಗ್ಯದಲ್ಲೂ ಪಿಸ್ತಾ ಪ್ರಮುಖ ಪಾತ್ರ ವಹಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದಕ್ಕೂ ಇದು ನೆರವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಅಧರಕ್ಕಷ್ಟೇ ಅಲ್ಲದೆ, ಉದರಕ್ಕೂ ಪಿಸ್ತಾ ರುಚಿ ಎನ್ನಿಸಿದೆ.

ನಮ್ಮಲ್ಲಿ ಹೆಚ್ಚಿನ ಮಂದಿ ಕೊಬ್ಬು ಎಂದಾಕ್ಷಣ ಹೆದರುತ್ತೇವೆ. ಕೊಬ್ಬಿನಾಂಶ ಹೆಚ್ಚಾಗುವುದರಿಂದ ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಪಿತ್ತ ಉತ್ಪತ್ತಿ ಮಾಡುವ ಈ ಕೊಬ್ಬಿನಾಂಶ ದೇಹದ ನರವ್ಯೂಹಕ್ಕೆ, ಜೀವಕೋಶಗಳ ಆಕಾರಕ್ಕೆ, ಮೆದುಳಿನ ರಕ್ತನಾಳಗಳಿಗೆ ಹೆಚ್ಚು ಅಗತ್ಯವಾಗುತ್ತದೆ.

ಹೆಚ್ಚು ಸಾಂದ್ರತೆಯ ಲಿಪ್ರೋಪ್ರೊಟೀನ್‌ಗಳ ಉತ್ಪತ್ತಿಯಿಂದ ಇಂತಹ ಸಮಸ್ಯೆಗಳು ಉಂಟಾಗಲು ಪ್ರಮುಖ ಕಾರಣ. ಇನ್ನೊಂದು ಕಡೆಯಲ್ಲಿ ಕಡಿಮೆ ಸಾಂದ್ರತೆಯ ಲಿಪ್ರೋಪ್ರೊಟೀನ್‌ಗಳು ಹೃದಯನಾಳಗಳ ಗೋಡೆಗಳಲ್ಲಿ ಶೇಖರಣೆಯಾಗುತ್ತದೆ. ಇದರಿಂದ ಹೃದಯ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದೆ. ಇವೆರಡು ಕೊಬ್ಬಿನಾಂಶಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗತ್ತದೆ.

ಆದರೆ ಇವೇ ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತವೆ. ಹೃದಯ ಸಂಬಂಧಿಸಿದ ಕಾಯಿಲೆಗಳನ್ನು ತರುವಂತಹ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆಗೊಳಿಸಿ, ಜೀವನ ಕ್ರಮದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇವುಗಳು ಉತ್ತಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚು ಮುಖ್ಯವಾಗುತ್ತದೆ. ಹೆಚ್ಚು ಬೊಜ್ಜು ಹೊಂದಿರುವವರಿಗೆ ಹೃದಯ ಕಾಯಿಲೆಗಳು ಬರುವುದು ಸಾಮಾನ್ಯ. ನಿಯಮಿತ ವ್ಯಾಯಾಮ, ಡಯಟ್ ಇತ್ಯಾದಿಗಳನ್ನು ಅನುಸರಿಸಿ, ನಿಯಮಿತವಾಗಿ ಕೊಬ್ಬಿನಾಂಶವನ್ನು ಪರಿಶೀಲಿಸಬೇಕು.

ಕೊಬ್ಬಿನಾಂಶವನ್ನು ಹತೋಟಿಯಲ್ಲಿಡಲು ಡಯಟ್ ಸಂದರ್ಭದಲ್ಲಿ ಒಣಹಣ್ಣು ಸೇವಿಸುವುದರಿಂದ ಇನ್ನಷ್ಟು ಹೆಚ್ಚು ಸಹಕಾರಿಯಾಗುತ್ತದೆ. ಭಾರತೀಯ ಮಧುಮೇಹ ಫೌಂಡೇಷನ್ ಹಾಗೂ ನ್ಯಾಷನಲ್ ಡಯಾಬಿಟಿಸ್, ಒಬೆಸಿಟಿ ಹಾಗೂ ಕೊಲೆಸ್ಟ್ರಾಲ್ ಫೌಂಡೇಷನ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಪಿಸ್ತಾದಲ್ಲಿ ಕಡಿಮೆ ಪ್ರಮಾಣದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು, ನೈಸರ್ಗಿಕವಾಗಿ ಕೊಬ್ಬಿನಾಂಶ ರಹಿತ ತಿನಿಸಾಗಿದೆ. ಅಂತೆಯೇ ಇವುಗಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿಯ ಪ್ರೊಟೀನ್‌ಗಳು ಹಾಗೂ ಫೈಬರ್ ಮತ್ತು ಪ್ರೊಟೀನ್‌ಗಳು ಲಭ್ಯವಾಗುತ್ತದೆ.

ಪಿಸ್ತಾವು ಹೃದಯ ಸಂಬಂಧಿಸಿದ ಕಾಯಿಲೆಗಳ ತೊಂದರೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತದೆ. ಇದಲ್ಲದೆ ಹಸಿ ತರಕಾರಿ, ಹಣ್ಣುಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದು ಹೆಚ್ಚು ಸೂಕ್ತ. ಇದರೊಂದಿಗೆ ಫ್ಯಾಟಿ ಫಿಶ್, ಸೂರ್ಯಕಾಂತಿ ಬೀಜ ಇತ್ಯಾದಿಗಳು ದೇಹಕ್ಕೆ ಅಗತ್ಯವಾದ ಕೊಬ್ಬಿನಾಂಶವನ್ನು ಹೆಚ್ಚು ಉತ್ಪಾದಿಸುತ್ತದೆ. ಹೆಚ್ಚು ಕೊಬ್ಬಿನಾಂಶದ ಡೈರಿ ಉತ್ಪನ್ನ ಕಡಿಮೆ ಕೊಬ್ಬಿನಾಂಶದ ಉತ್ಪನ್ನವನ್ನಾಗಿ ಬದಲಾಯಿಸಿ.

Comments are closed.