ಕರಾವಳಿ

ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ : ದ.ಕ.ಮುಸ್ಲಿಂ ಒಕ್ಕೂಟದಿಂದ ಖಂಡನೆ – ಮೌನ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಕಳೆದ ರವಿವಾರ ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವನ್ನು ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟವು ತೀವ್ರವಾಗಿ ಖಂಡಿಸಿದೆ.ನೂರಾರು ಮಂದಿ ಅಮಾಯಕರ ಜೀವಹಾನಿಗೆ ಕಾರಣವಾದ ಈ ಘಟನೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಘಟನೆಯನ್ನು ವಿರೋಧಿಸಿ ದ.ಕ.ಮುಸ್ಲಿಂ ಒಕ್ಕೂಟವು ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿರೋಧ ನಡೆಸಿದ್ದು, ಈ ವೇಳೆ ಸ್ಫೋಟದಲ್ಲಿ ಮಡಿದ ಅಮಾಯಕರಿಗೆ ಸಂತಾಪ ಸೂಚಿಸಲಾಯಿತು.

ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ನಿವೃತ್ತ ಡಿವೈಎಸ್ಪಿ ಟಿಸಿಎಂ ಶರೀಫ್, ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ, ಮನ್ಸೂರ್ ಅಹ್ಮದ್ ಆಝಾದ್, ಮಾಜಿ ಕಾರ್ಪೊರೇಟರ್‌ಗಳಾದ ಅಝೀಝ್ ಕುದ್ರೋಳಿ, ಅಬೂಬಕರ್ ಕುದ್ರೋಳಿ, ಮುಹಮ್ಮದ್ ಕುಂಞಿ, ಹುಸೈನ್ ಕಾಟಿಪಳ್ಳ, ಸಈದ್ ಇಸ್ಮಾಯೀಲ್, ಹನೀಫ್ ಹಾಜಿ ಬಂದರ್, ಮುಹಮ್ಮದ್ ಹನೀಫ್ ಯು., ಶಹನಾಝ್ ಎಂ., ಸಾಜಿದಾ, ರಹ್ಮತ್, ಮೊಯ್ದಿನ್ ಮೋನು, ಅಶ್ರಫ್ ಸೇವಾದಳ, ಅಬ್ದುರ್ರಹ್ಮಾನ್ ಭಟ್ಕಳ, ಅಹ್ಮದ್ ಬಾವಾ ಬಜಾಲ್, ಮುಸ್ತಫಾ ಸಿ.ಎಂ., ಸಂಶುದ್ದೀನ್ ಎಚ್‌ಬಿಟಿ, ಪಿ.ಎ.ರಹೀಂ, ಇಬ್ರಾಹೀಂ ಕೊಣಾಜೆ, ಅಬ್ದುಲ್ ಜಲೀಲ್ ಕೃಷ್ಣಾಪುರ, ಅಶ್ರಫ್ ಬದ್ರಿಯಾ, ಮುಹ್ಸಿನ್ ಸಾಮಣಿಗೆ, ಸಿದ್ದೀಕ್ ತಲಪಾಡಿ, ಮುಹಮ್ಮದ್ ಬಪ್ಪಳಿಗೆ, ಇಬ್ರಾಹೀಂ ದಕ್ಕೆ, ನೌಶಾದ್ ಬಂದರ್, ಫಯಾಝ್ ಬಂದರ್, ಮುನವ್ವರ್ ಬಂದರ್, ವಿ.ಎಚ್.ಕರೀಂ, ರಶೀದ್ ಕೆ., ಸಿ.ಎಂ.ಹನೀಫ್ ಮತ್ತಿತರರು ಪಾಲ್ಗೊಂಡಿದ್ದರು.

Comments are closed.