ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳುತ್ತಾರೆ. ಊಟ ನಮ್ಮ ಆರೋಗ್ಯವನ್ನು ನಿರ್ದೇಶಿಸುವ ಪ್ರಮುಖ ಅಂಶವಾಗಿರುತ್ತದೆ. ಆರೋಗ್ಯಕಾರಿ ಊಟದ ಸೇವನೆ ಮತ್ತು ಅರ್ಧ ಗಂಟೆಗಳ ಕಾಲದ ದೈಹಿಕ ಚಟುವಟಿಕೆಯಿಂದ ನಿಮ್ಮ ರಕ್ತದಲ್ಲಿ ಗ್ಲೂಕೋಸ್ ಅನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು, ಆರೋಗ್ಯಕರವಾದ ತೂಕ ಕಾಪಾಡಿಕೊಳ್ಳಬಹುದು ಮತ್ತು ಮಧುಮೇಹದ ತೊಡಕುಗಳನ್ನು ಸಹ ನಿವಾರಿಸಿಕೊಳ್ಳಬಹುದು. ಮಧುಮೇಹಿಗಳು ಯಾವಾಗಲು ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬ ಗೊಂದಲಕ್ಕೆ ಒಳಗಾಗುತ್ತಾ ಇರುತ್ತಾರೆ.
ಮಧುಮೇಹಿಗಳು ಪೋಷಕಾಂಶಭರಿತವಾದ ಸಮತೋಲಿತ ಆಹಾರವನ್ನು ಸೇವಿಸಬೇಕು. ಮಧುಮೇಹದಿಂದ ಬಳಲುವವರು ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಾಮಾನ್ಯ ಮಟ್ಟದಲ್ಲಿರಿಸಿಕೊಳ್ಳುವ ದೃಷ್ಟಿಯಿಂದ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅವರು ತಮ್ಮ ರಕ್ತದೊತ್ತಡ ಮತ್ತು ರಕ್ತದಲ್ಲಿನ ಲಿಪಿಡ್ಗಳ ಮಟ್ಟವನ್ನು ಸಹ ಸಾಮಾನ್ಯವಾಗಿ ಇರಿಸಿಕೊಳ್ಳುವ ದೃಷ್ಟಿಯಿಂದ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸಬೇಕಾಗುತ್ತದೆ.
ಉತ್ತರ ಭಾರತೀಯ ಶೈಲಿಯಲ್ಲಿ ಯಾವ ಬಗೆಯ ಆಹಾರಗಳನ್ನು ಸೇವಿಸಿ ಮಧುಮೇಹವನ್ನು ನಿಯಂತ್ರಿಸುತ್ತಲೇ ನಮ್ಮ ಆಹಾರ ಅಭಿರುಚಿಗಳನ್ನು ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಒಂದು ಸಣ್ಣ ಉದಾಹರಣೆಯನ್ನು ಈ ಕೆಳಗೆ ನೀಡಿದ್ದೇವೆ ಓದಿ:
ಗಮನವಿಡಬೇಕಾದ ಅಂಶಗಳ ಪಟ್ಟಿ ಇಲ್ಲಿದೆ. ಇದರಲ್ಲಿ ಕ್ಯಾಲೋರಿಗಳ ಬಗ್ಗೆ ಗಮನವಿಟ್ಟು ಓದಿ ಅದರಂತೆ ಆಹಾರ ಸೇವಿಸಿದರೆ ಖಂಡಿತ ಮದುಮೇಹವನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು
ಮಾದರಿ ಮೆನು :
1 ಕಪ್ = 240 ಮಿ.ಲೀ , ½ ಕಪ್ = 120 ಮಿ.ಲೀ (ಪ್ರಮಾಣಿತ ಕಪ್ ಅಳತೆ)
ಅಡುಗೆ ಮಾಡಲಾದ ಆಹಾರವನ್ನು ಈ ಮೇಲೆ ಸೂಚಿಸಲಾದ ಕಪ್ಗಳಲ್ಲಿ ಅಳತೆ ಮಾಡಬೇಕಾಗುತ್ತದೆ.