ಆರೋಗ್ಯ

ಹಲ್ಲೆ ಪ್ರಕರಣ : ಬೆಳಿಗ್ಗೆ ಎರಡೂ ಕಡೆಯವರಿಗೂ ಶಿಕ್ಷೆ ಪ್ರಕಟ ; ಮಧ್ಯಾಹ್ನ ಎಲ್ಲರಿಗೂ ಜಾಮೀನು : ಮಂಗಳೂರಿನಲ್ಲೊಂದು ಅಪರೂಪದ ತೀರ್ಪು

Pinterest LinkedIn Tumblr

vinyanethra_convinsion

ಮಂಗಳೂರು: ಮಂಗಳೂರಿನಲ್ಲಿ 2010ರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ( ಕೌಂಟರ್ ಕೇಸ್ಎರಡೂ ತಂಡದ ವಿರುದ್ಧ ಪ್ರಕರಣ ದಾಖಲು) ) ಮಂಗಳೂರಿನ ನ್ಯಾಯಾಲಯವು ಎರಡೂ ಕಡೆಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ ಅಪರೂಪದ ಪ್ರಕರಣವೊಂದು ನಡೆದಿದೆ.

ಉರ್ವಸ್ಟೋರ್ ಸಮೀಪದ ದಡ್ಡಲ್ಕಾಡ್ ನಿವಾಸಿಗಳಾಗಿರುವ ಗಣೇಶ (37), ಪ್ರಸನ್ನ (40), ಯಶವಂತ (35), ದರ್ಶನ್ (34) ಹಾಗೂ ಬಿಜೆಪಿಯ ಎಸ್ ಸಿ ಮೋರ್ಚಾದ ಪದಾಧಿಕಾರಿಯಾಗಿರುವ ವಿನಯನೇತ್ರ ದಡ್ಡಲ್ಕಾಡ್ (37) ಎಂಬವರು ಕೆಪಿಟಿಯಲ್ಲಿ ವ್ಯವಸ್ಥಾಪಕರಾಗಿದ್ದ ದಶರಥ (61) ಎಂಬುವರಿಗೆ ಕ್ರಿಕೆಟ್ ಬ್ಯಾಟ್‌‌ನಿಂದ ಗಂಭೀರ ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ವಿರುದ್ಧ ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ ಮಂಗಳೂರು ಪ್ರಧಾನ ಸಿಜೆಎಂ ನ್ಯಾಯಾಲಯ ಎರಡೂ ಕಡೆಯವರಿಗೆ (ಇತ್ತಂಡ) ಶಿಕ್ಷೆ ವಿಧಿಸಿ ಅಪರೂಪದ ತೀರ್ಪನ್ನು ಪ್ರಕಟಿಸಿದೆ.

ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಐವರು ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಇದೇ ಘಟನೆಗೆ ಸಂಬಂಧಿಸಿ ಶಿಕ್ಷೆಗೊಳಗಾದ ಆರೋಪಿಗಳು ಅಂದು ಹಲ್ಲೆಗೊಳಗಾದ ದಶರಥನ ವಿರುದ್ಧ ಹೆಲ್ಮೆಟ್ನಿಂದ ಹಲ್ಲೆ ನಡೆಸಿರುವುದಾಗಿ ಪ್ರತಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ನ್ಯಾಯಾಲಯ ದಶರಥನಿಗೂ 6 ತಿಂಗಳು ಸೆರೆಮನೆ ವಾಸ ಹಾಗೂ 4 ಸಾವಿರ ರೂ. ದಂಡ ವಿಧಿಸಿದೆ.

2010 ಮಾ.21ರಂದು ಭೂ ವಿವಾದಕ್ಕೆ ಸಂಬಂಧಿಸಿ ದಡ್ಡಲ್ಕಾಡ್ ಗಣೇಶನ ಕಟ್ಟೆಯ ಬಳಿ ಗಣೇಶ, ಪ್ರಸನ್ನ, ಯಶವಂತ, ದರ್ಶನ್, ವಿನಯ ನೇತ್ರ ಇವರಿದ್ದ ತಂಡ ಹಾಗೂ ದಶರಥ ಮಧ್ಯೆ ಹೊಡೆದಾಟ ನಡೆದಿತ್ತು. ಉರ್ವ ಪೊಲೀಸ್ ಠಾಣೆಯಲ್ಲಿ ಬಗ್ಗೆ ದೂರು ಹಾಗೂ ಪ್ರತಿ ದೂರು ದಾಖಲಾಗಿತ್ತು.

ಗಣೇಶನ ತಂಡದ ವಿರುದ್ಧ ದಾಖಲಾದ ಪ್ರಕರಣವನ್ನು ಉರ್ವ ಠಾಣೆಯ ಅಂದಿನ ಎಸ್ಐ ಸುರೇಶ್ ಪಿ. ತನಿಖೆ ನಡೆಸಿದ್ದರು. ದಶರಥನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಅಂದಿನ ಎಸ್ಐ ಅನಂತ ಮುರ್ಡೇಶ್ವರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಸುನಿಲ್ ಸಿಂಗ್ ಅವರು ಇತ್ತಂಡಗಳ ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಗಣೇಶ ತಂಡದ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಹಾಗೂ ದಶರಥನ ಪ್ರಕರಣದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಸುಧೀರ್ ಕುಮಾರ್ ವಾದಿಸಿದ್ದರು.

ಇನ್ನೊಂದು ಆಶ್ಚರ್ಯಕರ ತೀರ್ಪು :

ಇದೇ ಸಂದರ್ಭದಲ್ಲಿ ಬೆಳಿಗ್ಗೆ ಶಿಕ್ಷೆಗೊಳಗಾದ ಎಲ್ಲಾ ಆರೋಪಿಗಳಿಗೂ ಆಶ್ಚರ್ಯಕರ ರೀತಿಯಲ್ಲಿ ಮಧ್ಯಾಹ್ನ ನಗರದ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಬಗ್ಗೆ ವರದಿಯಾಗಿದೆ. ಶಿಕ್ಷೆಗೊಳಗಾದ ಆರೋಪಿಗಳಿಗೆ ನ್ಯಾಯಾಲಯವು ಒಂದು ದಿನದ ಕಾಲವಾಕಾಶವನ್ನು ನೀಡದೇ ಅದೇ ದಿನ ಜಾಮೀನು ಮಂಜೂರು ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ.

 

Comments are closed.