ಅಂತರಾಷ್ಟ್ರೀಯ

ಇಸಿಸ್ ಉಗ್ರಗಾಮಿ ಮುಖಂಡ ನೀಲ್ ಪ್ರಕಾಶ್ ಬಂಧನ!

Pinterest LinkedIn Tumblr

neil-prakash

ಮಧ್ಯಪ್ರಾಚ್ಯ: ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಪ್ರಮುಖ ಉಗ್ರಗಾಮಿ ಮುಖಂಡ ನೀಲ್ ಪ್ರಕಾಶ್ ನನ್ನು ಮಧ್ಯ ಪ್ರಾಚ್ಯ ಪೊಲೀಸರು ಬಂಧಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿವಿಧ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ನೀಲ್ ಪ್ರಕಾಶ್ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಪ್ರಮುಖನಾಗಿದ್ದ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಯುವಕರನ್ನು ಕರೆತರುತ್ತಿದ್ದ ಕೆಲಸವನ್ನು ಕೂಡ 25 ವರ್ಷದ ನೀಲ್ ಪ್ರಕಾಶ್ ಮಾಡುತ್ತಿದ್ದ. ಕಾಂಬೋಡಿಯಾ ಹಾಗೂ ಫಿಜಿ ಮೂಲದ ನೀಲ್ ಪ್ರಕಾಶ್‌, ಇರಾಕ್‌ನಲ್ಲಿ ಇಸಿಸ್ ಸಂಘಟನೆಯ ಪ್ರಮುಖ ನಾಯಕನಾಗಿದ್ದ. ಜಗತ್ತಿನ ವಿವಿಧೆಡೆ ದಾಳಿ ನಡೆಸಲು ಆಸ್ಟ್ರೇಲಿಯಾ ನಾಗರಿಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ನೀಲ್ ಪ್ರಕಾಶ್ ಚಲನವಲನದ ಮೇಲೆ ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇನೆ ನಿಗಾವಹಿಸಿತ್ತು.

ಕಳೆದ ಜುಲೈ ತಿಂಗಳಲ್ಲಿ ಅಮೆರಿಕ ಇರಾಕ್‌ನಲ್ಲಿ ನಡೆಸಿದ ವಾಯುದಾಳಿಯಲ್ಲಿ ಪ್ರಕಾಶ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ಮತ್ತು ಅಮೆರಿಕ ಪ್ರಕಟಿಸಿದ್ದವಾದರೂ ಘಟನೆಯಲ್ಲಿ ನೀಲ್ ಪ್ರಕಾಶ್ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದ. 2013ರಲ್ಲಿ ಐಎಸ್‌ಗೆ ಸೇರಿದ ನಂತರ ಅಬುಖಲೇದ್‌ ಅಲ್‌ ಕಾಂಬೋಡಿ ಎಂದು ಈತ ಹೆಸರು ಬದಲಾಯಿಸಿಕೊಂಡಿದ್ದ ಈತ ಯುವಕರಿಗೆ ಆಮಿಷ ಒಡ್ಡಿ ಸಂಘಟನೆಗೆ ಸೇರಿಸುತ್ತಿದ್ದ. ಅಲ್ಲದೆ, ಅನೇಕ ದುಷ್ಕೃತ್ಯಗಳಲ್ಲಿ ಸ್ವತಃ ಭಾಗಿಯಾಗಿ, ತಲೆಮರೆಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

Comments are closed.