ಆರೋಗ್ಯ

ತಿನ್ನಲು ಸಿಹಿಯಾಗಿರುವ ಈ ಹಣ್ಣು ಆರೋಗ್ಯದ ಸಿಹಿ ಹೆಚ್ಚಿಸುವಲ್ಲಿ ಎಷ್ಟು ಪರಿಣಾಮಕಾರಿ ಬಲ್ಲಿರಾ..?

Pinterest LinkedIn Tumblr

dates_1

 ಮರಗಿಡಬಳ್ಳಿಗಳ ಅನೇಕ ಹೆಸರುಗಳಲ್ಲಿ “ತರು” ಎಂಬುದೂ ಒಂದು, ತರು-ಎಂದರೆ ದಾಟುವುದು ಎಂದು: ಏನನ್ನು ದಾಟುವುದು?… ದುಃಖವನ್ನು ದಾಟುವುದು; ಆಪತ್ತುಗಳಿಂದ ಮುಕ್ತವಾಗುವುದು ಎಂದರ್ಥ. ಮರಗಿಡಬಳ್ಳಿಗಳೂ, ವೃಕ್ಷಗಳೂ ತಮ್ಮ ಗುಣ, ವೀರ್ಯ, ಪ್ರಭಾವಗಳಿಂದ-ಮಾನವನ ದುಃಖವನ್ನು ಪರಿಹರಿಸುತ್ತವೆ; ತಾರಣಮಾಡುತ್ತವೆ; ಆದುದರಿಂದ ಅದಕ್ಕೆ ‘ತರು’ ಎಂದರು.

ಅಮೃತವೆಂಬುದು ವನೌಷಧಿಗಳ ಇನ್ನೂಂದು ಹೆಸರು. ಈ ವನೌಷಧಿಯಲ್ಲಿ ವನಸ್ಪತಿ, ವೃಕ್ಷ, ವೀರುಧ ಮತ್ತು ಔಷಧಗಳೆಂಬ ನಾಲ್ಕು ಭೇದಗಳುಂಟು. ಮಾನವನನ್ನು ಸಾವಿನಿಂದ ತಪ್ಪಿಸುವ, ಕಷ್ಟ ದುರಂತ ಗಳಿಂದ ಪಾರುಮಾಡುವ ಇಂತಹ ವನೌಷಧಿಗಳು ಅಮೃತವಲ್ಲದೆ ಮತ್ತೇನು?

ದಿನವೂ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಗುಣಗಳಿವೆ. ತಿನ್ನಲು ಸಿಹಿಯಾಗಿರುವ ಈ ಹಣ್ಣು ಆರೋಗ್ಯದ ಸಿಹಿ ಹೆಚ್ಚಿಸುವಲ್ಲಿ ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಮುಂದೆ ಓದಿ.

1. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಬೇಗನೆ ಶಕ್ತಿಯನ್ನು ತುಂಬುವುದು.

2. ದಿನವೂ ಖರ್ಜೂರ ತಿಂದರೆ ಹೊಟ್ಟೆಯಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯವನ್ನು ಹೆಚ್ಚು ಉತ್ಪತ್ತಿ ಮಾಡುವುದರಿಂದ ಕರಳಿನ ಕಾರ್ಯಕ್ಕೆ ಸಹಾಯಮಾಡುತ್ತದೆ.

3. ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದು.

4. ಖರ್ಜೂರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಜ್ಯೂಸ್ ರೀತಿ ಮಾಡಿ ಕುಡಿಯುವುದು ಹೃದಯ ಸಮಸ್ಯೆ ಇರುವವರಿಗೆ ಒಳ್ಳೆಯದು.

5. ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.

6. ಅಸಿಡಿಟಿ ಮತ್ತು ಹೃದಯದ ಉರಿ ಕಡಿಮೆಯಾಗಲು ಖರ್ಜೂರ ಸಹಾಯಮಾಡುತ್ತದೆ.

7. ಹೆರಿಗೆಯ ನಂತರ ಎದೆಯಲ್ಲಿ ಹಾಲು ಹೆಚ್ಚು ಉತ್ಪತ್ತಿ ಮಾಡುತ್ತದೆ.

8. ಖರ್ಜೂರ ಹಾಕಿ ಕಾಯಿಸಿದ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.

Comments are closed.