ಆರೋಗ್ಯ

ಮೂತ್ರಪಿಂಡದಲ್ಲಿ ಬೆಳೆಯುವ ಕಲ್ಲನ್ನು ತೊಡೆದುಹಾಕಲು ಇದು ಸಹಕಾರಿ

Pinterest LinkedIn Tumblr

ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸುವುದರಿಂದ ಸಾಕಷ್ಟು ಕಾಯಿಲೆಗಳು ದೂರವಾಗುತ್ತವೆ.

ನಿಮಗೆ ಆಮ್ಲದ ಸಮಸ್ಯೆ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿದ್ರೆ ಒಳ್ಳೆಯದು.
ವಾಯು ಸಮಸ್ಯೆಗೂ ಇದು ಉತ್ತಮ ಮದ್ದು. ಹೊಟೇಲ್ ತಿಂಡಿ ಸೇವಿಸಿದ ನಂತ್ರ ಹೊಟ್ಟೆಯಲ್ಲಿ ವಾಯು ತುಂಬಿಕೊಂಡ ಅನುಭವವಾಗುತ್ತದೆ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿಯಬೇಕು.ಮೂತ್ರಪಿಂಡದಲ್ಲಿ ಬೆಳೆಯುವ ಕಲ್ಲನ್ನು ತೊಡೆದುಹಾಕಲು ಇದು ಸಹಕಾರಿ. ದೇಹದಲ್ಲಿ ಆಮ್ಲದ ಪ್ರಮಾಣ ಜಾಸ್ತಿಯಾದಾಗ ಮೂತ್ರದಲ್ಲಿ ಕಲ್ಲು ಕಾಣಿಸಿಕೊಳ್ಳುತ್ತದೆ.

ಸೋಡಾ ನೀರು ದೇಹದಲ್ಲಿ ಆಮ್ಲದ ಪ್ರಮಾಣವನ್ನು ಸಮತೋಲನದಲ್ಲಿಟ್ಟು ಸಮಸ್ಯೆಗೆ ಪರಿಹಾರ ನೀಡುತ್ತದೆ.ಆಮ್ಲದ ಪ್ರಮಾಣ ಹೆಚ್ಚಾದಾಗ ಚರ್ಮ ಸಮಸ್ಯೆ ಹಾಗೂ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಅಡುಗೆ ಸೋಡಾ ನೀರು ಒಳ್ಳೆಯ ಔಷಧಿ.

ಆಗಾಗ ಮೂತ್ರ ಮಾಡಬೇಕೆನ್ನಿಸಿದ್ರೆ ಇಲ್ಲವೆ ಯೂರಿನ್ ನಲ್ಲಿ ಸೋಂಕು ಕಾಣಿಸಿಕೊಂಡರೆ ತಕ್ಷಣ ಸೋಡಾ ನೀರು ಕುಡಿಯಿರಿ. ಸೋಂಕಿನ ಕಾರಣದಿಂದ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ವೇಳೆ ಸೋಡಾ ನೀರು ಲಾಭದಾಯಕ. ನೋವನ್ನು ಹುಟ್ಟು ಹಾಕುವ ಆಮ್ಲವನ್ನು ಇದು ಕಡಿಮೆ ಮಾಡುತ್ತದೆ.

ಅಂದವಾದ ಮುಖದ ಮೇಲೆ ಬ್ಲ್ಯಾಕ್ ಹೆಡ್ಸ್ ಇದ್ದರೆ ಒಂದು ರೀತಿ ಹಿಂಸೆ. ಮೂಗು, ಗಲ್ಲ ಹಾಗೂ ಹಣೆಯ ಮೇಲೆ ಬರುವ ಈ ಬ್ಲ್ಯಾಕ್ ಹೆಡ್ಸ್ ಸುಂದರ ತ್ವಚೆಯ ಮೇಲೆ ಕಲೆ ಮೂಡಿಸುತ್ತವೆ. ಸತ್ತ ಚರ್ಮ ಹಾಗೂ ಅಧಿಕ ಎಣ್ಣೆ ಅಂಶ ಚರ್ಮದ ಮೇಲೆ ಸಂಗ್ರಹ ವಾಗುವುದರಿಂದ ಈ ಬ್ಲ್ಯಾಕ್ ಹೆಡ್ಸ್ ಉಂಟಾಗಲು ಕಾರಣವಾಗುತ್ತದೆ. ಈ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆ ಇಲ್ಲ. ಬದಲಿಗೆ ಮನೆಯಲ್ಲೇ ಸಿಗುವ ಹಲವು ಪದಾರ್ಥಗಳಿಂದ ಬ್ಲ್ಯಾಕ್ ಹೆಡ್ಸ್ ಗಳನ್ನು ಹೋಗಲಾಡಿಸಬಹುದು.

ಸ್ಟೀಮ್ ಫೇಸಿಯಲ್: ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ತುಂಬಾ ಸುಲಭ ಹಾಗೂ ಪರಿಣಾಮಕಾರಿ ವಿಧಾನ ಅಂದರೆ ಮುಖಕ್ಕೆ ನೀರಿನ ಹಬೆ ನೀಡುವುದು ಅಥವಾ ಸ್ಟೀಮ್ ಫೇಸಿಯಲ್. ಒಂದು ಪಾನ್ ನಲ್ಲಿ ನೀರು ಹಾಕಿ, ಅದಕ್ಕೆ ಸುಮಾರು ಮೂರರಿಂದ ನಾಲ್ಕು ಹನಿಗಳಷ್ಟು ನಿಂಬೆರಸ ಸೇರಿಸಿ ಕುದಿಸಿ, ಈ ನೀರಿನಿಂದ ಬರುವ ಹಬೆಗೆ ಮುಖವನ್ನು ಒಡ್ಡಿ. ಹೀಗೆ ಮಾಡುವುದರಿಂದ ಚರ್ಮ ಮೃದುವಾಗಿ ಬ್ಲ್ಯಾಕ್ ಹೆಡ್ಸ್ ಮಾಯವಾಗುತ್ತದೆ.

ಅಡುಗೆ ಸೋಡಾ
ಇನ್ನು ಅಡುಗೆ ಸೋಡಾ ಕೂಡ ಬ್ಲ್ಯಾಕ್ ಹೆಡ್ಸ್ ಗೆ ಪರಿಣಾಮಕಾರಿ. ಎರಡು ಮೂರು ಚಮಚ ಅಡುಗೆ ಸೋಡಾವನ್ನು 1 ಚಮಚ ನೀರಿನಲ್ಲಿ ಬೆರೆಸಿ. ಅದನ್ನು ಬ್ಲ್ಯಾಕ್ ಹೆಡ್ಸ್ ಇರುವೆಡೆ ಹಚ್ಚಿ ಸುಮಾರು 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಹೀಗೆ ಸುಮಾರು ಒಂದು ವಾರ ಮಾಡಿದರೇ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುತ್ತದೆ.

ಮೊಟ್ಟೆಯ ಬಿಳಿಭಾಗ
ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಮತ್ತೊಂದು ಸುಲಭ ವಿಧಾನವೆಂದರೇ ಹಸಿ ಮೊಟ್ಟೆಯ ಬಿಳಿಭಾಗವನ್ನು ಸ್ವಲ್ಪ ಕಲೆಸಿ, ನಂತರ ಅದನ್ನು ಮೇಕಪ್ ಬ್ರಷ್ ನಿಂದ ಎಲ್ಲೆಲ್ಲಿ ಬ್ಲ್ಯಾಕ್ ಹೆಡ್ಸ್ ಇದೆಯೋ ಅಲ್ಲಿಗೆ ಹಚ್ಚಿ. ಅದರ ಮೇಲೆ ಟಿಸ್ಯೂ ಪೇಪರ್ ಇಟ್ಟು ಮತ್ತೊಂದು ಲೇಯರ್ ಮೊಟ್ಟೆ ಹಚ್ಚಿ. ಅದು ಒಣಗಿದ ನಂತರ ಟಿಸ್ಯೂ ಪೇಪರ್ ಅನ್ನು ನಿಧಾನವಾಗಿ ಎಳೆಯಿರಿ. ನಂತರ ಮುಖವನ್ನು ಬಿಸಿನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಮೂರು ಭಾರಿ ಹೀಗೆ ಮಾಡುವುದರಿಂದ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುತ್ತದೆ.

Comments are closed.