ಆರೋಗ್ಯ

ಕೊತ್ತಂಬರಿಯಲ್ಲಿರುವ ಔಷಧೀಯ ಗುಣಗಳು ಏನು ಗೊತ್ತೇ …?

Pinterest LinkedIn Tumblr

coriander_leafe_cilantro

ಮಂಗಳೂರು: ಕೊತ್ತಂಬರಿಯನ್ನು ಬೀಜಕ್ಕಾಗಿ (ಧನಿಯಾ, ಹವೀಜ) ಮತ್ತು ಸೊಪ್ಪಿಗಾಗಿ ಬೆಳೆಯುತ್ತಾರೆ. ಇದನ್ನು ಔಷಧಿಯಾಗಿ ಗ್ರೀಕ್ ವೈದ್ಯರು ಬಳಸುತ್ತಿದ್ದರಂತೆ. ಇದರ ಬೀಜವನ್ನು ಮಸಾಲೆಪುಡಿ, ಸಾಂಬಾರಪುಡಿಗಾಗಿ ಬಳಸಿದರೆ, ಸೊಪ್ಪನ್ನು ತಿನ್ನಲು ಬಳಸುತ್ತಾರೆ. ಇದರಲ್ಲಿ ವಿಟಮಿನ್ ‘ಸಿ’ ಮತ್ತು ವಿಟಮಿನ್ ‘ಎ’ದ ಅಂಶವಿರುತ್ತದೆ. ಇದರಲ್ಲಿ ಪೋಷಕಾಂಶಗಳಾದ ಸುಣ್ಣಾಂಶ, ರಂಜಕ, ಮತ್ತು ಕಬ್ಬಿಣ ಅಂಶ ಇವೆ.

ಔಷಧೀಯ ಗುಣಗಳು :
* ಬಾಯಿಹುಣ್ಣಿನ ತೊಂದರೆ ನಿವಾರಿಸಲು ಕೊತ್ತಂಬರಿ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸಬೇಕು. ಇಲ್ಲವೆ ಊಟದ ನಂತರ ಎಲೆಗಳನ್ನು ಅಗಿದು ತಿನ್ನಬೇಕು.

* ಇದರಲ್ಲಿ ಅಧಿಕ ಕಬ್ಬಿಣಾಂಶ ಇರುವುದರಿಂದ ರಕ್ತಹೀನತೆಯಿಂದ (ಎನಿಮಿಕ್)ಬಳಲುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಚಮಚೆ ಕೊತ್ತಂಬರಿ ಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.

* ಉಷ್ಣದಿಂದ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿನಲ್ಲಿ ಹಿಂಡಬೇಕು.

* ತಲೆಸುತ್ತಿಗೆ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲುಸಕ್ಕರೆ ಬೆರೆಸಿ ಸೇವಿಸಬೇಕು.

* ಆಹಾರವು ಸುಲಭವಾಗಿ ಜೀರ್ಣವಾಗಲು, ಹೊಟ್ಟೆಯುಬ್ಬರ ಕಾಡದೆ ಇರಲು ಪ್ರತಿದಿನ ಊಟದ ನಂತರ ಒಂದು ಲೋಟ ಮಜ್ಜಿಗೆಯನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಅಥವಾ ರಸದೊಂದಿಗೆ ಕುಡಿಯುವದನ್ನು ರೂಢಿಸಿಕೊಳ್ಳಬೇಕು.

* ಹಲ್ಲು ಹುಳುಕಾಗುದನ್ನು ತಡೆಯಲು, ಒಸಡು ಗಟ್ಟಿಗೊಳಿಸಲು ಪ್ರತಿದಿನ ಊಟದ ನಂತರ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕು.

coriander_leafe_chanti

ಅಡುಗೆಯಲ್ಲಿ ಹಲವಾರು ವಿಧಗಳಿಂದ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಕೊತ್ತಂಬರಿಯಲ್ಲಿಯ ತೈಲಾಂಶ ಪಿತ್ತನಾಶಕವೂ ಆಗಿದೆ. ಕೊತ್ತಂಬರಿ ಸೊಪ್ಪಿನಿಂದ ಚಟ್ನಿ, ಸಂಡಿಗೆ, ವಡೆ, ದೋಸೆ, ಹಪ್ಪಳ ತಯಾರಿಸುವ ವಿಧಾನವನ್ನು ಹಲವು ಬಗೆಯಲ್ಲಿದೆ .

ನಿಮಗೆ ಈ ಲೇಖನ ಇಷ್ಟವಾದರೇ ದಯವಿಟ್ಟು ಇತರರಿಗೆ ಉಪಯೋಗವಾಗಲು ಶೇರ್ ಮಾಡಿ

Comments are closed.