ಆರೋಗ್ಯ

ಪುರುಷರೇ ನಿಮ್ಮ ಸಂತಾನಶಕ್ತಿ ಉಳಿಯಬೇಕಾದರೆ ನೀವು ಇದರಿಂದ ದೂರ ಇರಲೇಬೇಕು…

Pinterest LinkedIn Tumblr

male-infertility-treatment

ಪುರುಷರು ತಮ್ಮ ಸಂತಾನಶಕ್ತಿ ಕುಂದಬಾರದೆಂದು ಬಯಸಿದ್ದರೆ ಈ ಏಳು ವಿಷಯಗಳಿಂದ ದೂರವುಳಿಯುವುದು ಒಳ್ಳೆಯದು. ಇವು ತಮ್ಮ ವೀರ್ಯಾಣುಗಳ ಸಂಖ್ಯೆಯನ್ನು ತಗ್ಗಿಸುತ್ತವೆ ಎಂಬ ಅರಿವು ಪುರುಷರಿಗೆ ಇರಲಿಕ್ಕಿಲ್ಲ.

ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ

ಪ್ಲಾಸ್ಟಿಕ್‌ನಲ್ಲಿ ಬಳಕೆಯಾಗುವ ಬೈಸ್ಫೆನಾಲ್ ಎ(ಬಿಪಿಎ) ಎಂಬ ಹಾರ್ಮೋನ್‌ನಂತಹ ರಾಸಾಯನಿಕವು ಸಂತಾನಶಕ್ತಿಗೆ ಹಾನಿಕಾರಕವಾಗಿದೆ. ಇದಕ್ಕೆ ತನ್ನನ್ನು ಒಡ್ಡಿಕೊಳ್ಳುವ ವ್ಯಕ್ತಿ ಮಗುವಿನ ಸೃಷ್ಟಿಕ್ರಿಯೆಯಲ್ಲಿ ತನ್ನ ಕೊಡುಗೆಯನ್ನು ಸಲ್ಲಿಸುವಲ್ಲಿ ವಿಫಲನಾಗಬಹುದು. ಬಿಪಿಎ ಹಾರ್ಮೋನ್‌ಗಳಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ ಎನ್ನುವುದು ಸಂಶೋಧಕರ ಅಭಿಮತ.

ಪ್ಲಾಸ್ಟಿಕ್ ಅಥವಾ ಲೋಹದ ಕಂಟೇನರ್‌ಗಳಲ್ಲಿ ನೀಡಲಾಗುವ ಯಾವುದೇ ಪೇಯವನ್ನು ಕುಡಿಯದಿರುವುದು ಪುರುಷರು ತಮ್ಮ ವೀರ್ಯಾಣುಗಳನ್ನು ರಕ್ಷಿಸಿಕೊಳ್ಳುವ ಅತ್ಯುತ್ತಮ ವಿಧಾನವಾಗಿದೆ.

ವೈ-ಫೈ ಸಂಪರ್ಕ

ಉಷ್ಣತೆಯಿಂದ ವೀರ್ಯಾಣುಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಲ್ಯಾಪ್‌ಟಾಪ್‌ನ್ನು ಮಡಿಲಲ್ಲಿಟ್ಟುಕೊಂಡು ಕೆಲಸ ಮಾಡಬಾರದು ಎಂಬ ಸಲಹೆ ನಿಮಗೆ ಯಾರಾದರೂ ನೀಡಿದ್ದಿರಬಹುದು. ಆದರೆ ಕಂಫ್ಯೂಟರ್‌ನ ವೈ-ಫೈ ಸಂಪರ್ಕ ಕೂಡ ಪುರುಷರ ಫಲವತ್ತತೆಯನ್ನು ತಗ್ಗಿಸಬಹುದು ಎನ್ನುವುದು ನಿಮಗೆ ಗೊತ್ತಿರಲಿಕ್ಕಿಲ್ಲ. ಲ್ಯಾಪ್‌ಟಾಪ್‌ನ ವೈ-ಫೈ ಸಂಪರ್ಕದಿಂದ ಹೊರಸೂಸುವ ವಿಕಿರಣ ಡಿಎನ್‌ಎಗೆ ಹಾನಿಯನ್ನುಂಟು ಮಾಡಬಹುದು ಮತ್ತು ವೀರ್ಯಾಣುಗಳ ಚಲನಶೀಲತೆಯನು ್ನ ತಗ್ಗಿಸಬಹುದು

ಧೂಮಪಾನ ಬೇಡವೇ ಬೇಡ

ಧೂಮಪಾನ ಗುಪ್ತಾಂಗಗಳಿಗೆ ರಕ್ತದ ಹರಿವನ್ನು ಕಡಿಮೆಗೊಳಿಸುತ್ತದೆ ಮತ್ತು ನಿಮಿರುವಿಕೆ ಸಮಸ್ಯೆಗೆ ಕಾರಣವಾಗಬಲ್ಲುದು.

ವೀರ್ಯಾಣುಗಳ ಸಂಖ್ಯೆಯ ಕುಸಿತಕ್ಕೆ ಕಾರಣವಾಗುವ ಜೊತೆಗೆ ಅದು ಚಲನಶೀಲತೆಗೂ ಕಡಿವಾಣ ಹಾಕುತ್ತದೆ. ಹೀಗಾದಾಗ ವೀರ್ಯಾಣು ಅಂಡಾಣುವನ್ನು ತಲುಪುವಲ್ಲಿ ತನ್ನ ವೇಗವನ್ನು ಕಳೆದುಕೊಳ್ಳುತ್ತದೆ.

ಕೂಲ್ ಕೂಲ್ ಆಗಿರಲಿ

ಪುರುಷರಲ್ಲಿ ವೀರ್ಯವನ್ನು ಉತ್ಪಾದಿಸುವ ವೃಷಣಗಳು ಸಾಮಾನ್ಯವಾಗಿ ದೇಹದ ಇತರ ಭಾಗಗಳಿಗಿಂತ ನಾಲ್ಕು ಡಿಗ್ರಿ ಕಡಿಮೆ ಉಷ್ಣತೆಯನ್ನು ಹೊಂದಿರುತ್ತವೆ. ಈ ಉಷ್ಣತೆಯಲ್ಲಿ ಗಮನಾರ್ಹ ಏರಿಕೆಯಾದರೆ ಅದು ವೀರ್ಯಾಣುಗಳ ಸಂಖ್ಯೆ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು.

ಇತರ ಬಣ್ಣಗಳಿಗೆ ಹೋಲಿಸಿದರೆ ಕಪ್ಪುಬಣ್ಣ ಉಷ್ಣತೆಯನ್ನು ಹೆಚ್ಚು ಹೀರಿಕೊಳ್ಳುತ್ತದೆ. ಹೀಗಾಗಿ ದಿನವಿಡೀ ಕಪ್ಪುಬಣ್ಣದ ಒಳಚಡ್ಡಿಗಳನ್ನು ಧರಿಸುವುದರಿಂದ ವೃಷಣಗಳ ಉಷ್ಣತೆ ಹೆಚ್ಚುತ್ತದೆ. ಅಲ್ಲದೆ ನಿಮ್ಮ ಅಳತೆಗೆ ಹೊಂದದ ಅಥವಾ ತುಂಬ ಬಿಗಿಯಾದ ಒಳಚಡ್ಡಿಗಳಿಂದಾಗಿ ವೃಷಣಗಳು ಜಜ್ಜಿದಂತಾಗಿ ವೀರ್ಯಾಣುವಿನ ಗುಣಮಟ್ಟ ತಗ್ಗಬಹುದು.

ಮದ್ಯದಿಂದ ದೂರವಿರಿ

ಮದ್ಯ ಪುರುಷರ ವೀರ್ಯಕ್ಕೆ ವೈರಿಯಾಗಿದ್ದು,ಅದು ವೀರ್ಯದ ಆರೋಗ್ಯವನ್ನೇ ಹದಗೆಡಿಸಿಬಿಡುತ್ತದೆ. ಮದ್ಯಪಾನ ಯಕೃತ್ತಿನ ಕಾರ್ಯ ನಿರ್ವಹಣೆಗೆ ತೊಡಕನ್ನುಂಟು ಮಾಡುತ್ತದೆ ಮತ್ತು ಎಸ್ಟ್ರೋಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ವೀರ್ಯಾಣು ಅಭಿವೃದ್ಧಿಗೆ ತೊಡಕನ್ನುಂಟು ಮಾಡುವುದಲ್ಲದೆ ಹಾರ್ಮೋನುಗಳ ಮಟ್ಟವನ್ನೂ ವ್ಯತ್ಯಯಗೊಳಿಸುತ್ತದೆ.

ಮದ್ಯ ನಂಜಿನ ಅಂಶವನ್ನು ಹೊಂದಿರುವುದರಿಂದ ಅದು ವೀರ್ಯವನ್ನು ಉತ್ಪಾದಿಸುವ ಜೀವಕೋಶಗಳನ್ನೇ ಕೊಂದುಬಿಡುತ್ತದೆ.

ಹೀಗಾಗಿ ಮದ್ಯಪಾನ ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ತಗ್ಗಿಸುವ ಜೊತೆಗೆ ಟೆಸ್ಟೋಸ್ಟೆರೋನ್ ಮಟ್ಟವೂ ಕುಸಿಯುವಂತೆ ಮಾಡುತ್ತದೆ. ಅದು ಷಂಡತ್ವಕ್ಕೂ ಕಾರಣವಾಗಬಲ್ಲುದು.

ಎದುರಿನ ಜೇಬಿನಲ್ಲಿ ಮೊಬೈಲ್ ಪೋನ್ ಬೇಡ

ಪುರುಷರು ತಮ ಜೇಬುಗಳಲ್ಲಿ ಮೊಬೈಲ್ ಫೋನ್‌ಗಳನ್ನಿಟ್ಟುಕೊಳ್ಳುವುದರಿಂದ ಅದರಿಂದ ಹೊರಸೂಸುವ ವಿಕಿರಣದಿಂದಾಗಿ ವೀರ್ಯಾಣು ಚಲನಶೀಲತೆ ಮತ್ತು ಕ್ಷಮತೆ ಕಡಿಮೆಯಾಗುತ್ತವೆ ಎನ್ನುವುದನ್ನು ನೂತನ ಅಧ್ಯಯನವೊಂದು ಸಾಬೀತು ಮಾಡಿದೆ. ಅಲ್ಲದೇ ಮೊಬೈಲ್‌ನಿಂದ ಹೊರಸೂಸುವ ವಿಕಿರಣ ಮತ್ತು ಕಂಪನಗಳು ವೀರ್ಯಾಣುಗಳ ಸಂಖ್ಯೆಯನ್ನು ಶೇ.9ರಷ್ಟರವರೆಗೂ ಕಡಿಮೆ ಮಾಡುತ್ತವೆ.

ಒತ್ತಡವೂ ಹಾನಿಕಾರಕ

ಒತ್ತಡದ ಸಮಯದಲ್ಲಿ ನಮ್ಮ ದೇಹವು ಕಾರ್ಟಿಸೋಲ್‌ನಂತಹ ಒತ್ತಡ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತವೆ ಮತ್ತು ಇವು ವೀರ್ಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲ ಲೈಂಗಿಕ ಹಾರ್ಮೋನ್‌ಗಳ ಬಿಡುಗಡೆಯ ಪ್ರಮಾಣವನ್ನು ಕುಂದಿಸುತ್ತವೆ. ಇದು ವೀರ್ಯಾಣುಗಳ ಸಂಖ್ಯೆಯಲ್ಲಿ ಕುಸಿತ ಮತ್ತು ಲೈಂಗಿಕ ಚಟುವಟಿಕೆಗಳ ಕ್ಷೀಣಿಸುವಿಕೆಗೆ ಕಾರಣವಾಗುತ್ತದೆ. ಒತ್ತಡ ಫಲವಂತಿಕೆ ಸಮಸ್ಯೆಗೂ ಕಾರಣವಾಗುತ್ತದೆ. ಹೀಗಾಗಿ ಒತ್ತಡಮುಕ್ತವಾದ ಆರೋಗ್ಯಪೂರ್ಣ ಜೀವನ ಶೈಲಿ ಎಲ್ಲ ರೀತಿಯಲ್ಲಿಯೂ ಉತ್ತಮ.

Comments are closed.