ಗಲ್ಫ್

ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್‌ರನ್ನು ಭೇಟಿಯಾದ ಯುಎಇ ರಾಜಕುಮಾರಿ

Pinterest LinkedIn Tumblr

uae

ದುಬೈ: ಯುಎಇ ಉಪಾಧ್ಯಕ್ಷ, ಪ್ರಧಾನಮಂತಿ ಮತ್ತು ದುಬೈ ಆಡಳಿತಾಧಿಕಾರಿಯಾದ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್‌ರ ಪತ್ನಿ ಹಯಾ ರಾಜಕುಮಾರಿ ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್‌ರನ್ನು ಭೇಟಿಯಾಗಿದ್ದಾರೆಂದು ವರದಿಯಾಗಿದೆ.

“ಯುನೈಟಡ್ ಫಾರ್ ಪೀಸ್” ಎಂಬ ಹೆಸರಿನಲ್ಲಿ ನಡೆದ ಸೌಹಾರ್ದ ಫುಟ್‌ಬಾಲ್ ಸ್ಪರ್ಧೆಯನನು ವೀಕ್ಷಿಸಲು ಯುಎಇಯನ್ನು ಪ್ರತಿನಿಧಿಸಿ ಶೇಖ್ ಹಯಾ ವ್ಯಾಟಿಕನ್‌ಗೆ ಬಂದಿದ್ದರು. ದುಬೈ ಕ್ರೀಡಾರಾಯಭಾರಿ ಮರಡೋನಾ ಕೂಡಾ ಪ್ರತಿನಿಧಿ ತಂಡದಲ್ಲಿದ್ದರು.

ಜಗತ್ತಿನ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಹಸಿವು ಅನುಭವಿಸುತ್ತಿರುವುದರ ಕುರಿತು ಇಬ್ಬರೂ ಮುಖ್ಯವಾಗಿ ಚರ್ಚಿಸಿದ್ದಾರೆ. ತನ್ನ ಅಧ್ಯಕ್ಷತೆಯ ದುಬೈ ಕೇಂದ್ರವಾಗಿಟ್ಟು ಕಾರ್ಯವೆಸಗುತ್ತಿರುವ ಇಂಟರ್‌ನ್ಯಾಶನಲ್ ಹ್ಯೂಮಾನಿಟೇರಿಯನ್ ಸಿಟಿಯ ಕುರಿತು ಹಯಾ ರಾಜಕುಮಾರಿ ವಿವರಿಸಿದ್ದಾರೆ.

ಸಮಾಲೋಚನೆಯ ನಂತರ ಹಯಾ ರಾಜಕುಮಾರಿ ಹ್ಯೂಮಾನೇಟಿರಿಯನ್ ಸಿಟಿ ಸಂಸ್ಥೆ ಸಂಗ್ರಹಿಸಿದ ಸಂತ್ರಸ್ತರ ನೆರವಿನೊಂದಿಗೆ ಹೈಟಿಗೆ ಭೇಟಿನೀಡಲು ತೆರಳಿದ್ದಾರೆ. ಮಾಥ್ಯೂ ಬಿರುಗಾಳಿಗೆ ಸಿಲುಕಿ ನಾಶನಷ್ಟ ಅನುಭವಿಸಿದ ದ್ವೀಪದ ಜನರಿಗೆ ಅಗತ್ಯ ನೆರವನ್ನು ನೇರವಾಗಿ ಹಸ್ತಾಂತರಿಸುವುದು ಅವರ ಉದ್ದೇಶವಾಗಿದೆ. ಶೇಖ್ ಮುಹಮ್ಮದ್‌ರ ಮಾಲಕತ್ವದ ವಿಮಾನದಲ್ಲಿ ಮೂರು ಲಕ್ಷ ಡಾಲರ್ ಮೊತ್ತದ ನೆರವು ಸಾಮಗ್ರಿಗಳನ್ನು ಹೈಟಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Comments are closed.