ಕರ್ನಾಟಕ

ಮಹಾದಾಯಿ: ಮಹಾರಾಷ್ಟ್ರ ಸಿಎಂ ಜತೆ ಚರ್ಚಿಸಿದ್ದೇವೆ, ಬಹಿರಂಗ ಮಾತು ಅಗತ್ಯವಿಲ್ಲ– ಜಗದೀಶ ಶೆಟ್ಟರ್‌

Pinterest LinkedIn Tumblr

Jagadish-shettar1ಧಾರವಾಡ: ಮಹದಾಯಿ ನದಿ ನೀರು ಹಂಚಿಕೆ, ಕಳಸಾ ಬಂಡೂರಿ ಯೋಜನೆ ಜಾರಿ ವಿಚಾರವಾಗಿ ನಾವು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತನಾಡಿದ್ದೇವೆ. ಈ ಕುರಿತು ಎಲ್ಲವನ್ನು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ನಾವು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಿದ್ದೇವೆ. ಗೋವಾ ವಿರೋಧ ಪಕ್ಷದವರ ಮನವೊಲಿಸುವ ಕೆಲಸಕ್ಕೆ ಮುಖ್ಯಮಂತ್ರಿ ಅಥವಾ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರಯೇ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಕಳಸಾ ಬಂಡೂರಿ ನಾಲಾ ನಿರ್ಮಾಣಕ್ಕೆ ನೂರು ಕೋಟಿ ಬಿಡುಗಡೆ ಮಾಡಿತ್ತು. ಕಾಂಗ್ರೆಸ್‌ನವರದ್ದು ಬರಿ ಬಾಯಿ ಮಾತಾಗಿದೆ ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್‌ ಒಳ–ಹೊರಗೆ
ಮುಖ್ಯಮಂತ್ರಿ ಕಾರ್ಯ ವೈಖರಿಗೆ ಪಕ್ಷದ ಒಳಗೂ ಹಾಗೂ ಹೋರಗೂ ವಿರೋಧವಿದೆ. ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಅವರಿಗೆ ಅನ್ಯಾಯವಾಗಿದೆ ಎಂದ ಅವರು, ಎಂಥ ಭ್ರಷ್ಟಾಚಾರ ಮಾಡಿದ ಆರೋಪ ಕೇಳಿಬಂದ ಸಚಿವರನ್ನೇ ಸಚಿವ ಸ್ಥಾನದಿಂದ ಕೈಬಿಡಲಿಲ್ಲ. ಆದರೆ, ಶ್ರೀನಿವಾಸ ಪ್ರಸಾದ ಅವರನ್ನು ಕೈಬಿಟ್ಟರು ಎಂದರು.

ಶ್ರೀನಿವಾಸ ಪ್ರಸಾದ ಅವರು ಕಾಂಗ್ರೆಸ್‌ ಬಿಡುವ ವಿಚಾರವಿದ್ದು, ನಮ್ಮ ರಾಜ್ಯಾಧ್ಯಕ್ಷರು ಶ್ರೀನಿವಾಸ ಪ್ರಸಾದ ಅವರ ಜತೆ ಮಾತನಾಡಿದ್ದಾರೆ. ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.

ಬರ: ರಾಜ್ಯದಲ್ಲಿ ಬರದ ಛಾಯೇ ಇದ್ದು ಸರಕಾರ ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ರಾಜ್ಯದ ನೂರಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಆದರೆ, ಕೇಂದ್ರದ ಅನುದಾನಕ್ಕಾಗಿಯೇ ಕಾಯಬಾರದು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರಿಗೆ ಉದ್ಯೋಗವನ್ನೂ ನೀಡಬೇಕು. ಕೇಂದ್ರದ ಅನುದಾನವನ್ನು ರೈತರಿಗೆ ಮುಟ್ಟಿಸಬೇಕು ಎಂದು ಸಲಹೆ ನೀಡಿದರು.

Comments are closed.