ಆರೋಗ್ಯ

ಗ್ಯಾಸ್ಟ್ರಿಕ್‌ಸಮಸ್ಯೆಗೆ ಇಲ್ಲಿದೆ ಸುಲಭ ಉಪಾಯ

Pinterest LinkedIn Tumblr

gastrics

ಏನೇನೋ ತಿಂದು ಹೊಟ್ಟೆಯಲ್ಲಿ ಗ್ಯಾಸ್‌ತುಂಬಿ ಉಂಟಾಗುವ ಗ್ಯಾಸ್ಟ್ರಿಕ್‌ಸಮಸ್ಯೆ ಈಗ ಹೆಚ್ಚಿನ ಎಲ್ಲಾ ವ್ಯಕ್ತಿಗಳನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ತಿಂದದ್ದು ಸರಿಯಾಗಿ ಜೀರ್ಣವಾಗದೇ ಇರುವುದು ಗ್ಯಾಸ್ಟ್ರಿಕ್‌ಸಮಸ್ಯೆಗೆ ಕಾರಣವಾಗಿರಬಹುದು. ಗ್ಯಾಸ್ಟ್ರಿಕ್‌ಸಮಸ್ಯೆ ಪುರುಷರು ಮತ್ತು ಮಹಿಳೆಯರಲ್ಲೂ ಸಹ ಕಂಡುಬರುತ್ತದೆ.

ಈ ಗ್ಯಾಸ್ಟ್ರಿಕ್‌ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ…

* ಮಿತವಾಗಿ ಹಾಗೂ ನಿಯಮಿತ ಸಮಯದಲ್ಲಿ ಆಹಾರ ಸೇವಿಸಿ.

* ಹೊರಗೆ ತಿನ್ನುವಾಗ ಹಸಿ ಪದಾರ್ಥಗಳಾದ ಮಜ್ಜಿಗೆ, ಹೆಚ್ಚಿದ ತರಕಾರಿಗಳನ್ನು ಎಚ್ಚರಿಕೆಯಿಂದ ಸೇವಿಸಬೇಕು.

* ಊಟವಾದ ಕೂಡಲೇ ಬಗ್ಗುವುದು, ಭಾರ ಎತ್ತುವುದು, ಮಲಗುವುದು ಮಾಡಬಾರದು.

* ಖಾರ ಮಸಾಲೆ, ಮಾಂಸಾಹಾರ ಮಿತವಾಗಿ ಸೇವಿಸಿ.

* ಧೂಮಪಾನ, ಮದ್ಯಪಾನದಿಂದ ದೂರವಿರುವುದು ಉತ್ತಮ.

* ಆಹಾರ ಪಚನವಾಗದೇ ಹೊಟ್ಟೆಯುಬ್ಬರವಿದ್ದಲ್ಲಿ, ಜೀರಿಗೆ, ಒಣದ್ರಾಕ್ಷಿ, ಓಮದಕಾಳುಗಳನ್ನು ಜಜ್ಜಿ ಸೇವಿಸಬಹುದು.

* ಹೇರಳವಾಗಿ ಹುಳಿಯಿಲ್ಲದ ಮಜ್ಜಿಗೆ ಸೇವನೆ ಒಳ್ಳೆಯದು.

* ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯಿರಿ.

Comments are closed.