ಗಲ್ಫ್

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಒಮಾನ್ ಇದರ 20ನೇ ವಾರ್ಷಿಕ ಮಹಾಸಭೆ

Pinterest LinkedIn Tumblr

14625564_1233869540010675_309932770_o

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ 20ನೇ ವಾರ್ಷಿಕ ಮಹಾಸಭೆಯು ದಿನಾಂಕ 06-10-2016ರಂದು ಪಾರ್ಕ್ ವೇ ರೆಸ್ಟೋರೆಂಟ್ ‘ಮಸ್ಕತ್-ರೂವಿ’ಯಲ್ಲಿ ನಡೆಯಿತು.

14632687_1233870303343932_1401154805_o

14646684_1233870280010601_1211478151_o

 14689108_1233870283343934_1517384679_o

2016-2017ರನೂತನ ಅಧ್ಯಕ್ಷರಾಗಿ ಮೋನಬ್ಬ ಅಬ್ದುಲ್ ರಹಮಾನ್ ಉಚ್ಚಿಲ ಆಯ್ಕೆಯಾದರೆ,ಪ್ರಧಾನ ಕಾರ್ಯದರ್ಶಿಯಾಗಿ ಅನ್ಸಾರ್ ಕಾಟಿಪಳ್ಳ,ಗೌರವಾಧ್ಯಕ್ಷರಾಗಿ ರಫೀಕ್ ಪಡುಬಿದ್ರಿಯವರು ಮರು ಆಯ್ಕೆಯಾದರು.ಉಳಿದಂತೆ ಉಪಾದ್ಯಕ್ಷರಾಗಿ ಅಬ್ಬಾಸ್ ಉಚ್ಚಿಲ ಹಾಗೂ ಅಶ್ರಫ್ ಬಾವ,ಜೊತೆ ಕಾರ್ಯದರ್ಶಿಯಾಗಿ ಪರ್ವೇಝ್ ರಫೀಕ್ ಕಾಟಿಪಳ್ಳ ಹಾಗೂ ಅಲ್ತಾಫ್ ಬೋಳಾರ್,ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಹಾಲಿ ಅಧ್ಯಕ್ಷರಾದ ಮೊಹಿದಿನ್ ಪಡುಬಿದ್ರಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮಯ ಪರಿಪಾಲನೆ,ಹೊಂದಾಣಿಕೆ,ಒಗ್ಗಟ್ಟು ಮತ್ತು ಹುಮ್ಮನಸ್ಸಿನಿಂದ ಕೆಲಸಮಾಡಿದರೆ ಡಿ.ಕೆ.ಎಸ್.ಸಿ ಒಮಾನ್’ನಿಂದ ಇನ್ನಷ್ಟು ಕಾರ್ಯಕ್ರಮಗಳು ನಡೆದು ಮರ್ಕಝ್ ತಅಲೀಮ್ ಅಲ್ ಇಹ್ಸಾನ್’ನ ಏಳಿಗೆಯಲ್ಲಿ ಸಂಪೃರ್ಣವಾಗಿ ತೊಡಗಿಕೊಳ್ಳಲು ಸಾಧ್ಯವಾಗಬಹುದು, ಈ ನಿಟ್ಟಿನಲ್ಲಿ ಮುಂದೆ ಆಯ್ಕೆಯಾಗಿ ಬರುವವರಿಗೆ ಸದಸ್ಯರು,ಕಾರ್ಯಕಾರಿ ಸಮಿತಿಯವರು ತಮ್ಮ ಸಂಪೂರ್ಣ ಸಹಕಾರ,ಬೆಂಬಲ ನೀಡಬೇಕೆಂದು ವಿನಂತಿಸಿದರು.

ಕಾರ್ಯದರ್ಶಿ ಅನ್ಸಾರ್ ಕಾಟಿಪಳ್ಳ 2015-2016ರ ವರದಿ ಮತ್ತು ಲೆಕ್ಕಪತ್ರ ಮುಂಡಿಸಿದರು,ಸಭಾದ್ಯಕ್ಷರಾದ ಉಮರ್ ಸಖಾಫಿಯವರು ಅಂಗೀಕರಿಸಿ ದುಆ ನೆರವೇರಿಸಿದರು,ಇಬ್ರಾ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್,ನಿಝ್ವ ಬ್ರಾಂಚ್ ಅಧ್ಯಕ್ಷರಾದ ಕಾಸಿಂ ಹಾಜಿ ಅಳಕೆಮಜಲು,ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಮಾನ್ ಅಶ್ರಫ್ ಬಾವ ಕಿರಾಅತ್ ಪಠಿಸಿದರು,ಅಶ್ರಫ್ ಬಾವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ: ಅಬ್ದುಲ್ ಮುಬಾರಕ್ ಕಾರಾಜೆ

Comments are closed.