ಆರೋಗ್ಯ

ನವರಾತ್ರಿ ಉಪವಾಸಕ್ಕಾಗಿ ಆರ್ಯುವೇದ ಗುಣವಿರುವ ವಸ್ತುಗಳ ಬಳಕೆ.

Pinterest LinkedIn Tumblr

ಮಂಗಳೂರು: ದೇವರ ಮೇಲೆ ಇರುವ ಅತೀವ ಪ್ರೀತಿಯಿಂದ ಅನೇಕ ಮಂದಿಗಳು ನಾನಾ ರೀತಿಯಲ್ಲಿ ಉಪವಾಸ ಮಾಡುತ್ತಾರೆ. ಅದೇ ರೀತಿ ನವರಾತ್ರಿ ಸಮಯದಲ್ಲಿ ಉಪವಾಸ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ನಮ್ಮಲ್ಲಿದೆ.ಉಪವಾಸ ಮಾಡುವವರಲ್ಲಿ ಕೆಲವರು ಬರೀ ಒಂದು ಹೊತ್ತು ಮಾತ್ರ ಆಹಾರವನ್ನು ತೆಗೆದುಕೊಳ್ಳುತ್ತಾರೆ, ಅದಕ್ಕಾಗಿ ಈ ರೀತಿಯ ಉಪವಾಸ ಮಾಡುವಾಗ ಕೆಲವೊಂದು ಆರ್ಯುವೇದ ಗುಣವಿರುವ ಯಾವ ವಸ್ತುಗಳನ್ನು ಬಳಸಿದರೆ ಮತ್ತಷ್ಟು ಆರೋಗ್ಯವನ್ನು ಪಡೆಯಬಹುದು.

Lime-Juice

ನಿಂಬೆ ಹಣ್ಣು: 
ಉಪವಾಸ ಮಾಡುವವರು ಆಹಾರವನ್ನು ತೆಗೆದುಕೊಳ್ಳುವಾಗ ಲೋಟ ನಿಂಬೆ ಶರಬತ್ತು ಕುಡಿಯಿರಿ. ಇದು ದೇಹದಲ್ಲಿ ಉತ್ಸಾಹವನ್ನು ತುಂಬಿ ಸುಸ್ತನ್ನು ಹೋಗಲಾಡಿಸುತ್ತದೆ.

ghee

ತುಪ್ಪ:
ವ್ರತದ ಅಡುಗೆಗಳನ್ನು ತಯಾರಿಸುವಾಗ ತುಪ್ಪವನ್ನು ಹಾಕಿ ತಯಾರಿಸಲು ಮರೆಯಬೇಡಿ.ಇದು ನರಗಳಿಗೆ ಶಕ್ತಿಯನ್ನು ತುಂಬುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಅಂಜೂರ:
ಉಪವಾಸ ಮಾಡುವವರು ತಿನ್ನಬೇಕಾದ ಮತ್ತೊಂದು ಬೆಸ್ಟ್ ಹಣ್ಣೆಂದರೆ ಅಂಜೂರ. ಇದರಲ್ಲಿ ಅಧಿಕ ಪೋಷಕಾಂಶವಿದ್ದು, 2 ಹೊತ್ತು ಊಟ ಮಾಡದೆ ಬರೀ ಒಂದು ಹೊತ್ತು ಊಟ ಮಾಡಿದರೂ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಅಂಜೂರದಿಂದ ಪಡೆಯಬಹುದು.

almonds

ಬಾದಾಮಿ:
ಆಹಾರವನ್ನು ತೆಗೆದುಕೊಳ್ಳುವಾಗ 2-3 ಬಾದಾಮಿಯನ್ನು ಬಾಯಿಗೆ ಹಾಕಿಕೊಳ್ಳಿ. ಇದರಲ್ಲಿರುವ ಪೋಷಕಾಂಶ ನಿಮ್ಮ ಸುಸ್ತನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

dates-new

ಖರ್ಜೂರ:
ಬರೀ ಒಂದು ಆಹಾರ ತೆಗೆದುಕೊಳ್ಳುವಾಗ ಅದರ ಜೊತೆ ಖರ್ಜೂರವನ್ನು ತಿನ್ನಲು ಮರೆಯದಿರಿ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದು ಮಾತ್ರವಲ್ಲ, ಹೊಟ್ಟೆ ಹಸಿವನ್ನು ನಿಯಂತ್ರಿಸಿ, ನೀವು ಮಾಡುವ ಕೆಲಸದಲ್ಲಿ ಕಾರ್ಯಮಗ್ನರಾಗುವಂತೆ ಮಾಡುತ್ತದೆ.

cumin.600

ಜೀರಿಗೆ:
ಹೊಟ್ಟೆ ಉರಿ, ಗ್ಯಾಸ್ ಮುಂತಾದ ಸಮಸ್ಯೆ ಕಾಣಿಸದಿರಲು ಒಂದು ಲೋಟ ಜೀರಿಗೆ ನೀರು ಸಹಾಯ ಮಾಡುವುದು.

lassy

ಲಸ್ಸಿ:
ಲಸ್ಸಿ ಶಕ್ತಿವರ್ಧಕ ಪಾನೀಯವಾಗಿದೆ. ಅಲ್ಲದೆ ಇದರಲ್ಲಿ ಸ್ವಲ್ಪ ಚಕ್ಕೆ ಹಾಕಿ ಕುಡಿದರೆ ಕಾಯಿಲೆಗಳು ಬರದಂತೆ ತಡೆಯಬಹುದು.

ಸೀಸನ್ ಫುಡ್ಸ್:
ಹಣ್ಣುಗಳನ್ನು ತಿನ್ನುವಾಗ ಸೀಸನ್ ಫುಡ್ ತಿನ್ನಿ, ಆಹಾರ ತಿಂದ ಬಳಿಕ ಒಂದು ಸೇಬು ತಿನ್ನುವುದು ಒಳ್ಳೆಯದು.

Ginger

ಶುಂಠಿ;
ಈರುಳ್ಳಿ, ಬೆಳ್ಳುಳ್ಳಿ ವ್ರತ ಅಡುಗೆಗಳಲ್ಲಿ ಬಳಸುವುದಿಲ್ಲ, ಆದರೆ ಶುಂಠಿಯನ್ನು ಬಳಸಬಹುದು, ಶುಂಠಿ ಬಳಸಿ, ಅದರ ಗುಣ ಪಡೆಯಿರಿ.

green_gram_pic

ಮೊಳಕೆ ಬರಿಸಿದ ಹೆಸರು ಕಾಳು:
ಮೊಳಕೆ ಬರಿಸಿದ ಹೆಸರುಕಾಳು ಹೊಟ್ಟೆಯನ್ನು ತುಂಬಿರುವಂತೆ ಮಾಡುವುದಲ್ಲದೆ, ಬೇಗನೆ ಸುಸ್ತಾಗುವುದಿಲ್ಲ, ದಿನಾಪೂರ್ತಿ ಲವಲವಿಕೆಯಿಂದ ಇರುವಂತೆ ಮಾಡುವುದು.

Comments are closed.