ಕರಾವಳಿ

ಮೋದಿ ವಿರುದ್ಧ ರಾಹುಲ್ ನೀಡಿರುವ ಹೇಳಿಕೆ ಖಂಡಿಸಿ ಯುವಮೋರ್ಚಾ ಪ್ರತಿಭಟನೆ

Pinterest LinkedIn Tumblr

bjp_protest_1

ಮಂಗಳೂರು,ಅಕ್ಟೊಬರ್.07: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ತದ ದಲ್ಲಾಳಿ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ರಾಹುಲ್ ಗಾಂಧಿ ವಿರುದ್ಧ ದ.ಕ.ಜಿಲ್ಲಾ ಭಾರತೀಯ ಜನತಾ ಪಾರ್ಟಿ,ಯುವ ಮೋರ್ಚಾ ವತಿಯಿಂದ ಶುಕ್ರವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು,

ಪ್ರತಿಭಟನಕಾರರನ್ನುದ್ದೇಶಿಸಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಅವರು ಮಾತನಾಡಿ, ಜಗತ್ತಿನ ಎಲ್ಲಾ ದೇಶಗಳು ಇತ್ತೀಚೆಗೆ ನಡೆದಂತಹ ಸರ್ಜಿಕಲ್ ಸ್ಟ್ರೈಕ್ ಘಟನೆಯ ಬಗ್ಗೆ ಸಹಮತ ವ್ಯಕ್ತಪಡಿಸಿದೆ. ಅಮೇರಿಕಾ, ರಷ್ಯಾ, ಚೀನಾದಂತಹ ದೇಶಗಳೇ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದೆ. ಹೀಗಿರುವಾಗ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ತದ ದಲ್ಲಾಳಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೀಚ ಹೇಳಿಕೆ ಕೊಡುವ ಮೂಲಕ ಇಡೀ ದೇಶದ ಸೈನಿಕರಿಗೆ ಮತ್ತು ದೇಶದ ಜನತೆಗೆ ಅಪಮಾನ ಮಾಡಿದ್ದಾರೆ. ಸೈನಿಕರ ನೈತಿಕ ಸ್ಥೈರ್ಯ ಕುಂದಿಸುವ ಈ ಹೇಳಿಕೆಯು ಅತೀ ಖಂಡನಾರ್ಹವಾಗಿದೆ ಎಂದು ಹೇಳಿದರು.

bjp_protest_2 bjp_protest_3 bjp_protest_4 bjp_protest_5 bjp_protest_6 bjp_protest_7

ಸೈನಿಕರಿಗೆ ಮತ್ತು ದೇಶದ ಜನತೆಗೆ ಅಪಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ರಾಹುಲ್‌ಗಾಂಧಿಯವರು ದೇಶದ ಸೈನಿಕರ ಮತ್ತು ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕೆಂದು ಎಂದು ಹರೀಶ್ ಪೂಂಜಾ ಆಗ್ರಹಿಸಿದರು.

ರಾಹುಲ್ ಪ್ರತಿಕೃತಿ ದಹನ :
ಪ್ರತಿಭಟನೆ ಸಂದರ್ಭ ರಾಹುಲ್‌ಗಾಂಧಿ ವಿರುದ್ಧ ಘೋಷಣೆ ಕೂಗಿದ ಯುವ ಮೋರ್ಚಾ ಕಾರ್ಯಕರ್ತರು ಬಳಿಕ ರಾಹುಲ್ ಗಾಂಧಿಯ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರೀಜೇಶ್ ಚೌಟ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ರಾಜ್ಯ ಉಪಾಧ್ಯಕ್ಷರಾದ ಶಿವರಂಜನ್ ಪುತ್ತೂರು, ರಾಜ್ಯ ಕಾರ್ಯಕಾರಿಣಿ ಸದಸ್ಯರುಗಳಾದ ಪೃಥ್ವಿರಾಜ್ ಬಂಗೇರ, ಮಹೇಶ್, ಜಿಲ್ಲಾ ಯುವಮೋರ್ಚಾ ಪಧಾಧಿಕಾರಿಗಳಾದ ಸಂದೀಪ್ ಶೆಟ್ಟಿ ಮರವೂರು, ಯಶವಂತ ಬೆಳ್ತಾಲು, ಕಿಶೋರ್ ಬಾಬು, ಸುದರ್ಶನ್, ಮಹೇಶ್ ಜೆಂಕ್ಯಾರು, ಶಶಾಂಕ್ ಆಚಾರ್, ಸೂರಜ್ ,ಮಂಡಲ ಅಧ್ಯಕ್ಷರುಗಳಾದ ಸಂದೀಪ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ಸಂಪತ್ತ್, ಯಶ್‌ಪಾಲ್ ಸುವರ್ಣ, ಸುಜಿತ್ ಮಾಡುರು, ಸುನೀಲ್ ಮತ್ತಿತರರು ಪಾಲ್ಗೊಂಡಿದ್ದರು.

Comments are closed.