ಆರೋಗ್ಯ

ಬಿ.ಪಿ.ಅಚ್.ನಿಂದ ಮನುಷ್ಯನ ಸಾಮಾಜಿಕ, ವೈಯಕ್ತಿಕ, ಲೈಂಗಿಕ ಬದುಕಿನ ಮೇಲೆ ನಕಾರಾತ್ಮಕ ಪ್ರಭಾವ

Pinterest LinkedIn Tumblr

bph_disease_graphic_

ಮಂಗಳೂರು: ಪ್ರಾಸ್ಟೇಟ್ ವಾಲ್‌ನಲ್ ಗಾತ್ರದ ಒಂದು ಸಣ್ಣ ಗ್ರಂಥಿ ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯ ಒಂದು ಭಾಗ.ಇದು ಬ್ಲಾಡರ್‌ನಿಂದ ಹೊರಗಡೆಗೆ ಮೂತ್ರವನ್ನು ಒಯ್ಯುವ ಮೂತ್ರ ವಿಸರ್ಜನೆ ನಾಳವನ್ನು ಸುತ್ತುವರಿದಿರುತ್ತದೆ. ಪ್ರಾಸ್ಟೇಟ್ ಗ್ರಂಥಿ ಹಿಗ್ಗಿದಂತೆ ಮೂತ್ರನಾಳ ಒತ್ತರಿಸುತ್ತದೆ. ಹೆಚ್ಚು ಕಡಿಮೆ ಒಂದು ಸ್ಟ್ರಾವನ್ನು ಅಮುಕಿದಂತೆ.ಇದರಿಂದ ಮೂತ್ರ ಸಂಬಂಧ ಅಸಹಜ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು (ಬಿಸ್ಟೆನ್ ಪ್ರಾಸ್ಟೇಟಿಕ್ ಹೈಪರ್ ಪ್ಲೇಸಿಯಾ) ಬಿ.ಪಿ.ಎಚ್ ಎಂದು ಕರೆಯಲಾಗುತ್ತದೆ.

ಬಿಪಿಎಚ್ ಪ್ರಕರಣಗಳು ವಯಸ್ಸಾದಂತೆ ಹೆಚ್ಚುತ್ತವೆ. 60 ವಯಸ್ಸಿನ ಪುರುಷರಲ್ಲಿ ಶೇಕಡ 50ಕ್ಕೂ ಹೆಚ್ಚು ಮಂದಿ, 85 ವರ್ಷ ವಯಸ್ಸಾದವರಲ್ಲಿ ಶೇ. 90 ರಷ್ಟು ಪುರುಷರು ಈ ಬಿಪಿಎಚ್‌ನಿಂದ ಬಳಲುತ್ತಿರುವುದಾಗಿ ಅಧ್ಯಯನ ವರದಿಗಳು ಹೇಳಿವೆ.

bph_disees_1

ಬಿಪಿಎಚ್‌ನ ರೋಗಲಕ್ಷಣಗಳು ಎಂದರೆ, ವಾಡಿಕೆಗಿಂತ ಹೆಚ್ಚು ಸಲ ಮೂತ್ರ ವಿಸರ್ಜನೆ, ರಾತ್ರಿ ವೇಳೆ ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗುವುದು, ಮೂತ್ರ ವಿಸರ್ಜನೆ ತಡೆಯಲು ಸಾಧ್ಯವಾಗದೆ ತಕ್ಷಣವೇ ಆಗಬೇಕು ಎಂದು ಅನಿಸುವುದು, ಅನಿಯಂತ್ರಿತವಾಗಿ ಮೂತ್ರ ವಿಸರ್ಜನೆ, ಮೂತ್ರ ಸಣ್ಣದಾಗಿ ಹೋಗುವುದು, ಮೂತ್ರಧಾರೆ ಕವಲಾಗಿರುವುದು ಅಥವಾ ಸಿಡಿಯುವುದು, ಮೂತ್ರ ನಿಂತು ಹೋಗುವುದು, ಪ್ರಯಾಸದಿಂದ ಮೂತ್ರ ವಿಸರ್ಜನೆ ಇವೆಲ್ಲಾ ಬಿಪಿಎಚ್‌ನ ಲಕ್ಷಣಗಳು. ಈ ಲಕ್ಷಣಗಳು ಬಹಳ ಕಳವಳಕಾರಿ. ಇದು ಸಾಮಾಜಿಕ, ವೈಯಕ್ತಿಕ, ಲೈಂಗಿಕ ಬದುಕಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.

ಯಾವುದೇ ವ್ಯಕ್ತಿಗೆ ಈ ಲಕ್ಷಣ ಇದ್ದಾಗ ಅದು ಬಿಪಿಎಚ್ ಅಥವಾ ಪ್ರಾಸ್ಟೇಟ್ ಕ್ಯಾನ್ಸರ್ ಆಗಿರಬಹುದು. ಹಾಗಾಗಿ ವೈದ್ಯಕೀಯ ಇತಿಹಾಸ, ಲಕ್ಷಣಗಳು ಮತ್ತು ಹಲವು ಮಾದರಿ ಪರೀಕ್ಷೆಗಳ ಮೂಲಕ ಬಿಪಿಎಚ್ ಪತ್ತೆ ಮಾಡಬಹುದು. ಸರಳವಾದ ರಕ್ತ ಪರೀಕ್ಷೆ ಮೂಲಕ ಬಿಪಿಎಚ್ ಇದೆಯೋ ಅಥವಾ ಪ್ರಾಸ್ಟೇಟ್ ಕ್ಯಾನ್ಸರ್ ಇದೆಯೋ ಎಂಬುದನ್ನು ಪತ್ತೆ ಮಾಡಬಹುದು ಎನ್ನುತ್ತಾರೆ ವೈದರು.

ಯೂರಾಲಜಿ ವೈದ್ಯರ ಪ್ರಕಾರ ಸರಳವಾದ ಜೀವನಶೈಲಿ ಮಾರ್ಪಾಡುಗಳಿಂದ ಬಿಪಿಎಚ್ ರೋಗಿಗೆ ಅನುಕೂಲವಾಗುತ್ತದೆ.ಇದಕ್ಕೆ ಚಿಕಿತ್ಸೆ ಮಾಡಿಸದಿದ್ದರೆ, ಮುಂದೆ ಮೂತ್ರನಾಳ ಸೋಂಕುಗಳು, ಮೂತ್ರಪಿಂಡ ಹರಳುಗಳು, ಇತ್ಯಾದಿ ಸಮಸ್ಯೆಗಳು ಆಗಬಹುದು. ಕೊನೆಗೆ ಮೂತ್ರವೇ ಹೊರಬಾರದೆ ಹೋಗಬಹುದು. ಹಾಗಾಗಿ ಇವುಗಳನ್ನು ಅಲಕ್ಷ್ಯಿಸಬಾರದು ಎಂದು ಅವರು ಹೇಳುತ್ತಾರೆ.

bph_disees_2

ಪ್ರಾಸ್ಟೇಟ್ ತೊಂದರೆ, ಕ್ಯಾನ್ಸರ್ ಬಗ್ಗೆ ಮಹಿಳೆಯರ ಸ್ತನ ಕ್ಯಾನ್ಸರ್‌ನಂತೆ ಜಾಗೃತಿ ಕಾರ್ಯಕ್ರಮಗಳು ಆಗಬೇಕು. ಬೇಗ ಪತ್ತೆಯಾದರೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದರೆ, ಈ ಪ್ರಾಸ್ಟೇಟ್ ಕ್ಯಾನ್ಸರ್ ಸಂಪೂರ್ಣ ಗುಣಮುಖವಾಗುತ್ತದೆ ಎಂದು ಡಾ. ಕೇಶವ ಮೂರ್ತಿ ಹೇಳುತ್ತಾರೆ.

ಬಿಪಿಎಚ್ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್‌ಗಳಿಗೆ ಉತ್ತಮ ಚಿಕಿತ್ಸೆಗಳು ಲಭ್ಯವಿದ್ದು, ರೋಗದ ಹಂತದ ಮೇಲೆ ಚಿಕಿತ್ಸೆ ವಿಧಾನವನ್ನು ನಿರ್ಧರಿಸಲಾಗುತ್ತದೆ. ಹಾಗಾಗಿ ಮೂತ್ರ ತೊಂದರೆಗಳನ್ನು ನಿರ್ಲಕ್ಷ್ಯ ಮಾಡದೆ, ವೈದ್ಯರ ಸಲಹೆ ಪಡೆಯುವುದು ಸೂಕ್ತ.

Comments are closed.