ಉಡುಪಿ: ಮೇಲಾಧಿಕಾರಿಗಳ ಕಿರುಕುಳ ಎಂದು ಆರೋಪಿಸಿ ರಾಜೀನಾಮೆ ನೀಡಿರುವ ಕೋಟಾ ಎಸೈ ಕಬ್ಬಾಳರಾಜ್ ರಾಜೀನಾಮೆ ಪ್ರಕರಣ ಸುಖಾಂತ್ಯಗೊಂಡಿದೆ.

ರಾಜೀನಾಮೆ ನೀಡಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವಾಸಿಸುತ್ತಿರುವ ಪತ್ನಿಯ ಮನೆಗೆ ತೆರಳಿದ್ದ ಕಬ್ಬಾಳರಾಜ್ ಅವರನ್ನು ಹಿರಿಯ ಅಧಿಕಾರಿಗಳು ಸಂಧಾನ ಮಾತುಕತೆಯ ಮೂಲಕ ಮನ ಒಲಿಸಿದ್ದಾರೆ. ಕೆಲಸಕ್ಕೆ ಹಾಜರಾಗುವ ಬಗ್ಗೆ ಸಹಮತ ವ್ಯಕ್ತಪಡಿಸಿದ್ದ ಕಬ್ಬಾಳರಾಜ್ ಇಂದು ಕೋಟ ಠಾಣೆಗೆ ಬಂದು ಕರ್ತವ್ಯಕ್ಕೆ ಹಾಜಾರಾಗಿದ್ದಾರೆ. ವೈಯಕ್ತಿಕ ಕಾರಣ ಎಂದು ರಾಜೀನಾಮೆ ನೀಡಿರುವ ಕಬ್ಬಲ್ ರಾಜ್ ಮತೆ ಕತ್ಯವ್ಯಕ್ಕೆ ಹಾಜರಾಗಿರುವುದನ್ನ ಉಡುಪಿ ಜಿಲ್ಲಾ ಎಸ್.ಪಿ. ಕೆ.ಟಿ ಬಾಲಕೃಷ್ಣ ದೃಢಪಡಿಸಿದ್ದಾರೆ.
ಎಸ್.ಐ. ಕಬ್ಬಾಳರಾಜ್ ಅವರಿಗೆ ಕೌನ್ಸಿಲಿಂಗ್ ಮಾಡಲಾಗಿದ್ದು ಯಾವುದೇ ರೀತಿಯ ಸಮಸ್ಯೆಗಳು ಬಂದರೆ ನೇರವಾಗಿ ಬಂದು ಹೇಳಿಕೊಳ್ಳುವಂತೆ ತಿಳಿಹೇಳಲಾಗಿದೆ ಎಂದು ಇದೇ ಸಂದರ್ಬದಲ್ಲಿ ಎಸ್.ಪಿ ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿರಿ:
ರಾಜಿನಾಮೆ ಪತ್ರ ಬರೆದಿಟ್ಟು ತೆರಳಿದ ಕೋಟ ಎಸ್.ಐ. ಕಬ್ಬಳರಾಜ್? | ಮೊಬೈಲ್ ಸ್ವಿಚ್ಡ್ ಆಫ್…
ನಾಳೆ ವಾಪಾಸ್ ಬರುತ್ತಾರಂತೆ ಕೋಟ ಎಸ್.ಐ. ಕಬ್ಬಾಳರಾಜ್?
Comments are closed.