ಆರೋಗ್ಯ

ಶೌಚಾಲಯದ ಸ್ವಚ್ಛತೆಯ ಬಗ್ಗೆ ಗಮನಹರಿಸಿ.

Pinterest LinkedIn Tumblr

toilet

ಸ್ವಚ್ಛತೆಯನ್ನು ದೇಶದ ಜನರೆಲ್ಲರೂ ಅಳವಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಮ್ಮ ದೇಶವು ಸ್ವಚ್ಛ ಭಾರತ ಆಗಿ ಹೊರಹೊಮ್ಮಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಸ್ಚಚ್ಛತೆ ಪ್ರತಿಯೊಂದು ಘಟ್ಟದಲ್ಲೂ ಬೇಕೇಬೇಕು. ಆದರೆ ಶೌಚಾಲಯದಲ್ಲಿ ಎಷ್ಟೇ ಸ್ವಚ್ಛತೆಯನ್ನು ಕಾಪಾಡಿಕೊಂಡರೂ ಸಾಕಾಗುವುದಿಲ್ಲ.

ಶೌಚಾಲಯದಲ್ಲಿ ಕುಳಿತುಕೊಳ್ಳುವ ಸೀಟ್‌ನಲ್ಲಿ ಅತೀ ಹೆಚ್ಚಿನ ಬ್ಯಾಕ್ಟೀರಿಯಾಗಳು ಇರುತ್ತದೆಯಂತೆ. ಅದರಲ್ಲೂ ಸಾರ್ವಜನಿಕ ಶೌಚಾಲಯಗಳಲ್ಲಿ ಇದು ದ್ವಿಗುಣವಾಗಿದೆ. ಶೌಚಾಲಯದ ಸೀಟನ್ನು ಸ್ವಚ್ಛಗೊಳಿಸಬೇಕು ಎಂದು ಗಂಟೆಗಟ್ಟಲೆ ಪ್ರಯತ್ನಿಸಿದರೂ ಕೆಲವೊಮ್ಮೆ ಇದು ಸಾಧ್ಯವಾಗುವುದಿಲ್ಲ.

ಅದರಲ್ಲೂ ಅಮೆರಿಕಾದಲ್ಲಿ ಮೂರನೇ ಒಂದು ಭಾಗದಷ್ಟು ಜನರು ಟಾಯ್ಲೆಟ್ ಸೀಟ್ ಮೇಲೆ ಕುಳಿತಿರುವಾಗಲೇ ಫ್ಲಶ್ ಮಾಡುತ್ತಾರಂತೆ. ಇದು ತುಂಬಾ ಕೆಟ್ಟ ಅಭ್ಯಾಸವಲ್ಲವೇ? ಶೌಚಾಲಯದ ಬಗ್ಗೆ ತಿಳಿಯದೆ ಇರುವ ಕೆಲವೊಂದು ವಿಷಯಗಳ ಬಗ್ಗೆ ನಾವು ನಿಮಗಿಂದು ಹೇಳಲಿದ್ದೇವೆ. ಇದನ್ನು ನೋಡಿಕೊಂಡು ಮುಂದೆ ಶೌಚಾಲಯ ಬಳಸುವಾಗ ಎಚ್ಚರಿಕೆ ವಹಿಸಿ.

ಮೊಬೈಲ್ ನಲ್ಲಿ ಶೌಚಾಲಯಕ್ಕಿಂತ 18 ಪಟ್ಟು ಹೆಚ್ಚಿನ ಬ್ಯಾಕ್ಟೀರಿಯಾಗಳಿವೆ. ಇನ್ನೊಮ್ಮೆ ಇದು ಕಿವಿಗೆ ಇಟ್ಟುಕೊಳ್ಳುವಾಗ ಎಚ್ಚರಿಕೆ ವಹಿಸಿ. ಒಂದು ಅಧ್ಯಯನದ ಪ್ರಕಾರ ಜೀವಮಾನದ ಮೂರು ತಿಂಗಳನ್ನು ವ್ಯಕ್ತಿಯೊಬ್ಬ ಶೌಚಾಲಯದಲ್ಲೇ ಕಳೆಯುತ್ತಾನೆ. ಅದರಲ್ಲಿ 1.5 ತಿಂಗಳು ಶೌಚಾಲಯದಲ್ಲಿ ಇರುವಾಗಲೇ ಮೊಬೈಲ್ ಬಳಕೆ ಮಾಡುತ್ತಿರುತ್ತಾನಂತೆ. ರೋಗರುಜಿನಗಳು ಹರಡಲು ಶೌಚಾಲಯಗಳೇ ಮೂಲ ಕಾರಣ!

ಕಚೇರಿಯಲ್ಲಿ ನಿಮಗೆ ಶೌಚಾಲಯಕ್ಕೆ ಹೋಗಬೇಕು ಎಂದು ಅನಿಸಿದರೆ ಖಂಡಿತವಾಗಿಯೂ ನಿಮ್ಮ ಕೈಗಳನ್ನು ಮುಖದ ಮೇಲಿಡಬೇಡಿ. ಯಾಕೆಂದರೆ ಕಂಪ್ಯೂಟರ್ ಕೀ ಬೋರ್ಡ್ ನಲ್ಲಿ ಟಾಯ್ಲೆಟ್ ಸೀಟ್ ನಲ್ಲಿರುವ 200 ಪಟ್ಟು ಬ್ಯಾಕ್ಟೀರಿಯಾಗಳಿರುತ್ತದೆ. ನಿಮ್ಮ ಮೊಬೈಲ್‌ನಲ್ಲಿ ಹೆಚ್ಚು ಅನುಕೂಲಗಳಿದ್ದರೆ ಆಗ ಶೌಚಾಲಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ ಎಂದು ಅಧ್ಯಯನಗಳು ಹೇಳಿವೆ.

ಊಟ ರುಚಿಯಾಗಿಲ್ಲವೆಂದರೆ ತೈವಾನ್‌ನಲ್ಲಿ ಅದನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡುತ್ತಾರೆ. ಇದನ್ನು ಓದಿ ಅಚ್ಚರಿಯಾಯಿತೇ? ತೈವಾನ್‌ನಲ್ಲಿರುವ ರೆಸ್ಟೋರೆಂಟ್ ಒಂದನ್ನು ಟಾಯ್ಲೆಟ್ ರೀತಿಯಲ್ಲೇ ಮಾಡಲಾಗಿದೆ. ಇಲ್ಲಿ ಕುಳಿತುಕೊಳ್ಳುವ ಟೇಬಲ್ ಕೂಡ ಟಾಯ್ಲೆಟ್ ಮಾದರಿಯಲ್ಲಿದೆ. ಇಲ್ಲಿ ನಿಮ್ಮ ಟಾಯ್ಲೆಟ್‍‌ನ ಹುಟ್ಟುಹಬ್ಬವನ್ನು ಆಚರಿಸಬಹುದು. ಪ್ರತೀ ವರ್ಷ ನವಂಬರ್ 19ರಂದು ವಿಶ್ವ ಟಾಯ್ಲೆಟ್ ದಿನ ಆಚರಿಸಲಾಗುತ್ತದೆ.

ಇನ್ನೊಂದು ವಿಷಯವನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದಿನ ಸಲ ನೀವು ಟಾಯ್ಲೆಟ್‌ನಲ್ಲಿರುವಾಗ ಟಾಯ್ಲೆಟ್ ಸೀಟ್ ಮೇಲೆ ಮೂತ್ರ ಬಿದ್ದರೆ ಆಗ ಅದೃಷ್ಟವಂತರೆಂದುಕೊಳ್ಳಿ. ಯಾಕೆಂದರೆ ಟಾಯ್ಲೆಟ್ ಸೀಟ್ ಮೇಲೆ ಬಿದ್ದ ಮೂತ್ರ ತೇವಾಂಶವನ್ನು ಹೀರಿಕೊಳ್ಳುತ್ತದೆ.

Comments are closed.