ಕರಾವಳಿ

`ಗೋಲ್‌ಮಾಲ್’ ತುಳು ಚಲನಚಿತ್ರ ತೆರೆಗೆ : 14 ಥಿಯೇಟರ್‌ಗಳಲ್ಲಿ ಬಿಡುಗಡೆ

Pinterest LinkedIn Tumblr

ಮಂಗಳೂರು : ಶ್ರೀ ಮಹಾಕಾಳಿ ಮಹಾಮಂತ್ರ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದ ‘ಗೋಲ್‌ಮಾಲ್’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಜ್ಯೋತಿ ಚಲನ ಚಿತ್ರಮಂದಿರದಲ್ಲಿ ನಡೆಯಿತು.

ಸಮಾರಂಭವನ್ನು ಕಟಪಾಡಿ ಮಟ್ಟು ಶ್ರೀ ಮಹಾಕಾಳಿ ಮಂತ್ರ ದೇವತಾ ಸನ್ನಿಧಿಯ ಧರ್ಮದರ್ಶಿ ಸುಧರ್ಮ ಶ್ರೀಯಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಸಿನಿಮಾಗಳ ಮೂಲಕ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ಬಿಂಬಿಸುವ ಕೆಲಸ ಕಾರ್ಯಗಳು ನಡೆಯುವಂತಾಗಬೇಕು. ತುಳುವಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶಭರಿತ ಸಿನಿಮಾಗಳು ನಿರ್ಮಾಣವಾಗಲಿ ಆ ಮೂಲಕ ಭಾಷೆಯು ಬೆಳೆಯುವಂತಾಗಲಿ ಎಂದವರು ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ತುಳು ಚಲನ ಚಿತ್ರ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್‌ಬೈಲ್, ದೇವದಾಸ್ ಕಾಪಿಕಾಡ್, ನಿರ್ಮಾಪಕರಾದ ಕಿಶೋರ್ ಡಿ. ಶೆಟ್ಟಿ, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ವಿಜಯ ಕುಮಾರ್ ಕಾರ್ಕಳ, ಪ್ರಕಾಶ್ ಪಾಂಡೇಶ್ವರ್, ಆರ್. ಧನರಾಜ್, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಡಾ. ಸದಾನಂದ ಪೆರ್ಲ, ವಿ.ಜಿ ಪಾಲ್, ಗಂಗಾಧರ ಶೆಟ್ಟಿ ಅಳಕೆ, ಸುಧಾಕರ ಕುದ್ರೋಳಿ, ಚೇತನ್ ಮುಂಡಾಡಿ, ಮೋಹನ್ ಕೊಪ್ಪಲ, ಪ್ರೇಮ್ ಶೆಟ್ಟಿ ಸುರತ್ಕಲ್, ಗೋಲ್‌ಮಾಲ್ ಚಲನ ಚಿತ್ರದ ನಿರ್ಮಾಪಕರಾದ ಮಂಜುನಾಥ ನಾಯಕ್, ಅಕ್ಷಯ್ ಪ್ರಭು, ನಿರ್ದೇಶಕ ರಮಾನಂದ ನಾಯಕ್, ನಟ ಪೃಥ್ವಿ ಅಂಬರ್, ಶ್ರೇಯಾ ಅಂಚನ್, ನಿರೀಕ್ಷಾ ಶೆಟ್ಟಿ, ಅರವಿಂದ ಬೋಳಾರ್, ಸುನಿಲ್ ನೆಲ್ಲಿಗುಡ್ಡೆ, ಭೋಜರಾಜ್ ವಾಮಂಜೂರು, ಸುನಾದ್ ಗೌತಮ್, ಸಂದೀಪ್ ಶೆಟ್ಟಿ ಮಾಣಿ ಬೆಟ್ಟು, ರೂಪೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ಗೋಲ್‌ಮಾಲ್ ತುಳು ಚಲನಚಿತ್ರ ಮಂಗಳೂರಿನಲ್ಲಿ ಜ್ಯೋತಿ, ಪಿವಿ‌ಆರ್ , ಬಿಗ್‌ಸಿನಿಮಾಸ್, ಸಿನಿಪೊಲೀಸ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಐನಾಕ್ಸ್, ಬಿಗ್ ಸಿನಿಮಾಸ್, ಸುರತ್ಕಲ್‌ನಲ್ಲಿ ನಟರಾಜ್, ಮೂಡುಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ , ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡಿದೆ.

ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸುನಿಲ್ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ, ಸತೀಶ್ ಬಂದಲೆ, ಪೃಥ್ವಿ ಅಂಬರ್, ಶ್ರೇಯಾ ಅಂಚನ್, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತುಳುವಿನಲ್ಲಿ ಅದ್ದೂರಿ ಬಜೆಟ್‌ನ ಸಿನಿಮಾ ಇದಾಗಿದ್ದು ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

Comments are closed.