UAE

ರಾಕ್ ಕರ್ನಾಟಕ ಸಂಘ ಯುಎಇ: ನ.21ಕ್ಕೆ ರಾಸ್ ಅಲ್ ಖೈಮಾದಲ್ಲಿ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ

Pinterest LinkedIn Tumblr

ಯುಎಇ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಸಂಯುಕ್ತ ಅರಬ್ ಸಂಸ್ಥಾನ) ರಾಸ್ ಅಲ್ ಖೈಮಾದಲ್ಲಿರುವ ರಾಕ್ ಕರ್ನಾಟಕ ಸಂಘ ಯುಎಇ (RAK Karnataka Sangha UAE) ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.

ಈ ಬಾರಿ ನ.21 ಶನಿವಾರ 4 ಗಂಟೆಗೆ ರಾಸ್ ಅಲ್ ಖೈಮಾ ಅಲ್ ನಖೀಲ್‌ನ ಇಂಡಿಯನ್ ಅಸೋಸಿಯೇಶನ್ ಹಾಲ್‌ನಲ್ಲಿ ಎಸ್.ಜಾನಕಿ‌ ಸ್ಮರಣೆಯಲ್ಲಿ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ ವಿಜೃಂಭಣೆಯಿಂದ ನಡೆಯಲಿದೆ.

ಈ ಸಮಾರಂಭದಲ್ಲಿ ‘ರಾಷ್ಟ್ರಕವಿ ಕುವೆಂಪು ರತ್ನ ಪ್ರಶಸ್ತಿ’-2026ನ್ನು ತುಂಬೆ ಗ್ರೂಫ್ ಆಫ್ ಯುಎಇ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಅವರಿಗೆ ಪ್ರದಾನಿಸಲಾಗುತ್ತದೆ. ರಾಕ್ ಕರ್ನಾಟಕ ಸಂಘ ಗಲ್ಫ್ ಸಾಧಕರು ಅವಾರ್ಡ್‌-2026ನ್ನು ಯುಎಇ ಸಮಾಜಸೇವಕಿ ಛಾಯಾದೇವಿ ಕೃಷ್ಣಮೂರ್ತಿ, ರಾಕ್ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ್ ರಂಗಪ್ಪ ಅವರಿಗೆ ಪ್ರದಾನಿಸಲಾಗುತ್ತದೆ.

ಯುಎಇ ಖ್ಯಾತ ಉದ್ಯಮಿ ಡಾ. ರೊನಾಲ್ಡ್ ಕೊಲೆಸೊ, 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ತುಂಬೆ ಮೊಯಿದ್ದಿನ್, ರಾಸ್ ಅಲ್ ಖೈಮಾ ಇಂಡಿಯನ್ ಸ್ಕೂಲ್ ಅಧ್ಯಕ್ಷರು, ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಎಸ್.ಎ. ಸಲೀಂ, ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ಟ್ರೇಡಿಂಗ್ ಎಲ್.ಎಲ್‌.ಸಿ. ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್, ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕರು, ಯುಎಇ ಬಂಟ್ಸ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕನ್ನಡಿಗರ ಕೂಟ ದುಬೈನ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ., ಕರ್ನಾಟಕ ಸಂಘ ಶಾರ್ಝಾದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ರಾಕ್ ಕರ್ನಾಟಕ ಸಂಘ ಯುಎಇ ಪ್ರಕಟಣೆ ತಿಳಿಸಿದೆ.

Comments are closed.