ಜಾನಪದ ಕಲೆಗಳ ಬಗ್ಗೆ ಅರಿವು ನಮ್ಮ ಯುವ ಪೀಳಿಗೆಗಳಿಗೆ ತಲುಪಿಸಬೇಕು: ಸಭಾಪತಿ ಯುಟಿ.ಖಾದರ್
ದುಬೈ: ಕರ್ನಾಟಕ ಜನಪದ ಪರಿಷತ್ ಯುಎಇ ಘಟಕದ ವತಿಯಿಂದ ದುಬೈ ನಾದ್ ಅಲ್ ಶೀಬಾ ಜಿಮ್ಸ್ ಮಾರ್ಡನ್ ಅಕಾಡೆಮಿಯಲ್ಲಿ ಅಂತರರಾಷ್ಟ್ರೀಯ ಜನಪದ ಉತ್ಸವ – 2025” ಭವ್ಯವಾಗಿ ನೆರವೇರಿತು. ಕರ್ನಾಟಕ ಜನಪದ ಪರಿಷತ್ ಬೆಂಗಳೂರು ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸ್ಥಾಪಿತವಾದ ಯುಎಇ ಘಟಕ, ರಾಜ್ಯದ ಜೀವಂತ ಜನಪದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಉಳಿಸಿ ಬೆಳೆಸುವ ಕನಸನ್ನು ಈ ಉತ್ಸವದ ಮೂಲಕ ಯಶಸ್ವಿಯಾಗಿ ಅನಾವರಣಗೊಳಿಸಲಾಯಿತು.

ಯುಎಇ ಘಟಕ ಉದ್ಘಾಟನೆ, ಉತ್ಸವಕ್ಕೆ ಚಾಲನೆ ಮತ್ತು ಪದಗ್ರಹಣ ಸಮಾರಂಭ: ಮೊತ್ತ ಮೊದಲಬಾರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಘಟಕವೊಂದು ಕರ್ನಾಟಕದಿಂದ ಹೊರಗೆ ಅದೂ ವಿದೇಶದದಲ್ಲಿ ಸ್ಥಾಪನೆ ಗೊಂಡಿದ್ದು ಅದು ಕರ್ನಾಟಕ ಜಾನಪದ ಪರಿಷತ್ ಯು. ಎ. ಇ ಘಟಕವಾಗಿದೆ . ಜಾನಪದ ಪರಿಷತ್ ಬೆಂಗಳೂರು ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಆದಿತ್ಯ ನಂಜೆರಾಜ್ ಮತ್ತು ಬೆಂಗಳೂರು ಕೇಂದ್ರದ ಅಧ್ಯಕ್ಷರಾದ ಶ್ರೀ ಬೋರಲಿಂಗಯ್ಯನವರು ಯುಎಇ ಘಟಕದ ಲಾಂಛನ ವನ್ನು ಲೋಕಾರ್ಪಣೆ ಗೊಳಿಸುವುದರ ಮೂಲಕ ಘಟಕವನ್ನು ಉದ್ಘಾಟಿಸಿದರು . ನಂತರ ಮಾತನಾಡುತ್ತಾ ಜಾನಪದ ಪರಿಷತ್ ನ ವಿಸ್ತರಣೆಗೆ ಹರ್ಷ ಪಡಿಸುತ್ತಾ ಕೇಂದ್ರ ಸಂಸ್ಥೆಯಿಂದ ಈ ಘಟಕಕ್ಕೆ ಸರ್ವ ವಿಧದ ಸಹಕಾರ ನೀಡುವುದಾಗಿ ಈರ್ವರು ಭರವಸೆ ನೀಡಿದರು.
ಅಂತರಾಷ್ಟ್ರೀವ ಜಾನಪದ ಉತ್ಸವ 2025 ಅನ್ನು ಸಂಪ್ರಾದಾಯಿಕವಾಗಿ ಸಮೃದ್ಧಿಯ ಸಂಕೇತವಾದ ತೆಂಗಿನ ಸಿಂಗಾರ ಹೂವನ್ನು ಅರಳಿಸುವುದರ ಮೂಲಕ ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಉದ್ಘಾಟಿಸಿದರು. ನಂತರ ಅವರು ಮಾತನಾಡುತ್ತಾ ಮರೆವಿನಂಚಿನಲ್ಲಿರುವ ಜಾನಪದ ಕಲೆಗಳು ಉಳಿಸುವುದು ನಮ್ಮ ಕರ್ತವ್ಯ ಅದರ ಜೊತೆಯಲ್ಲಿ ಇಂತಹ ಅಂತರಾಷ್ಟ್ರೀಯ ಮಟ್ಟದ ಜನಪದ ಕಾರ್ಯಕ್ರಮಗಳು ಪ್ರತಿ ವರ್ಷವು ನಡೆಸುವುದರ ಜೊತೆಗೆ ಉಳಿಸುವ ಪ್ರಯತ್ನ ಮಾಡಬೇಕು ಎಂದರು. ನಂತರ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷರಾದ ಎಚ್. ಸಿ. ಬೋರಲಿಂಗಯ್ಯ ಅವರು ನೂತನ ಘಟಕದ ಅಧ್ಯಕ್ಷರಾದ ಸದನ್ ದಾಸ್ ಅವರಿಗೆ ಪ್ರಮಾಣವಚನ ಬೋದಿಸಿದರು ಅಂತೇಯೇ ಪ್ರಮಾಣ ವಚನ ಸ್ವೀಕರಿಸಿದ ಯುಎಇ ಘಟಕದ ಅಧ್ಯಕ್ಷರು ಘಟಕದ ಇತರ ಪದಾಧೀಕಾರಿಗಳಿಗೆ ಪ್ರಮಾಣವಚನ ಬೋದಿಸಿದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಕಲಾವಿದರು ಹಾಗೂ ಕನ್ನಡಿಗರ ಸಂಘದ ಪ್ರತಿನಿಧಿಗಳು ಭಾಗವಹಿಸಿ ಉತ್ಸವಕ್ಕೆ ಸಾಂಸ್ಕೃತಿಕ ಸೊಬಗು ತುಂಬಿದರು.
ಅಂತರಾಷ್ಟ್ರೀಯ ಜಾನಪದ ಉತ್ಸವದ ಸಭಾಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಸಭಾಕಾರ್ಯಕ್ರಮನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನ ಸಭೆಯ ಸಭಾಪತಿಗಳಾದ ಯುಟಿ.ಖಾದರ್ ಅವರು ನೂತನವಾಗಿ ಆರಂಭಗೊಂಡ ಯುಎಇ ಘಟಕಕ್ಕೆ ಶುಭ ಹಾರೈಸುವುದರ ಜೊತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೆ ಒಂದು ಭಾಗ್ಯ ಎಂದರು. ಜಾನಪದ ಕಲೆಗಳ ಬಗ್ಗೆ ಅರಿವು ನಮ್ಮ ಯುವ ಪಿಳಿಗೆಗಳಿಗೆ ತಲುಪಿಸಬೇಕು , ಫೋಷಕರು ಪ್ರತಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುದರ ಜೊತೆಗೆ ಈ ಶ್ರೀಮಂತ ಕಲೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಮತ್ತು ಇಂತಹ ಕಾರ್ಯಕ್ರಮಗಳಿಗೆ ಹೆತ್ತವರು ಮಕ್ಕಳನ್ನು ಕರೆತಂದರೆ ಮಕ್ಕಳಿಗೆ ಈ ಕಲೆಗಳ ಬಗ್ಗೆ ಜ್ಞಾನ ಹೆಚ್ಚುತ್ತದೆ ಎಂದರು. ಅಂತಯೇ ಮತ್ತೋರ್ವ ಮುಖ್ಯ ಅತಿಥಿಗಳಾದ ದುಬಾಯಿ ಭಾರತೀಯ ರಾಯಬಾರಿ ಕಛೇರಿ ಶ್ರೀ ಬ್ರೀಜೆಂದ್ರ ಸಿಂಗ್ ಮಾತನಾಡಿ ಕಾರ್ಯಕ್ರಮಕ್ಕೆ ಮತ್ತು ನೂತನ ತಂಡ ಶುಭಹಾರೈಸಿ ಇಂತಹ ಉತ್ತಮ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು. ಅಂತೇಯೇ ಕಾರ್ಯಕ್ರಮದ ಅಧ್ಯಕ್ಷರ ಮಾತನಾಡಿದ ಶ್ರೀ ಎಚ್.ಸಿ. ಬೋರಲಿಂಗಯ್ಯನವರು ಜಾನಪದ ಪರಿಷತ್ ಘಟಕ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿದೆ ಹೊರ ರಾಜ್ಯದಲ್ಲಿದೆ ಆದರೆ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಘಾಟನೆಗೊಂಡಿರುವ ಈ ಕಲೆಗೆ ಸಿಕ್ಕಿರುವ ನಿಜವಾದ ಗೌರವ ಎಂದರು.
ಈ ಘಟಕವನ್ನು ಇಲ್ಲಿ ಸ್ಥಾಪಿಸಿರುವ ಉದ್ದೇಶವನ್ನು ಎಳೆ ಎಳೆಯಾಗಿ ವಿವರಿಸುತ್ತಾ ಮುಂದಿನ ದಿನಗಳಲ್ಲಿ ಘಟಕದಿಂದ ಹಲವಾರು ಕಾರ್ಯಕ್ರಮಗಳು ನಡೆಯುವುದರ ಜೊತೆಗೆ ಕರ್ನಾಟಕದಲ್ಲಿರುವ 168 ಜಾನಪದ ಕಲೆಗಳ ಪ್ರಕಾರಗಳ ಜೀವಂತವಾಗಿಡಲು ಘಟಕದ ಪ್ರತಿ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದರು.
ಅಂತೇಯೆ ಡಾ. ಬಿ.ಆರ್. ಶೆಟ್ಟಿ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಆದಿತ್ಯ ನಂಜರಾಜ, ಗೋವಿಂದ ಬಾಬು ಪೂಜಾರಿ ಮತ್ತು ಘಟಕದ ಗೌರವ ಸಲಹೆಗಾರರಾದ ಡಾ. ವಿ.ಕನಕರಾಜ, ಗಣಪತಿ ಭಟ್ , ಮಂಜುನಾಥ ರಾಜನ್ , ವಾಸು ಕುಮಾರ್ ಶೆಟ್ಟಿ , ಇಬ್ರಾಹಿಂ ಖಲೀಲ್ ಅರಿಮಲ , ಜೋಸೆಫ್ ಮಥಾಯಿಸ್ ಘಟಕದ ಕಾರ್ಯಧ್ಯಕ್ಷರು ಅಶ್ರಫ್ ಶಾ ಮಂತೂರು, ಕಾರ್ಯದರ್ಶಿ ಆರತಿ ಅಡಿಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕನ್ನಡ ಸಂಘಟನೆಗಳ ನಾಯಕರು, ಸಮುದಾಯ ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉತ್ಸವಕ್ಕೆ ಬೆಂಬಲ ವ್ಯಕ್ತಪಡಿಸಿದರುರ್ನಾಟಕ ಜನಪದ ಪರಿಷತ್ ಶಿಫಾರಸಿನ ಮೇರೆಗೆ “ಡಾ. ಎಚ್. ಎಲ್. ನಾಗೇಗೌಡ ಅಂತರರಾಷ್ಟ್ರೀಯ ಜನಪದ ಪ್ರಶಸ್ತಿ” ಯನ್ನು ಜನಪ್ರಿಯ ಕಲಾವಿದರಾದ ಪದ್ಮಶ್ರೀ ರಾಣಿ ಮಾಚಯ್ಯ (ಕೊಡಗು ) ಹಾಗೂ ಮಲವಳ್ಳಿ ಮಹದೇವ ಸ್ವಾಮಿ (ಮೈಸೂರು) ಅವರಿಗೆ ಪ್ರದಾನ ಮಾಡಲಾಯಿತು. ಪ್ರೊ. ಕೆ. ಇ. ರಾಧಾಕೃಷ್ಣ ಅವರಿಗೆ “ಗುರು ಸಾವ್ಯಸಾಚಿ” ಪ್ರಶಸ್ತಿ, ವರದರಾಜ ಶೆಟ್ಟಿಗೆ ಕನ್ನಡ ಕಲಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮಕ್ಕೆ ಘಟಕದ ಅಧ್ಯಕ್ಷರಾದ ಶ್ರೀಸದಾನ್ ದಾಸ್ ಅತಿಥಿಗಳನ್ನ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿಯಾದ ಆರತಿ ಅಡಿಗ ವಂದಿಸಿದರು ಮತ್ತು ಕಾರ್ಯಕ್ರಮದ ನಿರ್ದೇಶಕರಾದ ಬಾಸುಮ ಕೊಡಗು ನಿರೂಪಿಸಿದರು.
ಸಭಾಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಖ್ಯಾತ ಜನಪದ ಕಲಾವಿದರು ಹಾಗೂ ಯುಎಇಯಲ್ಲಿನ ಅನಿವಾಸಿ ಕನ್ನಡಿಗ ಕಲಾವಿದರು ನೀಡಿದ ಮನೋರಂಜನಾತ್ಮಕ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು.
ಪ್ರದರ್ಶನದಲ್ಲಿ ಶ್ರೀ ದುರ್ಗಾ ಡಕ್ಕೆ ಕುಣಿತ ತಂಡ – ಭಟ್ಕಳ, ಹುಲಿ ವೇಷ – ನಿತಶ್ರೀ ಜಾನಪದ ಕಲಾ ತಂಡ – ಕಾಪು,
ಗೌತಮೇಶ್ವರ ಯುವಕ ಡೊಳ್ಳು ಕುಣಿತ – ಸಾಗರ , ವನಸುಮ ವೇದಿಕೆ – ಕಟಪಾಡಿ
ಜಾನಪದ ಪರಿಷತ್ – ಯುಎಇ ಘಟಕದ ಅನಿವಾಸಿ ಕಲಾವಿದರ ತಂಡಗಳು ಭಾಗವಹಿಸಿದರು.
ಡೊಳ್ಳು ಕುಣಿತ, ಹುಲಿ ವೇಷ, ನೃತ್ಯಸಂಗೀತ, ಬಣ್ಣದ ವೇಷಭೂಷಣಗಳಿಂದ ಮೈಮರೆಸುವ ಶೈಲಿಯಲ್ಲಿ ಕಲಾವಿದರು ತಮ್ಮ ಕಲೆ ತೋರಿದರು. ಕನ್ನಡ ನುಡಿಗಟ್ಟು, ಹಳೆ ನಾಟ್ಯಸಂಗೀತ, ರಂಗಸೂಚನೆಗಳಿಂದ ಕಾರ್ಯಕ್ರಮವು ಜಾನಪದ ಸಾಂಸ್ಕೃತಿಕ ಹಬ್ಬದ ವಾತಾವರಣ ಸೃಷ್ಟಿಸಿತು.
ಕರ್ನಾಟಕ ಜನಪದ ಪರಿಷತ್ ಬೆಂಗಳೂರು ಅಧ್ಯಕ್ಷ ಎಚ್. ಸಿ. ಬೋರಲಿಂಗಯ್ಯ, ಬಾಸುಮ ಕೊಡಗು ಉತ್ಸವ ನಿರ್ದೇಶಕರು ಮತ್ತು ಘಟಕದ ಅಧ್ಯಕ್ಷರು ಸಾದಾನ್ ದಾಸ್ ಹಾಗೂ ಉಪಾಧ್ಯಕ್ಷರಾದ ನೋಯೇಲ್ ಅಲ್ಮೆಡಾ , ದೀನೇಶ್ ಶೆಟ್ಟಿ ಕೊಟ್ಟಿಂಜ , ಡಾ.ವಿಜಯ ಗುಜ್ಜಾರ ಮತ್ತು ಜೊತೆ ಕಾರ್ಯದರ್ಶಿ ಜಸ್ಮಿತಾ ವಿವೇಕ್ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಭಾಗ್ಯರಾಜ್ ರಾವ್ , ಶಂಕರ್ ಬಬಲೇಶ್ವರ್ ಮಾಧ್ಯಮ ಸಲಹೆಗಾರರಾದ ವಿವೇಕ್ ಆನಂದ್ , ವಿಘ್ನೇಶ್ ಕುಂದಾಪುರ ಅಂತೇಯೇ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಗನ್ನಾಥ ಬೆಳ್ಳಾರೆ, ಅಬ್ದುಲ್ ಹಕೀಮ್, ಸುಗಂದರಾಜ್ ಬೇಕಲ್, ಚೇತನ್ ಕುಮಾರ್ ಸುಬ್ರಹ್ಮಣ್ಯ, ಶ್ರೀ ಕೃಷ್ಣ ಮುಲುಗುಂಡು, ಖಾಂತ ಕೃಷ್ಣೆಗೌಡ, ವಿನಾಯಕ ಹೆಗ್ಡೆ, ಸಂತೋಷ್ ಶೆಟ್ಟಿ ಪೊಳಲಿ, ಅರುಣ್ ಕುಮಾರ್, ರವಿ ನಾಗೂರು, ವೆಂಕಟರಮಣ ಕಾಮತ್ ಉತ್ಸವದ ಎಲ್ಲಾ ಹಂತಗಳನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆರತಿ ಅಡಿಗ ಯುಎಇ ಕನ್ನಡ ಸಂಘಟನೆಗಳು, ಸಾಂಸ್ಕೃತಿಕ ಸಂಘಗಳು, ಪ್ರಾಯೋಜಕರು ಹಾಗೂ ಸ್ವಯಂಸೇವಕರಿಗೆ ಧನ್ಯವಾದ ಸಲ್ಲಿಸಿ, “ಜನಪದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಉಳಿಸಲು ಸಮೂಹ ಪ್ರಯತ್ನ ಅವಶ್ಯಕ” ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಮುಕ್ತಾಯಗೊಳಿಸಿದರು.
Comments are closed.